Home Travel ವಾಹನ ಮಾಲೀಕರಿಗೆ ಗುಡ್ ನ್ಯೂಸ್, ವಾಹನ ವಿಮಾ ನಿಯಮಗಳಲ್ಲಿ ಬದಲಾವಣೆ!

ವಾಹನ ಮಾಲೀಕರಿಗೆ ಗುಡ್ ನ್ಯೂಸ್, ವಾಹನ ವಿಮಾ ನಿಯಮಗಳಲ್ಲಿ ಬದಲಾವಣೆ!

Hindu neighbor gifts plot of land

Hindu neighbour gifts land to Muslim journalist

ವಾಹನಗಳ ವಿಮೆ ವಿಚಾರವಾಗಿ ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರವು ಮಹತ್ವದ ಬದಲಾವಣೆಯೊಂದು ಘೋಷಣೆ ಮಾಡಿದ್ದು, ಹೊಸ ವಿಮಾ ನಿಯಮವು ವಾಹನ ಮಾಲೀಕರಿಗೆ ಅತ್ಯುತ್ತಮ ಆಯ್ಕೆಯಾಗಲಿದ್ದು, ವಿಮಾ ಮೊತ್ತವನ್ನು ನಿಮ್ಮ ಚಾಲನಾ ವಿಧಾನ ಅನುಸರಿಸಿ ನಿರ್ಧರಿಸಲಿದೆ.

ಭಾರತದಲ್ಲಿ ಪ್ರತಿಯೊಂದು ವಾಹನವು ಕೂಡಾ ಮೋಟಾರ್ ವೆಹಿಕಲ್ ಕಾಯ್ದೆ ಅನ್ವಯ ವಿವಿಧ ವರ್ಗಗಳಿಗೆ ಅನುಗುಣವಾಗಿ ವಿಮೆಯನ್ನು ಹೊಂದಿರಲೇಬೇಕಿರುವುದು ಕಡ್ಡಾಯವಾಗಿದೆ. ಇದು ವಾಹನಗಳಿಗೆ ಗರಿಷ್ಠ ಸುರಕ್ಷತೆ ಒದಗಿಸಲಿದ್ದು, ವಾಹನ ಮಾದರಿಗಳನ್ನು ಆಧರಿಸಿ ಪ್ರೀಮಿಯಂ ಪಾವತಿ ನಿರ್ಧಾರವಾಗುತ್ತದೆ. ಹಾಗೆಯೇ ಇನ್ಮುಂದೆ ವಾಹನ ಚಾಲನೆಯನ್ನು ಆಧರಿಸಿ ವಿಮಾ ಮೊತ್ತವು ನಿರ್ಧಾರವಾಗಲಿದ್ದು, ‘ನೀವು ಚಾಲನೆ ಮಾಡಿದ ರೀತಿಯನ್ನು ಆಧರಿಸಿ ಪ್ರೀಮಿಯಂ ಪಾವತಿಸಿಸಬೇಕಾಗುತ್ತದೆ.

ಹೌದು, ಇನ್ಮುಂದೆ ಪ್ರತಿಯೊಬ್ಬ ವಾಹನ ಮಾಲೀಕರು ತಮ್ಮ ವಾಹನಗಳಿಗೆ ಪಾವತಿಸುವ ವಿಮೆಯು ಚಾಲನಾ ವೈಖರಿಯನ್ನು ಆಧರಿಸಿ ಮೊತ್ತ ನಿರ್ಧಾರವಾಗಲಿದ್ದು, ಚೆನ್ನಾಗಿ ಮತ್ತು ಸುರಕ್ಷಿತವಾಗಿ ವಾಹನ ಚಲಾಯಿಸಿದರೆ ನೀವು ಕಡಿಮೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಹಾಗೆಯೇ ನೀವು ಕಳಪೆಯಾಗಿ ಚಾಲನೆ ಮಾಡಿದ್ದಲ್ಲಿ ನೀವು ಹೆಚ್ಚು ಪ್ರೀಮಿಯಂ ಪಾವತಿಸಬೇಕಾಗುತ್ತದೆ. ವಾಹನ ಮಾಲೀಕರ ಚಾಲನಾ ವೈಖರಿಯನ್ನು ತಿಳಿಯಲು ವಾಹನಗಳಲ್ಲಿ ಕಡ್ಡಾಯವಾಗಿ ಜಿಪಿಎಸ್ ಅಳವಡಿಕೆಯಾಗಲಿದೆ.

