ಗ್ರಾಹಕರಿಗೆ ಗುಡ್ ನ್ಯೂಸ್ !! | ಸದ್ಯದಲ್ಲೇ ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ಭಾರೀ ಇಳಿಕೆ ಸಾಧ್ಯತೆ
ತುರ್ತಾಗಿ ಮೊಬೈಲ್ ಕೊಳ್ಳುವ ಯೋಜನೆಯಲ್ಲಿ ನೀವಿದ್ದರೆ, ಈ ಪ್ಲ್ಯಾನ್ ಅನ್ನು ಸ್ವಲ್ಪ ದಿನಗಳವರೆಗೆ ಮುಂದೂಡುವುದು ನಿಮಗೂ ನಿಮ್ಮ ಜೇಬಿಗೂ ಒಳಿತಾಗುವ ಸಾಧ್ಯತೆ ಇದೆ. ಯಾಕೆಂದರೆ ಹಣಕಾಸು ವರ್ಷದ 2ನೇ ಅರ್ಧದಲ್ಲಿ ಮೊಬೈಲ್‌ಗಳ ಬೆಲೆ ಭಾರೀ ಕುಸಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಸ್ಮಾರ್ಟ್ ಫೋನ್ ಕಂಪನಿಗಳು ಈಗಾಗಲೇ ಭಾರೀ ಪ್ರಮಾಣದಲ್ಲಿ ಮೊಬೈಲ್‌ಗಳ ಸ್ಟಾಕ್‌ಗಳನ್ನು ಇಟ್ಟುಕೊಂಡಿದ್ದು, ಮಾರಾಟವಾಗದೇ ಹಾಗೆಯೇ ಉಳಿದುಹೋಗುವ ಭೀತಿಯಲ್ಲಿವೆ. ಇನ್ನೇನು ಹಬ್ಬದ ಸೀಸನ್ ಹತ್ತಿರದಲ್ಲಿದ್ದು, ಇದರ ರಿಯಾತಿಯಿಯೊಂದಿಗೆ ಕಂಪನಿಗಳು ಸ್ಟಾಕ್‌ಗಳನ್ನು ಖಾಲಿ ಮಾಡಲು ಬೆಲೆಯನ್ನು ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಮಾಹಿತಿ ಪ್ರಕಾರ ದಸರಾ, ದೀಪಾವಳಿ ಹಬ್ಬಗಳ ಸಮಯದಲ್ಲಿ ಮೊಬೈಲ್ ಫೋನ್‌ಗಳ ಬೆಲೆ ಇಳಿಕೆಯಾಗಲಿದೆ. ಈ ಅವಕಾಶಗಳನ್ನು ಕಂಪನಿಗಳು ಕೂಡಾ ಬಳಸಿಕೊಳ್ಳಲು ಸಜ್ಜಾಗಿದ್ದು, ತಮಗೂ ಲಾಭವಾಗುವಂತೆ ಇಎಂಐ ಮೂಲಕ ವೆಬ್‌ಸೈಟ್ ಹಾಗೂ ಆಫ್‌ಲೈನ್ ಸ್ಟೋರ್‌ಗಳಲ್ಲಿ ಮಾರಾಟ ಮಾಡಲು ಮುಂದಾಗಿವೆ.
ಹಳೆ ಸ್ಟಾಕ್‌ಗಳನ್ನು ಖಾಲಿ ಮಾಡುವ ಉದ್ದೇಶದಿಂದ ಕಂಪನಿಗಳಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದು ಒಂದೇ ಪರಿಹಾರವಾಗಿದ್ದು, ಹೀಗಾಗಿ ಕಂಪನಿಗಳು ಈ ಹಾದಿಯನ್ನೇ ತುಳಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಅಂಜಾಜಿನ ಪ್ರಕಾರ 5-8 ಕೋಟಿಯಷ್ಟು ಮೊಬೈಲ್‌ಗಳ ದಾಸ್ತಾನು ಇದ್ದು, ಇದನ್ನು ಆದಷ್ಟು ಬೇಗ ಖಾಲಿ ಮಾಡುವ ಅನಿವಾರ್ಯತೆಯೂ ಇದೆ. ಮುಂದಿನ ತಿಂಗಳಿನಿಂದ ಸಾಲು ಸಾಲು ಹಬ್ಬಗಳು ಪ್ರಾರಂಭವಾಗುವುದರಿಂದ ಚೀನಾ ಮೂಲದ ಕಂಪನಿಗಳು ಸೇರಿದಂತೆ ಹಲವು ಕಂಪನಿಗಳು ಭಾರತದ ಮಾರುಕಟ್ಟೆಗೆ ಸ್ಟಾಕ್‌ಗಳನ್ನು ಸುರಿಯಬಹುದು ಎಂದು ವರದಿಯಾಗಿದೆ.