ಕೇರಳದಲ್ಲಿ ಎರಡನೇ ಮಂಕಿಪಾಕ್ಸ್ ಪ್ರಕರಣ ಪತ್ತೆ | ಐದು ಜಿಲ್ಲೆಗಳಲ್ಲಿ ಕಟ್ಟೆಚ್ಚರ

ಕೇರಳದಲ್ಲಿ ದೇಶದ ಎರಡನೇ ಮಂಕಿಪ್ಸ್ ಪ್ರಕರಣ ಪತ್ತೆಯಾಗಿದೆ, ಕೇರಳದ ಆರೋಗ್ಯ ಸಚಿವೆ ವೀಣಾ ಚಾರ್ಜ್ ಈ ಕುರಿತು ಮಾಹಿತಿ ನೀಡಿದ್ದಾರೆ.

 

ಕೇರಳ ಸರ್ಕಾರವು ಮಂಕಿಪಾಕ್ಸ್ ಹರಡದಂತೆ ತೀವ್ರ ನಿಗಾ ಇರಿಸಿದ್ದು, ಐದು ಜಿಲ್ಲೆಗಳಿಗೆ ಅಲರ್ಟ್ ಘೋಷಿಸಲಾಗಿದೆ. ಒಂದೆರಡು ದಿನಗಳ ಹಿಂದಷ್ಟೇ ಯುಎಇಯಿಂದ ಬಂದಿದ್ದ ವ್ಯಕ್ತಿಯಲ್ಲಿ ಮಂಕಿಪಾಕ್ಸ್
ದೃಢಪಟ್ಟಿತ್ತು.

ದುಬೈನಿಂದ ಜುಲೈ 13 ರಂದು ಕೇರಳಕ್ಕೆ ಬಂದಿದ್ದ 31 ವರ್ಷದ ವ್ಯಕ್ತಿಗೆ ಮಂಕಿಪಾಕ್ಸ್ ಸೋಂಕು ತಗುಲಿದೆ. ಅವರನ್ನು ಕಣ್ಣೂರಿನಲ್ಲಿರುವ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೆಯೇ ಅವರ ಪ್ರಾಥಮಿಕ ಕಾಂಟ್ಯಾಕ್ಟ್ ನಲ್ಲಿದ್ದಂತಹವರನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದರು.

Leave A Reply

Your email address will not be published.