KPSC Jobs: ಔಷಧ ವಿತರಕರು ಹುದ್ದೆಗೆ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹತಾ ಪಟ್ಟಿ, ವೇಳಾಪಟ್ಟಿ ಪ್ರಕಟ

Share the Article

ಆಯುಷ್ ನಿರ್ದೇಶನಾಲಯದಲ್ಲಿನ ಔಷಧ ವಿತರಕರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಇದೀಗ ದಾಖಲೆ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸದರಿ ಹುದ್ದೆಗೆ ಅರ್ಜಿ ಸಲ್ಲಿಸಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ 1:3 ಅರ್ಹತಾ ಪಟ್ಟಿ ಚೆಕ್ ಮಾಡಬಹುದು.

ಔಷಧ ವಿತರಕರು ಹುದ್ದೆಗಳ ನೇಮಕಾತಿಗೆ ದಾಖಲೆ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ 1:3 ಅರ್ಹತಾ ಪಟ್ಟಿ ಚೆಕ್ ಮಾಡಲು ಕೆಪಿಎಸ್‌ಸಿ ವೆಬ್‌ಸೈಟ್ https://www.kpsc.kar.nic.in/ ವೆಬ್ಸೈಟ್ ಗೆ ಭೇಟಿ ನೀಡಬಹುದು. ಅಥವಾ ಈ ಕೆಳಗೆ ನೀಡಲಾದ ಡೈರೆಕ್ಟ್ ಲಿಂಕ್ ಅನ್ನು ಸಹ ಚೆಕ್ ಮಾಡಬಹುದು.

ಅರ್ಹತಾ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು, ರಿಜಿಸ್ಟರ್ ನಂಬರ್, ದಾಖಲೆ ಪರಿಶೀಲನೆ ದಿನಾಂಕ ಮತ್ತು ಸಮಯವನ್ನು ಲಿಸ್ಟ್‌ನಲ್ಲಿ ನೀಡಲಾಗಿದೆ. ಯಾವ ಅಭ್ಯರ್ಥಿ ಯಾವ ದಿನಾಂಕದಂದು ಮತ್ತು ಎಷ್ಟು ಗಂಟೆಗೆ ಹಾಜರಾಗಬೇಕು ಎಂದು ಸಹ ಮಾಹಿತಿ ನೀಡಲಾಗಿದೆ.

ದಾಖಲೆ ಪರಿಶೀಲನೆಗೆ ಹಾಜರುಪಡಿಸಬೇಕಾದ ಡಾಕ್ಯುಮೆಂಟ್‌ಗಳು :
ಆಧಾರ್ ಕಾರ್ಡ್
ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ
ಜಾತಿ ಪ್ರಮಾಣ ಪತ್ರ
ಮೀಸಲಾತಿ ಕೋರಿದ್ದಲ್ಲಿ ದಾಖಲೆಗಳು
ಜನ್ಮ ದಿನಾಂಕ ಪ್ರಮಾಣ ಪತ್ರ
ಮಾಜಿ ಸೈನಿಕರಾಗಿದ್ದಲ್ಲಿ ಪ್ರಮಾಣ ಪತ್ರ
ಇತರೆ ದಾಖಲೆಗಳು

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply