ಉತ್ತಮ ಅಂಕಗಳೊಂದಿಗೆ ದ್ವಿತೀಯ ಪಿಯುಸಿ ತೇರ್ಗಡೆಯಾದ ಸಂಯೋಜಿತ ಅವಳಿ ಸಹೋದರಿಯರು!!

Share the Article

ಕೆಲವು ವರ್ಷಗಳ ಹಿಂದೆ ಹೈದರಾಬಾದ್ ನಲ್ಲಿ ಈ ಸಂಯೋಜಿತ ಅವಳಿ ಮಕ್ಕಳ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದೀಗ ಬಂದ ಸುದ್ದಿ ಎಂದರೆ ಈ ಅವಳಿ ಮಕ್ಕಳು ಉತ್ತಮ ಅಂಕಯೊಂದಿಗೆ ದ್ವಿತೀಯ ಪಿಯುಸಿ ಪಾಸ್ ಆಗಿದ್ದಾರೆ.

ಹೈದರಾಬಾದ್ ನ ಯೂಸುಫ್ ಗುಡದ ವಾಣಿ ಮತ್ತು ವೀಣಾ ಎಂಬಾ ಅವಳಿ ಮಕ್ಕಳು ಎಲ್ಲಾ ಅಡೆ ತಡೆಗಳನ್ನು ಮೀರಿ ಪ್ರಥಮದರ್ಜೆ ಫಲಿತಾಂಶ ದೊಂದಿಗೆ ತೇರ್ಗಡೆಯಾಗಿದ್ದಾರೆ. ಅರ್ಥಶಾಸ್ತ್ರ ಮತ್ತು ವಾಣಿಜ್ಯ, ರಾಜ್ಯಶಾಸ್ತ್ರ ವಿಷಯಗಳನ್ನು ತೆಗೆದುಕೊಂಡಿದ್ದು, ಇಬ್ಬರು ಪ್ರತ್ಯೇಕವಾಗಿ ಪರೀಕ್ಷೆ ಬರೆದಿದ್ದರು.

ವಾಣಿ 712 ಅಂಕ ಹಾಗೂ ವೀಣಾ 707 ಅಂಕದೊಂದಿಗೆ ತೇರ್ಗಡೆಯಾಗಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇಬ್ಬರು ಇಂಗ್ಲಿಷ್ ಮತ್ತು ತೆಲುಗು ವಿಷಯದಲ್ಲಿ ಉತ್ತಮ ಅಂಕಗಳನ್ನು ಗಳಿಸಿರುವುದು ಉಲ್ಲೇಖನೀಯ .

Leave A Reply