ಉದ್ಯೋಗಾಕಾಂಕ್ಷಿಗಳೇ ಎಚ್ಚರ, ಸರ್ವಶಿಕ್ಷಾ ಅಭಿಯಾನದ ಹೆಸರಲ್ಲಿ ನಕಲಿ ವೆಬ್ ಸೈಟ್!
ಬೆಂಗಳೂರು: ಉದ್ಯೋಗಕ್ಕಾಗಿ ತುದಿಗಾಲಿನಲ್ಲಿ ಕಾಯುತ್ತಿರುವ ನಿರುದ್ಯೋಗಿಗಳ ಸಂಖ್ಯೆ ಅಧಿಕವಾಗಿದ್ದು, ಇದನ್ನೇ ಟಾರ್ಗೆಟ್ ಆಗಿಸಿಕೊಂಡು ಅದೆಷ್ಟೋ ವಂಚಕರು ನಕಲಿ ವೆಬ್ ಸೈಟ್ ಮೂಲಕ ಕೆಲಸ ಕೊಡಿಸುವುದಾಗಿ ಮೋಸ ಮಾಡುತ್ತಾರೆ. ಇದೀಗ ಸರ್ವಶಿಕ್ಷಾ ಅಭಿಯಾನದ ಅಧಿಕೃತ ವೆಬ್‌ಸೈಟ್ ಮೂಲಕ ವಂಚನೆಗೆ ಇಳಿದಿದೆ.
ನಕಲಿ ವೆಬ್‌ಸೈಟ್ ‘https://t.co/vFALk36xT9‘ ಸರ್ವಶಿಕ್ಷಾ ಅಭಿಯಾನದ ಅಧಿಕೃತ ವೆಬ್‌ಸೈಟ್ ಎಂದು ಹೇಳಿಕೊಂಡು ಉದ್ಯೋಗಾವಕಾಶಗಳನ್ನು ನೀಡುತ್ತಿದೆ. ಇದರ ಜಾಡು ಹಿಡಿದು ಹೊರಟ ಪ್ರೆಸ್ ಇನ್ ಫಾರ್ಮೇಶನ್ ಬ್ಯೂರೋ (ಪಿಐಬಿ) ಫ್ಯಾಕ್ಟ್ ಚೆಕ್ ನಡೆಸಿದ್ದು, ಸರ್ವಶಿಕ್ಷಾ ಅಭಿಯಾನದ ಅಧಿಕೃತ ವೆಬ್‌ಸೈಟ್ ಯಾವುದು ಎಂದು ಕಂಡು ಹಿಡಿದಿದೆ.
ಪ್ರೆಸ್ ಇನ್ ಫಾರ್ಮೇಶನ್ ಬ್ಯೂರೋ ಮಾಡಿರುವ ಫ್ಯಾಕ್ಟ್ ಚೆಕ್ ಅನ್ನು ಕೂ ಮಾಡಿದ್ದು, ಮೇಲೆ ತಿಳಿಸಿರುವ ವೆಬ್ ಸರ್ಕಾರದ ಜೊತೆ ಸಂಯೋಜಿತವಾಗಿಲ್ಲ ಎಂದು ಹೇಳಿದೆ. ಅಧಿಕೃತ ವೆಬ್‌ಸೈಟ್: https://t.co/pCjN1ZGIMW ಇದನ್ನು ಫಾಲೋ ಮಾಡುವಂತೆ ತಿಳಿಸಿದೆ.
ಈ ಕುರಿತು ಮಾಹಿತಿ ನೀಡುತ್ತಿರುವ ಶಿಕ್ಷಣ ಸಚಿವಾಲಯವು, ಅಮಾಯಕ ಅರ್ಜಿದಾರರನ್ನು ವಂಚಿಸಲು www.sarvashiksha.online, https://samagra.shikshaabhiyan.co.in, https://shikshaabhiyan.org.in ಈ ರೀತಿಯ ಹಲವಾರು ವೆಬ್‌ಸೈಟ್‌ಗಳನ್ನು ಸರ್ಕಾರದ ಯೋಜನೆ ಅನುಸಾರ ರಚಿಸಲಾಗಿದೆ ಎಂದು ಶಿಕ್ಷಣ ಸಚಿವಾಲಯದ ಗಮನಕ್ಕೆ ಬಂದಿದೆ
ವೆಬ್‌ಸೈಟ್‌ಗಳು ಮಹತ್ವಾಕಾಂಕ್ಷಿ ಅಭ್ಯರ್ಥಿಗಳಿಗೆ ಮೂಲ ವೆಬ್‌ಸೈಟ್ ರೀತಿಯ ವಿನ್ಯಾಸದ ಮೂಲಕ ಉದ್ಯೋಗಾವಕಾಶಗಳನ್ನು ನೀಡುವುದಾಗಿ ಹೇಳುತ್ತಾ ಉದ್ಯೋಗಾಕಾಂಕ್ಷಿಗಳನ್ನು ದಾರಿ ತಪ್ಪಿಸುತ್ತಿವೆ ಮತ್ತು ಅರ್ಜಿಗಳಿಗೆ ಪ್ರತಿಕ್ರಿಯಿಸಿದವರ ಬಳಿ ಹಣವನ್ನು ಕೇಳುತ್ತಿವೆ. ಆದರೆ, ಈ ವೆಬ್‌ಸೈಟ್‌ಗಳು ಉದ್ಯೋಗಗಳ ಭರವಸೆ ಮತ್ತು ನೇಮಕಾತಿ ಪ್ರಕ್ರಿಯೆಗೆ ಹಣದ ಬೇಡಿಕೆಯಿಡುವ ಇತರ ವೆಬ್‌ಸೈಟ್‌ಗಳು/ಸಾಮಾಜಿಕ ಮಾಧ್ಯಮ ಖಾತೆಗಳ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಗಮನಕ್ಕೆ ಬಂದಿವೆ.
ಸಾರ್ವಜನಿಕರಿಗೆ ಈ ಮೂಲಕ, ಅಂತಹ ವೆಬ್‌ಸೈಟ್‌ಗಳಲ್ಲಿ ಉದ್ಯೋಗಾವಕಾಶಗಳಿಗಾಗಿ ಅರ್ಜಿ ಸಲ್ಲಿಸುವುದನ್ನು ತಪ್ಪಿಸಲು ಮತ್ತು ತಮ್ಮ ಸ್ವಂತ ಹಿತಾಸಕ್ತಿಗಳನ್ನು ಕಾಪಾಡಲು ಸಂಬಂಧಪಟ್ಟ ಇಲಾಖೆಯ ಅಧಿಕೃತ ವೆಬ್‌ಸೈಟ್/ವೈಯಕ್ತಿಕ ವಿಚಾರಣೆ/ದೂರವಾಣಿ ಕರೆ/ಇ-ಮೇಲ್‌ಗೆ ಭೇಟಿ ನೀಡುವ ಮೂಲಕ ವೆಬ್‌ಸೈಟ್‌ಗಳು ಅಧಿಕೃತವಾಗಿವೆ ಎಂದು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ. ಈ ವೆಬ್‌ಸೈಟ್‌ಗಳಲ್ಲಿ ಅರ್ಜಿ ಸಲ್ಲಿಸುವ ಯಾವುದೇ ವ್ಯಕ್ತಿಯು ವೆಚ್ಚ ಮತ್ತು ಅದರ ಪರಿಣಾಮಗಳಿಗೆ ಜವಾಬ್ದಾರನಾಗಿರುತ್ತಾನೆ ಎಂದು ಸೂಚಿಸಿದೆ.