ಉಜಿರೆ : ಒಂಬತ್ತು ತಿಂಗಳ ಮಗುವಿನೊಂದಿಗೆ ತಾಯಿ ನಾಪತ್ತೆ !!!

Share the Article

ಬೆಳ್ತಂಗಡಿ : ಉಜಿರೆಯ ನಿನ್ನಿಕಲ್ಲು ಎಂಬಲ್ಲಿ ತಾಯಿಯೊಬ್ಬಳು ತನ್ನ 9 ತಿಂಗಳ ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಒಂಬತ್ತು ತಿಂಗಳ ಮಗುವಿನೊಂದಿಗೆ ತಾಯಿ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಾಪತ್ತೆಯಾದವರು ಉಜಿರೆಯ ನಿನ್ನಿಕಲ್ಲು ನಿವಾಸಿ ಪ್ರಜೀತ (27 ವರ್ಷ) ಮತ್ತು ಮಗ ಸುಮಂತ್ (9 ತಿಂಗಳು) ಎಂದು ತಿಳಿದು ಬಂದಿದೆ.

ಪ್ರಜೀತ ಅವರ ಗಂಡ ರಿಕ್ಷಾ ಚಾಲಕನಾಗಿದ್ದು ಕೆಲಸಕ್ಕೆ ಹೋಗಿದ್ದು, ತಾಯಿ ಹುಲ್ಲು ತರಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪ್ರಜೀತ ಸಂಬಂಧಿಕರ ಮನೆಗೂ ಹೋಗಿಲ್ಲ.

ಈ ಘಟನೆಯ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply