ಕಡಬ: ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೀಲ್ ಚಯರ್ ವಿತರಣೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಕಡಬ ವಲಯದ ಅಡ್ಡಗದ್ದೆ ಕಾರ್ಯಕ್ಷೇತ್ರದ ಅಜ್ಮೀರ್ ಸಂಘದ ಮೈಮುನರವರ ತಾಯಿ ಐಸಮ್ಮರವರು ವಯಸ್ಸಾಗಿ ನಡೆದಾಡಲು ಸಾಧ್ಶವಾಗದ ಸ್ಥಿತಿಯಲ್ಲಿದ್ದು ಮಗಳು ಮೈಮುನ ಹಾಗೂ ಮೊಮ್ಮಗ ಮಾತ್ರ ಇದ್ದತೀರಾ ಬಡತನದ ಕುಟುಂಬವಾಗಿದ್ದು ಐಸಮ್ಮರವರಿಗೆ ಆಸರೆ ಮಗಳು ಮೈಮುನರವರೇ ಆಗಿರುತ್ತಾರೆ. ವೃದ್ದೆ ಐಸಮ್ಮರವರ ದಿನನಿತ್ಶದ ಕಾರ್ಯಗಳಿಗೆ ಮಗಳನ್ನೇ ಅವಲಂಬಿತರಾಗಿದ್ದು ಐಸಮ್ಮ ರವರ ಸಮಸ್ಶೆಯನ್ನು ಪರಿಶೀಲಿಸಿದ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಹಾಗೂ ಸ್ಥಳೀಯ ಸೇವಾಪ್ರತಿನಿಧಿಯವರಾದ ಸವಿತಾ ಹಾಗೂ ನಳಿನಿಯವರ ಪೂಜ್ಶ ಹೆಗ್ಗಡೆಯವರಿಗೆ ಮನವಿಯನ್ನು ನೀಡಿದ್ದು ಜನಮಂಗಳ ಕಾರ್ಯಕ್ರಮದನ್ವಯ ಮನೆಯ ಹೊರಗಡೆ ಅಡ್ಡಾಡಲು ವೀಲ್ ಚಯರನ್ನು ಪೂಜ್ಶರು ಮಂಜೂರುಗೊಳಿಸಿರುತ್ತಾರೆ.
ಕಡಬ ವಲಯದ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಹಾಗೂ ಸೇವಾಪ್ರತಿನಿಧಿ ನಳಿಯವರು ಮೈಮುನರವರ ಮೂಲಕ ತಾಯಿ ಐಸಮ್ಮರವರಿಗೆ ವೀಲ್ ಚಯರ್ ವಿತರಿಸಿ ಇದರ ಸದುಪಯೋಗ ಪಡಕೊಳ್ಳುವಂತೆ ತಿಳಿಸಿದ್ದು,
ತಾಯಿ ನಡೆದಾಡಲು ವೀಲ್ ಚಯರ್ ನೀಡಿರುವ ಪೂಜ್ಶ ಹೆಗ್ಗಡೆಯವರಿಗೆ ಮೈಮುನರವರು ಆನಂದಬಾಸ್ಪದೊಂದಿಗೆ ಅಭಿನಂದನೆ ತಿಳಿಸಿದರು.