ಬೈಕಿನಲ್ಲಿ ಹೋಗುತ್ತಿದ್ದಾಗ ಲಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಯುವಕ !

Share the Article

ಮನುಷ್ಯ ಹೊಟ್ಟೆಪಾಡಿಗಾಗಿ ಕೆಲಸ ಮಾಡಬೇಕು ನಿಜ. ಹಾಗಂತ ಕೆಲಸನೇ ಎಲ್ಲ ಅಲ್ಲ. ಕುಟುಂಬ, ಸಂಸಾರ, ಫ್ರೆಂಡ್ಸ್ ಎಲ್ಲರಿಗೂ ನಾವು ಸಮಯ ನೀಡಬೇಕು. ಆದರೂ ಈ ಮಾರ್ಡನ್ ಕಾಲದಲ್ಲಿ ಕೆಲಸ ಎಷ್ಟೇ ಹೊತ್ತು ಮಾಡಿದರೂ ಮುಗಿಯುವ ಲಕ್ಷಣಗಳು ಕೆಲವೊಮ್ಮೆ ಕಾಣದೇ ಇರುತ್ತೆ. ಇದಕ್ಕೆ ಕೆಲಸದ ಒತ್ತಡ, ಡೆಡ್ ಲೈನ್ ಎಲ್ಲಾ ಗಮನಕ್ಕೆ ತಗೋಬೇಕಾಗುತ್ತದೆ. ಆದರೆ ಇದೆಲ್ಲಾ ಆಫೀಸಿನಲ್ಲಿ ಮಾಡಬಹುದು ಅಥವಾ ಅಬ್ಬಬ್ಬಾ ಎಂದರೆ ಮನೆಯಲ್ಲಾದರೂ ಹೆಚ್ಚುವರಿ ಕೆಲಸ ಮಾಡಬಹುದು. ಆದರೆ ರಸ್ತೆ ಮಧ್ಯೆ? ಅದು ಕೂಡಾ ಬೈಕ್ ನಲ್ಲಿ ಕೆಲಸ ಮಾಡುವುದು…ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಆದರೆ ಇಂಥದ್ದೊಂದು ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಇಲ್ಲೊಬ್ಬ ವ್ಯಕ್ತಿ ಫ್ಲೈಓವರ್ ನ ಮಧ್ಯದಲ್ಲಿ ಬೈಕ್ ಮೇಲೆ ಕುಳಿತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದರಲ್ಲೇನು ವಿಶೇಷ ಅಂತೀರಾ ?
ಆ ವ್ಯಕ್ತಿ ಬೈಕಿನಲ್ಲಿ ಕುಳಿತಾಗ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಪಾಪ ಏನು ಅವಸರನೋ, ಏನು ಡೆಡ್ ಲೈನೋ ಅಥವಾ ಹೆಂಡತಿ ಮನೆಯಲ್ಲಿ ಆಫೀಸ್ ಕೆಲಸ ಮಾಡಲು ಬಿಡುವುದಿಲ್ಲವೋ ಅದಕ್ಕೆ ರಸ್ತೆಯಲ್ಲಿಯೇ ಮಾಡಿ ಬಿಡುವ ಧಾವಂತವೋ? ಅಂತೂ ಕೆಲಸ ಮಾಡಿದ್ದಾನೆ.

ಹರ್ಷಮೀತ್ ಸಿಂಗ್ ಅವರು ಈ ಫೋಟೋವನ್ನು ಲಿಂಕ್ಡ್‌ ಇನ್‌ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಗೆ ನೆಟ್ಟಿಗರು ಶಬ್ಬಾಸ್‌ ಅಂದಿದ್ದಾರೆ.

ಬೆಂಗಳೂರಿನ ಅತೀ ಹೆಚ್ಚು ವಾಹನ ದಟ್ಟಣೆ ಇರುವ ಫ್ಲೈಓವರ್ ನಲ್ಲಿ ಬೈಕ್‌ ನ ಹಿಂಬದಿಯಲ್ಲಿ ಕುಳಿತು ಲಾಪ್‌ ಟಾಪ್‌ ತೆಗೆದು ಕೆಲಸ ಮಾಡುತ್ತಿದ್ದಾನೆ. ಸಹೋದ್ಯೋಗಿಗಳ ಸುರಕ್ಷಿತಯನ್ನು ಪಣಕ್ಕಿಟ್ಟು ಡೆಡ್‌ ಲೈನ್‌ ಒಳಗೆ ಕೆಲಸ ಆಗಬೇಕೆಂದು ಒತ್ತಡ ಹೇರುವ ಬಾಸ್‌ ನೀವು ಆಗಿದ್ದರೆ, ಇದು ನೀವು ಮತ್ತೊಮ್ಮೆ ಯೋಚಿಸಬೇಕಾದ ಸಮಯ. ಇದು ಅರ್ಜೆಂಟ್‌ ಅದಷ್ಟು ಬೇಗ ಮಾಡಿಯೆಂದು ಎಂಬ ಸಹೋದ್ಯೋಗಿಗಳಿಗೆ ಸ್ವಲ್ಪ ಹುಷಾರಾಗಿ ಹೇಳಿ. ಯಾಕೆಂದರೆ ನೀವು ಆ ರೀತಿ ಹೇಳಿದಾಗ ಅದು ಅವರ ಬದುಕಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಅರಿವು ನಿಮಗೆ ಇಲ್ಲ ಎಂದು ಹರ್ಷಮೀತ್ ಸಿಂಗ್ ಈ ಪೋಸ್ಟ್‌ ಶೇರ್‌ ಮಾಡಿ ಕ್ಯಾಪ್ಶನ್ನಲ್ಲಿ ಬರೆಯಲಾಗಿದೆ.

Leave A Reply