Home ದಕ್ಷಿಣ ಕನ್ನಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ತಮ್ಮನನ್ನು ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲು ಹೇಳಿದ್ದೆ : ಡಿಕೆಶಿ

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ತಮ್ಮನನ್ನು ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲು ಹೇಳಿದ್ದೆ : ಡಿಕೆಶಿ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ತಮ್ಮನಿಗೆ ನಾನು ‘ಬನ್ನಿ, ಬಂದು ಕ್ಷೇತ್ರಕ್ಕೆ ನಿಲ್ಲಿ ಅಂತ ಹಿಂದೆಯೇ ಹೇಳಿದ್ದೆ. ಆದರೆ ಅವರು ತಮ್ಮ ಸೇವೆಗಳನ್ನ ಹಾಳು ಮಾಡಲು ಇಚ್ಚಿಸುವುದಿಲ್ಲ. ಹೀಗಾಗಿ ಅವರು ತಿರಸ್ಕರಿಸಿದರು’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇಂದು ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ನನಗೂ ವೀರೇಂದ್ರ ಹೆಗ್ಗಡೆಯವರಿಗೂ, ಮಂಜುನಾಥನಿಗೂ ಭಕ್ತರಿಗೂ ಇರುವ ಸಂಬಂಧ. ಭಕ್ತನಿಗೂ, ಭಗವಂತನಿಗೂ ಇರುವ ಪ್ರೀತಿ, ಗೌರವ, ವಿಶ್ವಾಸ ಅವರ ಮೇಲಿದೆ. ಆದರೆ ವೀರೇಂದ್ರ ಹೆಗ್ಗಡೆಯವರು ದೊಡ್ಡ ಕ್ಷೇತ್ರಕ್ಕೆ ಧರ್ಮಾಧಿಕಾರಿ ಆಗಿದ್ದಾರೆ.

ಮಾತು ತಪ್ಪಾದ ಮಂಜುನಾಥ, ಕಾಸು ಬಿಡದ ತಿಮ್ಮಪ್ಪ ಅಂತ ಮಾತಿದೆ. ಅವರಿಗೆ ಕೇಂದ್ರ ಸರ್ಕಾರ ರಾಜ್ಯ ಸಭೆಗೆ ನಾಮಿನೇಟ್ ಮಾಡಿದೆ. ಅವರೂ ಕೂಡ ಒಪ್ಪಿದ್ದಾರೆ. ಅವರು ಮಾಡಿದ ಗ್ರಾಮೀಣ ಅಭಿವೃದ್ಧಿ ಕೆಲಸವನ್ನ ಇಂದೇ ಯುಪಿಎ ಯೋಜನೆ ಜಾರಿಗೆ ತಂದಿದೆ ಎಂದರು.

ಗ್ರಾಮೀಣ ಪ್ರದೇಶದ ದೇವಸ್ಥಾನಗಳಿಗೆ ಪ್ರತಿ ವರ್ಷ ಲಕ್ಷಾಂತರ ಹಣ ನೀಡುತ್ತಿದ್ದು, ಧರ್ಮಸ್ಥಳದಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದರು. ನನ್ನ ರಾಜ್ಯದಿಂದ ಅವರನ್ನು ಅಭಿನಂದಿಸುತ್ತೇನೆ. ನನಗೆ ಬಹಳ ಸಂತೋಷ ತಂದಿದೆ ಎಂದು ಹೇಳಿದರು.