‘ಹಸುವನ್ನು ತಿನ್ನದಿದ್ದರೆ ನೀವೇನು ಸತ್ತು ಹೋಗಲ್ಲ, ಗೋಹತ್ಯೆ ಮಾಡದೆ ಬಕ್ರೀದ್ ಹಬ್ಬ ಆಚರಿಸೋಣ’ ಎಂದ ಮುಸ್ಲಿಂ ಸಂಸದ

ಈ ಭಾರಿ ಬಕ್ರೀದ್ ಆಚರಣೆ ವೇಳೆ ಹಿಂದೂಗಳ ಭಾವನೆ, ಸಂಪ್ರದಾಯಗಳನ್ನು ಗೌರವಿಸೋಣ. ಗೋವುಗಳನ್ನ ಹತ್ಯೆ ಮಾಡದಿರೋಣ ಎಂದು ಅಸ್ಸಾಂ ಸಂಸದ ಮತ್ತು ಆಲ್ ಇಂಡಿಯಾ ಡೆಮೋಕ್ರ್ಯಾಟಿಕ್ ಪ್ರಾಂಟ್ (AIUDF)ಮುಖ್ಯಸ್ಥರು ಮೌಲನ ಬದ್ರುದಿನ್ ಅಜ್ಮಿಲ್ ಅವರು ಮುಸ್ಲಿಂರಲ್ಲಿ ಮನವಿ ಮಾಡಿದ್ದಾರೆ.

 

ಆರ್ ಎಸ್ ಎಸ್ ನ ಕೆಲವರು ಹಿಂದೂ ರಾಜ್ ಮಾಡಲು ಪ್ರಯತ್ನಿಸುವ ಮೂಲಕ ಹಿಂದುಸ್ತಾನವನ್ನು ಕೊನೆಗೊಳಿಸಲು ಬಯಸಿದ್ದಾರೆ. ಅವರ ಕನಸಿನಲ್ಲಿಯೂ ಹಿಂದೂ ರಾಜ್ ಎಂದಿಗೂ ನಿಜವಾಗುವುದಿಲ್ಲ. ಅವರು ಈ ದೇಶದಲ್ಲಿನ ಹಿಂದೂ ಮತ್ತು ಮುಸ್ಲಿಂಮರ ಏಕತೆಯನ್ನು ಒಡೆಯಲು ಎಂದಿಗೂ ಸಾಧ್ಯವಿಲ್ಲ ಎಂದಿದ್ದಾರೆ.

‘ಈದ್ ನಲ್ಲಿ ಒಂದು ದಿನ ಹಸು ತಿನ್ನದಿದ್ದರೆ ನಾವೇನು ಸಾಯಲ್ಲ. ಈ ಹಬ್ಬವನ್ನು ನಾವು ಹಿಂದೂ ಸಹೋದರರು ಒಟ್ಟಾಗಿ ಒಗಟ್ಟಿನಿಂದ ಆಚರಿಸೋಣ. ನಮ್ಮ ಪೂರ್ವಜರೆಲ್ಲ ಹಿಂದೂಗಳೇ. ಇಸ್ಲಾಂನಲ್ಲಿ ಮೌಲ್ಯಗಳು ಇರುವುದರಿಂದ ಮುಸ್ಲಿಂ ಧರ್ಮಕ್ಕೆ ಬಂದಿದ್ದಾರೆ. ಏಕೆಂದರೆ ಅದು ವಿಶೇಷ ಗುಣಗಳು ಹೊಂದಿದೆ. ಇಸ್ಲಾಂ ಇತರ ಧರ್ಮದ ಭಾವನೆಗಳನ್ನು ಗೌರವಿಸುತ್ತದೆ’ ಎಂದು ತಿಳಿಸಿದ್ದಾರೆ.

ಭಾರತ ವೈವಿದ್ಯಮಯ ಸಮುದಾಯಗಳು ಜನಾಂಗದ ಗುಂಪು ಮತ್ತು ಧರ್ಮಗಳ ದೇಶವಾಗಿದೆ. ಭಾರತದ ಹೆಚ್ಚಿನ ನಿವಾಸಿಗಳು ಸನಾತನ ಮೇಲೆ ನಂಬಿಕೆ ಇಟ್ಟವರು. ಇಲ್ಲಿ ಸನಾತನ ಧರ್ಮ, ಹಸು ಪ್ರಾಣಿ ಗೌರವಿಸುತ್ತೆ ಎಂದು ಹೇಳಿದ್ದಾರೆ. ನೂಪುರ್ ಶರ್ಮ ವಿವಾದ ಕುರಿತು ಮಾತನಾಡಿ, ಮುಸ್ಲಿಂಮರು ಈ ಬಗ್ಗೆ ಪ್ರತಿಕ್ರಿಯಿಸಬಾರದು, ಬದಲಿಗೆ ದೇವರು ನೂಪುರ್ ಶರ್ಮಾ ಅಂತವರಿಗೆ ಬುದ್ಧಿಯನ್ನು ನೀಡಬೇಕೆಂದು ಪ್ರಾರ್ಥಿಸೋಣ ಎಂದಿದ್ದಾರೆ. ಶಿರಚ್ಛೇದ ಮಾಡುವುದು ಮೂರ್ಖತನದ ಪರಮಾವಧಿ ಎಂದಿದ್ದಾರೆ.

Leave A Reply

Your email address will not be published.