ಫೇಸ್ ಬುಕ್ ಮೂಲಕ ಪರಿಚಯವಾದ ಗೆಳತಿಯಿಂದ ಯುವಕನಿಗೆ ಬ್ಲಾಕ್ ಮೇಲ್ ; 5 ಲಕ್ಷ ರೂಪಾಯಿ ಸುಲಿಗೆ

Share the Article

ಬೆಂಗಳೂರು: ಫೇಸ್ ಬುಕ್ ಮೂಲಕ ಪರಿಚಯವಾದ ಯುವತಿಯೊಬ್ಬಳು ತನ್ನ ಸಹಚರರೊಂದಿಗೆ ಸೇರಿ ಯುವಕನೋರ್ವನನ್ನು ಬ್ಲಾಕ್ ಮೇಲ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಫೇಸ್ ಬುಕ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಆತನೊಂದಿಗೆ ಸಲುಗೆಯಿಂದ ಮಾತನಾಡಿ, ಲೈಂಗಿಕವಾಗಿ ಪ್ರಚೋದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ನಗ್ನ ಚಿತ್ರ ಕಳುಹಿಸಿ ಕೊಡುವಂತೆ ಒತ್ತಡ ಹೇರಿದ್ದಳು. ನಗ್ನ ಚಿತ್ರ ಕಳುಹಿಸಿದ ನಂತರ ಸಿಬಿಐ ಅಂತ ಕಾಲ್ ಮಾಡಿದ ಕೆಲವರು, ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೊಬೈಲ್ ನಲ್ಲಿ ನಿಮ್ಮ ನಗ್ನ ಚಿತ್ರಗಳು ದೊರೆತಿದೆ. ಇದನ್ನು ಮುಚ್ಚಿ ಹಾಕಲು 5 ಲಕ್ಷ ರೂಪಾಯಿ ಬೇಡಿಕೆ ನೀಡಿದ್ದರು ಎಂದು ದೂರಲಾಗಿದೆ.

ಐದು ಲಕ್ಷ ರೂಪಾಯಿ ಕೊಟ್ಟ ಬಳಿಕ ಕೂಡ ಬ್ಲಾಕ್ ಮೇಲ್ ಮುಂದುವರಿದ ಕಾರಣ ಯುವಕ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದು, ಬೆಂಗಳೂರಿನ ಅಗ್ನೇಯ ಭಾಗದಲ್ಲಿ ಬರುವ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

Leave A Reply