Home ದಕ್ಷಿಣ ಕನ್ನಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಇಂದು ಸಂಜೆ ಅದ್ಭುತ ಸ್ವಾಗತ| ಚಾರ್ಮಾಡಿಯಿಂದ ಶ್ರೀ...

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಇಂದು ಸಂಜೆ ಅದ್ಭುತ ಸ್ವಾಗತ| ಚಾರ್ಮಾಡಿಯಿಂದ ಶ್ರೀ ಕ್ಷೇತ್ರದವರೆಗೆ ಭವ್ಯ ಮೆರವಣಿಗೆ

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಅವರು
ಕುಡುಮ (ಧರ್ಮಸ್ಥಳ) ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನಗೊಳಿಸಿರುವ ಸಮಯದಲ್ಲಿ ಬೆಂಗಳೂರಿನ ಕಾರ್ಯಕ್ರಮದ ನಿಮಿತ್ತ ಪ್ರವಾಸದಲ್ಲಿದ್ದ ಹೆಗ್ಗಡೆ ಅವರು ಜು. 9ರಂದು ಸಂಜೆ ಕ್ಷೇತ್ರಕ್ಕೆ ಆಗಮಿಸುವರು. ಅವರನ್ನು ಸ್ವಾಗತಿಸಲು ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಚಾರ್ಮಾಡಿ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಿಂದ ಸ್ವಾಗತಕ್ಕೆ ಅಭಿಮಾನಿಗಳು ಸಿದ್ಧತೆ ಕೈಗೊಂಡಿದ್ದಾರೆ.

ಧರ್ಮಾಧಿಕಾರಿಗಳಿಗೆ ದೇವರ ಸೇವೆಯೊಂದಿಗೆ ದೇಶಸೇವೆಗೈಯುವ ಶಾಸನಬದ್ಧ ಗೌರವಯುತ ಹುದ್ದೆ ಪ್ರಾಪ್ತಿಯಾಗಿರುವ ಕಾರಣ ಈ ಸಂತಸವನ್ನು ಗೌರವಿಸಲು ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಗ್ಗಡೆ ಕುಟುಂಬ ವರ್ಗ ಸಿದ್ಧತೆ ನಡೆಸಿದೆ.

ಸಂಜೆ 5ಕ್ಕೆ ಸರಿಯಾಗಿ ಚಾರ್ಮಾಡಿಯಿಂದ ವಾಹನ ಜಾಥಾದ ಮೂಲಕ ಶ್ರೀ ಕ್ಷೇತ್ರದ ವರೆಗೆ ಭವ್ಯ ಮೆರವಣಿಗೆಯಲ್ಲಿ ಕರೆತರಲಾಗುವುದು.

ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಬಳಿಕ ಮುಖ್ಯಮಂತ್ರಿಗಳು ಸಹಿತ ನಾಡಿನೆಲ್ಲೆಡೆಯಿಂದ ಗಣ್ಯಾತಿಗಣ್ಯರಿಂದ, ಭಕ್ತರಿಂದ, ಅಭಿಮಾನಿಗಳಿಂದ ಅಭಿನಂದನೆಯ ಮಹಾಪೂರ ಹರಿದುಬಂದಿತ್ತು. ಇದೀಗ ಕ್ಷೇತ್ರದ ಜನತೆ ಶುಭ ಹಾರೈಸಲು ಕಾತರರಾಗಿದ್ದಾರೆ. ವಾಹನ ಜಾಥಾದಲ್ಲಿ ತಾಲೂಕಿನ ಅಭಿಮಾನಿ, ಭಕ್ತರೆಲ್ಲ ಭಾಗಿಯಾಗಬೇಕೆಂದು ಶಾಸಕರು ವಿನಂತಿಸಿದ್ದಾರೆ.