BREAKING NEWS: ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 18 ರಿಂದ ಆರಂಭ

ನವದೆಹಲಿ: ಮಳೆಗಾಲದ ಸಂಸತ್ ಅಧಿವೇಶನಕ್ಕೆ ಕೊನೆಗೂ ದಿನಾಂಕ ಹೊರಬಿದ್ದಿದೆ. ಜುಲೈ 18, 2022ರಿಂದ ಆರಂಭಗೊಳ್ಳಲಿದೆ.

 

ಈ ಕುರಿತಂತೆ ಲೋಕಸಭೆ ಕಾರ್ಯಾಲಯದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

9ನೇ ಅವಧಿಯ 17ನೇ ಲೋಕಸಭಾ ಅಧಿವೇಶನವನ್ನು ದಿನಾಂಕ 18-07-2022ರಿಂದ ಆರಂಭಗೊಂಡು, ದಿನಾಂಕ 12-08-2022ರವರೆಗೆ ನಡೆಸಲು ನಿಗದಿ ಪಡಿಸಲಾಗಿದೆ ಎಂದು ತಿಳಿಸಿದೆ.

ಸಂಸತ್ ಅಧಿವೇಶನ ಸಂದರ್ಭದಲ್ಲಿ ವಿವಿಧ ವಿಷಯಗಳನ್ನು ಒಳಗೊಂಡು ಪ್ರತಿಪಕ್ಷಗಳು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳೋದಕ್ಕೆ ಪ್ಲಾನ್ ಮಾಡುತ್ತಿವೆ. ಜುಲೈ.18ರಿಂದ ಆರಂಭಗೊಳ್ಳಲಿರುವಂತ ಲೋಕಸಭಾ ಅಧಿವೇಶನದವರೆಗೆ ಈ ಬಗ್ಗೆ ಕಾದು ನೋಡಬೇಕಿದೆ.

Leave A Reply

Your email address will not be published.