ಮಂಗಳೂರು : ರೈಲು ಹಳಿ ಮೇಲೆ ಗುಡ್ಡ ಕುಸಿತ, ಎರಡು ರೈಲುಗಳ ಸಂಚಾರ ರದ್ದು

Share the Article

ಮಂಗಳೂರು: ತೀವ್ರ ಮಳೆಯಾಗುತ್ತಿರುವ ಕಾರಣ, ಮಂಗಳೂರು ಹೊರವಲಯದ ಪಡೀಲು ಬಳಿಯ ರೈಲು ಹಳಿ ಮೇಲೆ ಗುಡ್ಡ ಕುಸಿದ ಘಟನೆ ಇಂದು ನಡೆದಿದೆ.

ರೈಲು ಹಳಿ ಮೇಲೆ ಕುಸಿದ ಗುಡ್ಡವನ್ನ ತೆರವು ಮಾಡುವ ಕಾರ್ಯ ನಡೆಯುತ್ತಿರುವುದರಿಂದಾಗಿ, ಎರಡು ರೈಲುಗಳ ಸಂಚಾರವನ್ನು ರೈಲ್ವೆ ಇಲಾಖೆ ರದ್ದು ಮಾಡಿದೆ. ಮಂಗಳೂರು-ಸುಬ್ರಹ್ಮಣ್ಯ ಮಾರ್ಗದ ಎರಡು ವಿಶೇಷ ರೈಲುಗಳ(.06488 ಮತ್ತು 06489) ಸಂಚಾರ ಇಂದು ಸ್ಥಗಿತಗೊಂಡಿದೆ.

Leave A Reply