ನಾನ್ ವೆಜ್ ಪ್ರಿಯರೇ ಗಮನಿಸಿ, ‘ಚಿಕನ್ ಲೆಗ್’ ಪೀಸ್ ತಂದ ಗ್ರಾಹಕನಿಗೆ ಕಾದಿತ್ತು ಬಿಗ್ ಶಾಕ್

Share the Article

ಕೆಲವರಿಗೆ ಮಾಂಸದ ಊಟ ಇಲ್ಲದಿದ್ದರೆ ಊಟ ಸೇರಲ್ಲ. ಅಷ್ಟೊಂದು ನಾನ್ ವೆಜ್ ಪ್ರಿಯರಿದ್ದಾರೆ ನಮ್ಮಲ್ಲಿ. ಅಂತಹ ಊಟ ಪ್ರಿಯರಿಗೆ ಯಾವುದಾದರಲ್ಲೂ ಏನಾದರೂ ಅಸಹ್ಯವಾಗಿರುವಂಥದ್ದು ಸಿಕ್ಕರೆ ಏನಾಗಬೇಡ ಹೇಳಿ? ಅಂಥದ್ದೇ ಒಂದು ಘಟನೆ ಒಬ್ಬ ಗ್ರಾಹಕರಿಗೆ ಆಗಿದೆ.

ಹೌದು, ಗ್ರಾಹಕನೋರ್ವ ಹೋಟೆಲ್ ಒಂದರಲ್ಲಿ ಚಿಕನ್ ಲೆಗ್ ಪೀಸ್ ಪಾರ್ಸೆಲ್ ತೆಗೆದುಕೊಂಡು ತನ್ನ ಮನೆಗೆ ಬಂದು‌, ಇನ್ನೇನು ಬಹಳ‌ ಹಸಿವಿನಿಂದ ಪಾರ್ಸೆಲ್ ಓಪನ್ ಮಾಡಿದಾಗ, ಚಿಕನ್‌ನಲ್ಲಿ ಹುಳ ಪತ್ತೆಯಾಗಿದೆ. ಈ ಘಟನೆ ಕೆಜಿಎಫ್ ನಗರದ ಪಿಚರ್ಡ್ ರಸ್ತೆಯಲ್ಲಿರುವ ಇಬ್ರಾ ಹೋಟೆಲ್ ನಲ್ಲಿ ಪತ್ತೆಯಾಗಿದೆ.

ಕೆಜಿಎಫ್ ನಗರದ ವಿನೋದ್ ಎಂಬುವವರು ತೆಗೆದುಕೊಂಡ ಚಿಕನ್ ಲೆಗ್ ಪೀಸ್‌ನಲ್ಲಿ ಹುಳ ಪತ್ತೆಯಾಗಿದೆ. ಸಿಟ್ಟುಗೊಂಡ ಗ್ರಾಹಕ ಚಿಕನ್ ಪೀಸ್ ಸಮೇತ ಹೋಟೆಲ್‌ಗೆ ಬಂದು ಮಾಲೀಕರನ್ನ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

ಈ ವೇಳೆ ಪರಿಶೀಲಿಸಿದಾಗ ಹೋಟೆಲ್‌ನ ಮತ್ತಷ್ಟು ಚಿಕನ್ ಪೀಸ್ ನಲ್ಲೂ ಹುಳ ಪತ್ತೆಯಾಗಿದೆ. ಸ್ಥಳಕ್ಕೆ ನಗರಸಭೆ ಆಹಾರ ನಿರೀಕ್ಷಕರು ಭೇಟಿ ನೀಡಿದ್ದು, ಹೋಟೆಲ್‌ಗೆ ಬೀಗ ಮುದ್ರೆ ಜಡಿದಿದ್ದಾರೆ.

Leave A Reply