ಕೇರಳ ಪ್ರವಾಸದಲ್ಲಿ ನೋಡಲೇ ಬೇಕಾದ ಸ್ಥಳಗಳಿವು
ಹೆಚ್ಚಿನ ಉತ್ತರ ಭಾರತದ ಜನರು ದಕ್ಷಿಣ ಭಾರತಕ್ಕೆ ಪ್ರವಾಸ ಹೋಗುವುದೆಂದರೆ ಕೇರಳವನ್ನೇ ಆಯ್ಕೆ ಮಾಡಿ ಕೊಳ್ಳುತ್ತಾರೆ. ದೇವರ ನಾಡಾಗಿರುವ ಕೇರಳವು ಪ್ರಾಕೃತಿಕ ಸೌಂದರ್ಯ ಹಾಗೂ ತನ್ನ ಸಂಸ್ಕೃತಿಗೆ ಹೆಸರುವಾಸಿಯಾಗಿರುವಂತಹ ನಾಡು. ನಾವಿಂದು ಕೇರಳದ ಕೆಲವು ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ನೀವು ಯಾವತ್ತಾದರೂ ಕೇರಳಕ್ಕೆ ಪ್ರವಾಸ ಕೈಗೊಳ್ಳಬೇಕೆಂದಿದದರೆ ಈ ಪ್ರಮುಖ ತಾಣಗಳಿಗೆ ಭೇಟಿ ನೀಡೋದನ್ನು ಮರೆಯ ಬೇಡಿ.
ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ಅಷ್ಟಮುಡಿ ಸರೋವರವು ಮಳೆಗಾಲದಲ್ಲಿ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ. ಈ ಸರೋವರವು 8 ಕಾಲುವೆಗಳನ್ನು ಹೊಂದಿದೆ. ಆದ್ದರಿಂದ ಇದನ್ನು ಅಷ್ಟಮುಡಿ ಎಂದು ಕರೆಯಲಾಗುತ್ತದೆ. ಈ ಸರೋವರದ ಹೌಸ್ ಬೋಟ್ ಸವಾರಿ ಬಹಳ ಜನಪ್ರಿಯವಾಗಿದೆ.
ಕೇರಳದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾದ ತೇಕ್ಕಡಿಯ ಪೆರಿಯಾರ್ ರಾಷ್ಟ್ರೀಯ ಉದ್ಯಾನವನವು ಭಾರತದ ಅತ್ಯುತ್ತಮ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿದೆ. ಇಲ್ಲಿ ನೀವು ಬಿದಿರಿನ ರಾಫ್ಟಿಂಗ್, ಜಂಗಲ್ ನೈಟ್ ಪೆಟ್ರೋಲಿಂಗ್, ಜೀಪ್ ಸಫಾರಿ, ಬೋಟಿಂಗ್ ಮುಂತಾದ ಚಟುವಟಿಕೆಗಳನ್ನು ಮಾಡಬಹುದು.
ಕೇರಳದಲ್ಲಿ ಭೇಟಿ ನೀಡಲು ವಯನಾಡ್ ಅತ್ಯಂತ ರೋಮಾಂಚಕಾರಿ ಮತ್ತು ರೋಮ್ಯಾಂಟಿಕ್ ಸ್ಥಳಗಳಲ್ಲಿ ಒಂದಾಗಿದೆ. ವಯನಾಡ್ ಐತಿಹಾಸಿಕ ಗುಹೆಗಳು, ಜಲಪಾತಗಳು, ಔಷಧೀಯ ಸಸ್ಯಗಳು, ಅಭಯಾರಣ್ಯ, ರೆಸಾರ್ಟ್‌ಗಳು ಹಾಗೂ ಹೋಂ ಸ್ಟೇ ಗಳಿಗೆ ಪ್ರಸಿದ್ಧಿ ಹೊಂದಿದೆ. ವಯನಾಡು ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಗಡಿಭಾಗದಲ್ಲಿರುವದರಿಂದ ಪ್ರವಾಸಿಗರಿಗೆ ಇಲ್ಲಿ ಸಾಕಷ್ಟು ಆಯ್ಕೆಗಳಿವೆ.
ದಕ್ಷಿಣ ಭಾರತದ ಅತಿದೊಡ್ಡ ಚಹಾ ತೋಟ ಪ್ರದೇಶಗಳಲ್ಲಿ ಒಂದಾದ ಮುನ್ನಾರ್ ಕೇರಳದ ಅತ್ಯಂತ ಸುಂದರವಾದ ಮತ್ತು ಜನಪ್ರಿಯ ಗಿರಿಧಾಮಗಳಲ್ಲಿ ಒಂದಾಗಿದೆ.
.
.