ಖಾಸಗಿ ದ್ವಿಚಕ್ರ ವಾಹನಗಳು ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಈ ಹೊಸ ವಿಮಾ ಪಾಲಿಸಿ ಜಾರಿಗೆ ತರಲಾಗುತ್ತಿದ್ದು, ಹೊಸ ವಿಮಾ ಪಾಲಿಸಿ ಮೂಲಕ ಉತ್ತಮ ಸಂಚಾರಿ ಕೌಶಲ್ಯತೆಗೆ ಇದು ಸಹಕಾರಿಯಾಗಲಿದೆ. ಇದಲ್ಲದೆ ಹೊಸ ವಿಮಾ ಪಾಲಿಸಿ ಅಡಿಯಲ್ಲಿ ನೀವು ಒಂದಕ್ಕಿಂತ ಹೆಚ್ಚು ವಾಹನಗಳನ್ನು ಓಡಿಸಿದರೆ ಎಲ್ಲಾ ವಾಹನಗಳ ವಿಮೆಯನ್ನು ಒಂದೇ ಪ್ರೀಮಿಯಂನಲ್ಲಿ ಕವರ್ ಮಾಡಬಹುದಾಗಿದ್ದು, ವಿಮಾ ನಿಯಂತ್ರಕದ ಹೊಸ ನಿಯಮಗಳು ತಕ್ಷಣವೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ.

ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವ ಸಮಯದಲ್ಲಿಯೇ ನಿಮ್ಮ ವಾಹನದಲ್ಲಿ ಸಣ್ಣ ಗಾತ್ರದ ಜಿಪಿಎಸ್ ಸಾಧನವನ್ನು ಅಳವಡಿಸಲಿದ್ದು, ಅದು ನಿಮ್ಮ ಚಾಲನಾ ವೈಖರಿಯ ಕುರಿತಾಗಿ ಕಂಪನಿಗೆ ಮಾಹಿತಿ ನೀಡುತ್ತಿರುತ್ತದೆ. ಈ ವೇಳೆ ನೀವು ಉತ್ತಮ ಚಾಲನಾ ವಿಧಾನವನ್ನು ಹೊಂದಿದ್ದರೆ ವಿಮಾ ಪ್ರೀಮಿಯಂ ಕಡಿಮೆಯಾಗುತ್ತದೆ ಮತ್ತು ಚಾಲನಾ ವಿಧಾನವು ಕಳಪೆಯಾಗಿದ್ದಲ್ಲಿ ಪ್ರೀಮಿಯಂ ಹೆಚ್ಚಾಗುತ್ತದೆ. ಇದಕ್ಕಾಗಿ ವಿಮಾ ಕಂಪನಿಗಳು ತಂತ್ರಜ್ಞಾನದ ಸಹಾಯದಿಂದ ಡ್ರೈವಿಂಗ್ ಸ್ಕೋರ್ ನೀಡುತ್ತವೆ.

ಹೊಸ ಮಾನದಂಡಗಳಿಗೆ ಅನುಗುಣವಾಗಿ ಈಗಾಗಲೇ ಎಡೆಲ್‌ವೀಸ್ ಜನರಲ್ ಇನ್ಶುರೆನ್ಸ್ (EGI) ಕಂಪನಿಯು ಹೊಸ ವಿಮಾ ಪ್ರೀಮಿಯಂಗಳನ್ನು ಆರಂಭಿಸಿದ್ದು, ಹೊಸ ಉಪಕ್ರಮದ ಅಡಿಯಲ್ಲಿ ವಾಹನ ಮಾಲೀರು ಸಮಗ್ರ ಮೋಟಾರು ವಿಮಾ ಉತ್ಪನ್ನವಾದ ಸ್ವಿಚ್ ಅನ್ನು ಸಹ ಖರೀದಿ ಮಾಡಬಹುದಾಗಿದೆ. ಹೀಗಾಗಿ ಈ ಹೊಸ ಬಳಕೆಯ ಆಧಾರಿತ ಮಾದರಿಯು ಡ್ರೈವಿಂಗ್ ಗುಣಮಟ್ಟವನ್ನೂ ಅಳೆಯುವುದಲ್ಲದೆ ನಮ್ಮ ಚಾಲನಾ ಅಭ್ಯಾಸವನ್ನು ಸುಧಾರಿಸಲು ಸಹಾಯ ಮಾಡುವುದಲ್ಲದೆ ಸುಧಾರಿಸಲು ಪ್ರೇರೇಪಿಸುತ್ತದೆ.