ನೇತ್ರಾವತಿಯಲ್ಲಿ ನೀರುಪಾಲಾದ ಯುವಕನ ಮೃತದೇಹ ಪತ್ತೆ!! ತೊಟ್ಟಿಲು ತೂಗಿದ್ದ ಮನೆಯಲ್ಲೀಗ ಸೂತಕದ ಛಾಯೆ

Share the Article

ಕಳೆದ ಎರಡು ದಿನಗಳ ಹಿಂದೆ ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ತಲೆಮೊಗರು ಎಂಬಲ್ಲಿ ಹರಿಯುವ ನೇತ್ರಾವತಿ ನದಿಗೆ ಈಜಲು ತೆರಳಿದ್ದ ತಂಡದಲ್ಲಿ ನೀರುಪಾಲಾದ ಓರ್ವ ಯುವಕನ ಮೃತದೇಹ ಉಳ್ಳಾಲದ ಕೋಟೆಪುರ ಕೋಡಿ ಬಳಿಯ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

ಅಶ್ವಿತ್ (19) ಎಂದು ಗುರುತಿಸಲಾಗಿದೆ. ಮೃತ ಯುವಕನು ನಾಗೇಶ್ ಗಾಣಿಗ ಎಂಬವರ ಮನೆಯಲ್ಲಿ ನಡೆದ ತೊಟ್ಟಿಲು ಶಾಸ್ತ್ರದಲ್ಲಿ ಭಾಗವಹಿಸಿ ಆ ಬಳಿಕ ಗೆಳೆಯರೊಂದಿಗೆ ಈಜಾಡಲು ನದಿಗೆ ತೆರಳಿದ್ದರು.

ಒಟ್ಟು ಐದು ಮಂದಿ ಯುವಕರ ತಂಡ ನೀರಿಗೆ ಇಳಿದಿದ್ದು, ಈ ವೇಳೆ ಅಶ್ವಿತ್ ಸಹಿತ ಇನ್ನೋರ್ವ ನೀರುಪಾಲಾಗಿದ್ದರು.ಕೂಡಲೇ ಸ್ಥಳೀಯರ ಸಹಕಾರದಿಂದ ಹರ್ಷ ಎಂಬಾತನನ್ನು ನೀರಿನಿಂದ ಮೇಲಕ್ಕೆತ್ತಿ ರಕ್ಷಿಸಲಾಗಿದ್ದು, ಅದಾಗಲೇ ಅಶ್ವಿತ್ ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾಗಿದ್ದ. ಬಳಿಕ ಸ್ಥಳಕ್ಕೆ ಬಂಟ್ವಾಳ ಠಾಣಾ ಪೊಲೀಸರು, ಅಗ್ನಿಶಾಮಕ ದಳ ಹಾಗೂ ನುರಿತ ಈಜುಗಾರರ ತಂಡ ಆಗಮಿಸಿ ಶೋಧ ಕಾರ್ಯ ನಡೆಸಿದ್ದರು.

Leave A Reply