BIG NEWS । ಈ ಬಾರಿ ಮುಸ್ಲಿಂ ಉಪರಾಷ್ಟ್ರಪತಿ ?, ದಾಳ ಉರುಳಿಸಲು ಬಿಜೆಪಿ ಪಡೆ ಸಜ್ಜು !

ದೆಹಲಿ: ರಾಷ್ಟ್ರದ ಅತ್ಯುನ್ನತ ಉಪರಾಷ್ಟ್ರಪತಿ ಹುದ್ದೆಗಾಗಿ ಎನ್ ಡಿಎ ಮತ್ತೊಂದು ಮಹಾ ದಾಳ ಉರುಳಿಸಲು ರೆಡಿ ಆಗಿದೆ. ಮೊನ್ನೆ ದ್ರೌಪದಿ ಮುರ್ಮಾ ಅವರ ಹೆಸರನ್ನು ರಾಷ್ಟ್ರಪತಿ ರೇಸಿಗೆ ಬಿಟ್ಟು ವಿರೋಧ ಪಕ್ಷಗಳ ಮೇಲೆ ಪಾಶುಪತಾಸ್ತ್ರ ಪ್ರಯೋಗಿಸಿತ್ತು ಬಿಜೆಪಿ. ಈಗ ಇನ್ನೊಂದು ಹೊಸ ಅಸ್ತ್ರ ರೆಡಿ ಆಗಿದೆ.

 

ಬಿಜೆಪಿಯಿಂದ ಮುಸ್ಲಿಂ ಸಮುದಾಯದ ಮೂವರು ಹಾಗೂ ಸಿಖ್ ಸಮುದಾಯದ ಓರ್ವ ನಾಯಕರ ಹೆಸರು ಜೋರಾಗಿ ಕೇಳಿ ಬರುತ್ತಿದೆ.16ನೇ ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ಆಗಸ್ಟ್ 6 ರಂದು ನಡೆಯಲಿರುವ ಚುನಾವಣೆಗೆ ಚುನಾವಣಾ ಆಯೋಗ ಮಂಗಳವಾರ ಅಧಿಸೂಚನೆ ಹೊರಡಿಸಿದ್ದು, ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಹೆಸರಿಸಲು ‘ಪಸ್ಮಾಂಡ’ ಮುಸ್ಲಿಂ ಸಮುದಾಯಕ್ಕೆ ಸೇರಿದ ಸಮರ್ಥ, ವಿವಾದ ರಹಿತ ನಾಯಕನನ್ನು ಆಯ್ಕೆ ಮಾಡಲು ತೀವ್ರ ಹುಡುಕಾಟ ನಡೆಯುತ್ತಿದೆ” ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಕೇಂದ್ರದ ಮಾಜಿ ಸಚಿವೆ ನಜ್ಮಾ ಹೆಪ್ತುಲ್ಲಾ ಹೆಸರುಗಳು ಕೇಳಿ ಬರುತ್ತಿವೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಆಡಳಿತಾರೂಢ ಮೈತ್ರಿಕೂಟದಿಂದ ನಾಲ್ಕನೇ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ತನ್ನ ಅಭ್ಯರ್ಥಿಯನ್ನು ಉಪ ರಾಷ್ಟ್ರಪತಿಯಾಗಿ ಆಯ್ಕೆ ಮಾಡಲು ಬಿಜೆಪಿ ಸಾಕಷ್ಟು ಚುನಾವಣಾ ಬಲವನ್ನು ಹೊಂದಿದೆ. ಪಕ್ಷವು ತನ್ನ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಆಯ್ಕೆ ಮಾದರಿಯಲ್ಲಿ ಮತ್ತೊಮ್ಮೆ ಅಚ್ಚರಿ ಮೂಡಿಸಬಹುದು.

ಅಗತ್ಯವಿರುವ ಪ್ರೊಫೈಲ್ ಪ್ರಕಾರ ಯಾರೂ ಸಿಗದಿದ್ದರೆ, ಪಕ್ಷವು ಆರಿಫ್ ಮೊಹಮ್ಮದ್ ಖಾನ್, ನಖ್ವಿ, ನಜ್ಮಾ ಹೆಪ್ತುಲ್ಲಾ ಮತ್ತು ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಹೆಸರುಗಳಲ್ಲಿ ಯಾವುದಾದರೂ ಒಂದು ಹೆಸರನ್ನು ಆಯ್ಕೆ ಮಾಡಬಹುದು ಎಂದು ತಿಳಿದು ಬಂದಿದೆ. ಹಾಲಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರ ಅವಧಿ ಆಗಸ್ಟ್ 10 ರಂದು ಕೊನೆಗೊಳ್ಳುತ್ತದೆ. ಮುಂದಿನ ಉಪರಾಷ್ಟ್ರಪತಿ ಆಗಸ್ಟ್ 11 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜುಲೈ 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜುಲೈ 22 ಕೊನೆಯ ದಿನಾಂಕವಾಗಿದೆ.ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು ಜುಲೈ 19 ಕ್ಕೆ ಬೆಳಗ್ಗೆ 11 ಗಂಟೆಯಿಂದ ಸಂಜೆ 3 ಗಂಟೆಯವರೆ ನಾಮಪತ್ರ ಸಲ್ಲಿಕೆ ಮಾಡಬಹುದು.

Leave A Reply

Your email address will not be published.