KPSC : 1323 SDA ಹುದ್ದೆಗಳ ಕನ್ನಡ ಭಾಷಾ ಪರೀಕ್ಷೆ ಫಲಿತಾಂಶ ಬಿಡುಗಡೆ

ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 18-09-2021 ರಂದು ನಡೆದ ಕನ್ನಡ ಭಾಷಾ ಪರೀಕ್ಷೆಯ ಫಲಿತಾಂಶ ಬಿಡುಗಡೆ ಮಾಡಿದೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್ https://www.kpsc.kar.nic.in ವೆಬ್ಸೈಟ್ ಫಲಿತಾಂಶ ಚೆಕ್ ಮಾಡಬಹುದು.

ಕೆಪಿಎಸ್‌ಸಿ’ಯು ದಿನಾಂಕ 29-02-2020 ರಂದು ಬಿಡುಗಡೆ ಮಾಡಿದ್ದ 2019-20ನೇ ಸಾಲಿನ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ | ಹೈದ್ರಾಬಾದ್-ಕರ್ನಾಟಕ ವೃಂದದ ಕಿರಿಯ ಸಹಾಯಕ/ ದ್ವಿತೀಯ ದರ್ಜೆ ಸಹಾಯಕರು ಸೇರಿ ಒಟ್ಟು 1323 (1122 + 201 ಹೆಚ್‌ಕೆ) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸಂಬಂಧಿತ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು
ನಡೆಸಿತ್ತು. ಈ ಪರೀಕ್ಷೆಯ ಫಲಿತಾಂಶವನ್ನು ಇದೀಗ ಬಿಡುಗಡೆ ಮಾಡಲಾಗಿದೆ.

ಪರೀಕ್ಷೆ ಬರೆದ ಅಭ್ಯರ್ಥಿಗಳ ಪೈಕಿ ಅರ್ಹರಾದ ಅಭ್ಯರ್ಥಿಗಳ ರಿಜಿಸ್ಟರ್ ನಂಬರ್‌ಗಳನ್ನು ಕೆಪಿಎಸ್‌ಸಿ ಪ್ರಕಟಿಸಿದೆ.

ಫಲಿತಾಂಶ ಚೆಕ್ ಮಾಡುವುದು ಹೇಗೆ?
ಕೆಪಿಎಸ್‌ಸಿ ಅಧಿಕೃತ ವೆಬ್‌ಸೈಟ್
ಓಪನ್ ಆದ ಪೇಜ್‌ನಲ್ಲಿ ‘ಹೊಸದು ಏನು?’ ಎಂದಿರುವಲ್ಲಿ ಕ್ಲಿಕ್ ಮಾಡಿ, ಇತ್ತೀಚೆಗೆ ಪ್ರಕಟಿಸಲಾದ’ ಕನ್ನಡ ಭಾಷಾ ಪರೀಕ್ಷೆಯ ಫಲಿತಾಂಶ’ ಲಿಂಕ್ ಕ್ಲಿಕ್ ಮಾಡಿ. ನಂತರ ಪಿಡಿಎಫ್ ಫೈಲ್ ಒಂದು ತೆರೆಯುತ್ತದೆ.
ಇಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ರಿಜಿಸ್ಟರ್ ನಂಬರ್ –
ಅನ್ನು ಚೆಕ್ ಮಾಡಬಹುದು.

Leave A Reply

Your email address will not be published.