ಗುರೂಜಿಯನ್ನು ಬರ್ಬರವಾಗಿ ಕೊಂದದ್ದು ನೋವಾಗಿದೆ, ಆಸ್ತಿಗಾಗಿ ಕೊಲೆ ನಡೆದಿಲ್ಲ । ಆರೋಪಿ ಪತ್ನಿ ಹೇಳಿಕೆ

ಹುಬ್ಬಳ್ಳಿ: ನಮ್ಮ ಮತ್ತು ಗುರೂಜಿ ನಡುವೆ ಒಳ್ಳೆಯ ಸಂಬಂಧ ಇತ್ತು. ನಮ್ಮ ಮನೆಯವರು ಈ ರೀತಿ ಮಾಡಿದ್ದು ತಪ್ಪು ಎಂದು ಕೊಲೆ ಆರೋಪಿ ಮಹಾಂತೇಶ ಶಿರೂರ ಪತ್ನಿ ವನಜಾಕ್ಷಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಹಾಗಾದೆ ಕೊಲೆ ಯಾಕಾಯ್ತು ಅನ್ನುವುದು ಗೊತ್ತಾಗುತ್ತಿಲ್ಲ. ಆಕೆಯ ಹೇಳಿಕೆಯಿಂದ ಬಿಗ್ ಟ್ವಿಸ್ಟ್ ದೊರೆತಿದೆ.

 

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ನಮ್ಮ ತಂದೆಯ ಇದ್ದರು. ನನಗೆ ಬೇಸರ ಆದಾಗ ಗುರೂಜಿ ಜತೆ ಮಾತನಾಡುತ್ತಿದ್ದೆ. ಬೇನಾಮಿ ಆಸ್ತಿ ವಿಚಾರವಾಗಿ ಕೊಲೆ ನಡೆದಿದೆ ಅನ್ನೋದು ಸುಳ್ಳು ಸುದ್ದಿ ಎಂದು ಆರೋಪಿ ಪತ್ನಿ ವನಜಾಕ್ಷಿ ಹೇಳಿದ್ದಾರೆ ಎಂದು ವರದಿಯಾಗಿದೆ.

ಸಾಲ ಸೋಲ ಮಾಡಿ ಅಪಾರ್ಟಮೆಂಟ್‌ನಲ್ಲಿ ಮನೆ ತೆಗೆದುಕೊಂಡಿದ್ದೇವೆ. ನನ್ನ ಹೆಸರಿನಲ್ಲಿ ಯಾವು ಆಸ್ತಿ ಇಲ್ಲ. ನನ್ನ ಪತಿ ಸರಳವಾಸ್ತುನಲ್ಲಿ ಬಾಂಬೆ ಹೆಡ್ ಆಗಿ ಕೆಲಸ ಮಾಡುತ್ತಿದ್ದರು. ಕೊಲೆ ವೀಡಿಯೋ ನೋಡಿ ನನ್ನ ಮನಸ್ಸಿಗೆ ನೋವಾಗಿದೆ. ಗುರೂಜಿ ಮೇಲೆ ನಮ್ಮ ಮನೆಯವರಿಗೆ ಇಷ್ಟು ಆಕ್ರೋಶ ಅಂತಾ ಗೊತ್ತಾಗಿಲ್ಲ ಎಂದು ವನಜಾಕ್ಷಿ ತಿಳಿಸಿದರು. ಗುರೂಜಿ ಅಲ್ಲ, ಯಾರಿಗೇ ಆದರೂ ಈ ರೀತಿ ಬರ್ಬರವಾಗಿ ವರ್ತಿಸಬಾರದು. ಪೊಲೀಸರೂ ಸಹ ವಿಚಾರಣೆಗೆ ಕರೆದೊಯ್ದಿದ್ದರು. ನಾನು ವಿಚಾರಣೆಗೆ ಸಹಕರಿಸಿದ್ದೇನೆ, ಅದಕ್ಕಾಗೇ ನನ್ನ ಬಿಟ್ಟು ಕಳಿಸಿದ್ದಾರೆ ಪೊಲೀಸರು. ನನ್ನ ಗಂಡ ಮಾಡಿದ್ದು ತಪ್ಪು ಅಂತಾ ವನಜಾಕ್ಷಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಹಾಗಾದರೆ ಕೊಲೆ ನಡೆಯಲು ಇರೋ ಆ ಗುಪ್ತ ಕಾರಣ ಏನು ? ಇನ್ನೂ ಅದು ನಿಗೂಢತೆ ಉಳಿಸಿಕೊಂಡಿದೆ.

Leave A Reply

Your email address will not be published.