ದೇವಸ್ಥಾನದಲ್ಲಿದ್ದ ಗದೆಯಿಂದಲೇ ಅರ್ಚಕನನ್ನು ಹೊಡೆದು ಅಮಾನುಷವಾಗಿ ಕೊಂದ ಯುವಕ!

ಮಂದಿರದೊಳಗೆ ಇದ್ದ ವೃದ್ಧ ಅರ್ಚಕನನ್ನು ಯುವಕನೋರ್ವ ಹನುಮಂತನ ಗದೆಯಿಂದಲೇ ಭೀಕರವಾಗಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಈ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ಆರೋಪಿ ಯುವಕ ಹೀನಾಯವಾಗಿ ಗದೆ ಮುರಿಯುವವರೆಗೂ ವೃದ್ಧನಿಗೆ ಹಲ್ಲೆ ನಡೆಸಿದ್ದು ಅದೂ ಸಮಾಧಾನ ಆಗದೆ, ಕಟ್ಟಿಗೆಯೊಂದನ್ನು ಎತ್ತಿಕೊಂಡು ಹೊಟ್ಟೆಗೆ ಚುಚ್ಚಿದ್ದಾನೆ. ಅರ್ಚಕ ಪ್ರಾಣ ಉಳಿಸಿಕೊಳ್ಳಲು ದೇವಸ್ಥಾನದ ಹೊರಗೆ ಓಡಿ ಬಂದಾಗ ಆರೋಪಿ ಹಿಂಬಾಲಿಸಿ ಹಿಡಿದು ಅಲ್ಲಿಯೂ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾನೆ.

ಆದರೆ ಈ ಸಮಯದಲ್ಲಿ ಪಾರ್ಕ್‌ನಲ್ಲಿ ವಾಕಿಂಗ್‌ಗೆ ಬಂದ ಕೆಲವು ಮಹಿಳೆಯರು ಅರ್ಚಕನನ್ನು ರಕ್ಷಿಸಲು ಮುಂದಾದಾಗ ಆರೋಪಿ ಅವರ ಮೇಲೂ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದು ಸ್ಥಳದಲ್ಲಿ ನೆರೆದಿದ್ದ ಜನರು ಆರೋಪಿಯನ್ನು ಹಿಡಿದು ತೀವ್ರವಾಗಿ ಥಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡ ಅರ್ಚಕನನ್ನು ಮೊದಲು ಜಗ್ ಪ್ರವೇಶ್ ಚಂದ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಂದ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ವೇಳೆ ಅರ್ಚಕ ಮೃತಪಟ್ಟಿದ್ದಾರೆ. ಮೃತರನ್ನು ಸೋಮೈ ರಾಮ್ (62) ಎಂದು ಗುರುತಿಸಲಾಗಿದೆ.

ಹಲ್ಲೆಯಿಂದ ಗಾಯಗೊಂಡ ಆರೋಪಿ ಸೋನು ಭಟ್ ನನ್ನು ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಕೊಲೆ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಮಾನಸಿಕವಾಗಿ ದುರ್ಬಲನಾಗಿದ್ದು, ಇದು ಹಣದ ವಿಷಯಕ್ಕಾಗಿ ನಡೆದ ಘಟನೆ ಎಂದು ತಿಳಿದು ಬಂದಿದೆ. ಅರ್ಚಕ ಹಣ ಕೊಡಲು ನಿರಾಕರಿಸಿದಾಗ ಆರೋಪಿ ಹಲ್ಲೆ ಮಾಡಿದ್ದಾನೆ. ಸೋಮೈ ರಾಮ್ ಮೂಲತಃ ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಉದಯಪುರ ಗ್ರಾಮದವರು.

ಅರ್ಚಕನ‌ ಕುಟುಂಬವು ಪುತ್ರ ಪತ್ನಿ ಫೂಲವತಿ, ಮೂವರು ವಿವಾಹಿತ ಪುತ್ರರಾದ ಧರ್ಮೇಂದ್ರ, ರಾಜಾರಾಂ ಮತ್ತು ಅನಿಲ್ ಮತ್ತು ಇತರ ಸದಸ್ಯರನ್ನು ಹೊಂದಿದೆ. ಸೋನಿಯಾ ವಿಹಾರ್ ಧೈ ಪುಷ್ಟದಲ್ಲಿ ಹನುಮಾನ್ ದೇವಾಲಯವಿದೆ, ಅದರ ಹಿಂದೆ ಆಂಫಿಥಿಯೇಟರ್ ಇದೆ. ಹತ್ತಿರದಲ್ಲಿ ಉದ್ಯಾನವನವಿದೆ.

