ಲೀನಾ ಮಣಿಮೇಕಲೈಗೆ ಸಮನ್ಸ್ ಜಾರಿ ; ಎಂದು ವಿಚಾರಣೆ
ಕಾಳಿ ಚಿತ್ರದ ನಿರ್ದೇಶಕಿ ಲೀನಾ ಮಣಿಮೇಕಲೈಗೆ ದೆಹಲಿ ಹೈಕೋರ್ಟ್‌ನಿಂದ ಸಮನ್ಸ್ ಜಾರಿ ಮಾಡಿದ್ದು, ಆಗಸ್ಟ್ 6ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಕಾಳಿ ಸಿನಿಮಾ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಮತ್ತು ಇತರರಿಗೆ ಸಮನ್ಸ್ ಜಾರಿ ಮಾಡಿದೆ. ಇನ್ನು ಆಗಸ್ಟ್ 6ರಂದು ವಿಚಾರಣೆ ಹಾಜರಾಗುವಂತೆ ತಿಳಿಸಿದೆ.
ಇನ್ನು ಪೋಸ್ಟರ್ ಮತ್ತು ವೀಡಿಯೊ ಮತ್ತು ಪ್ರಶ್ನೆಯಲ್ಲಿರುವ ಟ್ವೀಟ್ʼನಲ್ಲಿ ಚಿತ್ರಿಸಲಾದ ರೀತಿಯಲ್ಲಿ ಕಾಳಿ ದೇವಿಯನ್ನ ಚಿತ್ರಿಸದಂತೆ ತಾತ್ಕಾಲಿಕವಾಗಿ ನಿರ್ಬಂಧಿಸಲು ವಾದಿಯು ಮಧ್ಯಂತರ ತಡೆಯಾಜ್ಞೆಯನ್ನ ಕೋರಿದ್ದಾರೆ.
ಹಿಂದೂ ದೇವತೆಯನ್ನು ‘ಅನಗತ್ಯ ರೀತಿಯಲ್ಲಿ’ ಚಿತ್ರಿಸಿದ್ದಕ್ಕಾಗಿ ಮತ್ತು ದೇವಿಯು ಸಿಗರೇಟು ಸೇದುವುದನ್ನು ತೋರಿಸುವ ಚಿತ್ರದ ಪೋಸ್ಟರ್ ಮತ್ತು ಪ್ರಚಾರದ ವೀಡಿಯೊಕ್ಕಾಗಿ ಮಣಿಮೇಕಲೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಣಿಮೇಕಲೈ ಮತ್ತು ಇತರರ ವಿರುದ್ಧ ಶಾಶ್ವತ ತಡೆಯಾಜ್ಞೆಗಾಗಿ ವಾದಿ ದಾವೆ ಹೂಡಿದ್ದಾರೆ.
ವಾದಿಯ ಪ್ರಕಾರ, ಚಿತ್ರದ ಪೋಸ್ಟರ್ ಧಾರ್ಮಿಕ ಭಾವನೆಗಳನ್ನು ನೋಯಿಸುತ್ತದೆ ಮತ್ತು ನೈತಿಕತೆ ಮತ್ತು ಸಭ್ಯತೆಯ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ. ಇದಲ್ಲದೆ, ಈ ಪೋಸ್ಟರ್ ಅನ್ನು ಮಣಿಮೇಕಲೈ ತನ್ನ ಟ್ವಿಟರ್ ಹ್ಯಾಂಡಲ್ನಿಂದ ಟ್ವೀಟ್ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ನ್ಯಾಯಾಲಯವು ಆಗಸ್ಟ್ 6 ರಂದು ಹೆಚ್ಚಿನ ವಿಚಾರಣೆಗಾಗಿ ಸಮನ್ಸ್ ಜಾರಿ ಮಾಡಿದೆ.