ಸೋಮೈ ರಾಮ್ ಮೂಲತಃ ಕುಸ್ತಿಪಟುವಾಗಿದ್ದು, ನಂತರ ಹಲವು ವರ್ಷಗಳ ಕಾಲ ಅಖಾಡದ ಜನರಿಗೆ ಕುಸ್ತಿ ಕಲಿಸಿದ ಅವರು, ಹತ್ತು ವರ್ಷಗಳ ಹಿಂದೆ ಕಣದಲ್ಲಿ ನಿರ್ಮಿಸಿದ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಎಂದಿನಂತೆ ಅರ್ಚಕರು ಪ್ರತಿದಿನ ಬೆಳಗ್ಗೆ 4.30ಕ್ಕೆ ದೇವಸ್ಥಾನಕ್ಕೆ ಬರುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ಕಳೆದ ಒಂದು ವಾರದಿಂದ ಅಪರಿಚಿತ ಯುವಕನೊಬ್ಬ ಬೆಳಿಗ್ಗೆ ದೇವಸ್ಥಾನಕ್ಕೆ ಬರುತ್ತಿದ್ದನು, ಕೆಲವೊಮ್ಮೆ ಸ್ವಇಚ್ಛೆಯಿಂದ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರೆ ಕೆಲವೊಮ್ಮೆ ಹಾಗೇ ಕುಳಿತುಕೊಳ್ಳುತ್ತಿದ್ದ. ಬುಧವಾರ ಬೆಳಿಗ್ಗೆ ಅರ್ಚಕ ದೇವಸ್ಥಾನವನ್ನು ತೆರೆದಾಗ ಅವರನ್ನು ಹೊರತುಪಡಿಸಿ ಯಾರೂ ಇರಲಿಲ್ಲ. ಐದು ಗಂಟೆ ಸುಮಾರಿಗೆ ಯುವಕ ಆರೋಪಿ ಸೋನು ಭಟ್ ದೇವಸ್ಥಾನಕ್ಕೆ ಬಂದ. ತನಿಖೆ ವೇಳೆ ಯುವಕ ವೃದ್ಧ ಅರ್ಚಕರಿಂದ ಸ್ವಲ್ಪ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಆದರೆ ಅರ್ಚಕ ನೀಡಲು ನಿರಾಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಯುವಕ ಹನುಮಾನ್ ಮೂರ್ತಿಯ ಬಳಿ ಇಟ್ಟಿದ್ದ ದೊಡ್ಡ ಗದೆ ಎತ್ತಿಕೊಂಡು ಪೂಜಾರಿ ಮೇಲೆ ಹಲ್ಲೆ ನಡೆಸಿದ್ದಾನೆ. ಅರ್ಚಕರಿಗೆ ತುಂಬಾ ಪೆಟ್ಟು ಬಿದ್ದಿದ್ದು, ಗದೆ ಮುರಿದು, ನಂತರ ದೇವಾಲಯದ ಒಳಗೆ ಬಿದ್ದಿದ್ದ ಕಟ್ಟಿಗೆಯನ್ನು ಎತ್ತಿಕೊಂಡು ಅರ್ಚಕನ ಹೊಟ್ಟೆಗೆ ಇರಿದಿದ್ದಾನೆ.

ಪ್ರಾಣ ಉಳಿಸಿಕೊಳ್ಳಲು ಅರ್ಚಕ ದೇವಸ್ಥಾನದಿಂದ ಹೊರಗೆ ಓಡಿ ಪಾರ್ಕ್‌ಗೆ ಓಡಿ ಹೋಗಿದ್ದು, ಆರೋಪಿ ಅಲ್ಲಿಯೂ ಹಲ್ಲೆ ನಡೆಸಿದ್ದಾರೆ. ಪಾರ್ಕ್‌ನಲ್ಲಿ ತೆರಳುತ್ತಿದ್ದ ಮಹಿಳೆಯರು ಅರ್ಚಕನನ್ನು ರಕ್ಷಿಸಲು ಮುಂದಾದಾಗ ಅವರ ಮೇಲೂ ಆರೋಪಿ ಹಲ್ಲೆ ನಡೆಸಿದ್ದಾನೆ. ಪಾರ್ಕ್‌ನಲ್ಲಿ ಹೆಚ್ಚಿನ ಜನರು ಜಮಾಯಿಸಿದಾಗ ಆರೋಪಿಯನ್ನು ಹಿಡಿದು ಥಳಿಸಿದ್ದಾರೆ.

ಗಾಯಗೊಂಡ ಇಬ್ಬರನ್ನೂ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಬುಧವಾರ ರಾತ್ರಿ ಪೂಜಾರಿ ಮೃತಪಟ್ಟಿದ್ದಾರೆ. ಆರೋಪಿ ಸೋನಿಯಾ ವಿಹಾರ್‌ನಲ್ಲಿ ನೆಲೆಸಿರುವ ಆರೋಪಿಯ ಕುಟುಂಬ ಸದಸ್ಯರನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಆರೋಪಿ ಭಿಕ್ಷೆ ಬೇಡುತ್ತಿದ್ದು, ಇನ್ನು ಕೆಲವೊಮ್ಮೆ ಗೋದಾಮಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

Leave A Reply

Your email address will not be published.