ಶಿಂಧೆ ಬಣಕ್ಕೆ ಜಿಗಿದ ಮತ್ತೊಬ್ಬ ಸಂಪುಟ ಸಚಿವ!

ಮುಂಬಯಿ: ಮಹಾರಾಷ್ಟ್ರದಲ್ಲಿ ಶಿವಸೇನಾದಲ್ಲಿ ರಾಜಕೀಯ ಸ್ಥಿರತೆ ಇಂದು ಕೂಡ ಮುಂದುವರೆದಿದ್ದು ಅದು ಐದನೇ ದಿನಕ್ಕೆ ತಲುಪಿದೆ. ಅಷ್ಟರಲ್ಲಿ ಬಹುಪಾಲು ಘಟಾನುಘಟಿ ನಾಯಕರುಗಳು ಉದ್ದವಾದ ಕ್ರಿಯಾ ಬಡವರನ್ನು ತೊರೆದು ಶಿಂಧೆ ಬಣ ಸೇರಿಕೊಂಡಿದ್ದಾರೆ.

ಈಗ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಳಿ ಉಳಿದಿರುವುದು ಮಗ ಆದಿತ್ಯ ಠಾಕ್ರೆ ಮಾತ್ರ.
ವಿಧಾನಸಭೆಯಲ್ಲಿ ಸಂಪುಟ ಸಚಿವರ ಪೈಕಿ, ಉದ್ಧವ್ ಠಾಕ್ರೆ ಜತೆ ಈಗ ಉಳಿದಿರುವ ಶಿವಸೇನಾದ ಸಚಿವರೆಂದರೆ ಅವರ ಮಗ ಆದಿತ್ಯ ಠಾಕ್ರೆ ಮಾತ್ರ. ಉಳಿದ ಇನ್ನಿಬ್ಬರು ಸಚಿವರಾದ ಅನಿಲ್ ಪರಬ್ ಮತ್ತು ಸುಭಾಶ್ ದೇಸಾಯಿ ಅವರು ವಿಧಾನ ಪರಿಷತ್‌ನಿಂದ ಆಯ್ಕೆಯಾದವರು. ಇನ್ನೊಬ್ಬ ಸಂಪುಟ ಸಚಿವ ಶಂಕರರಾವ್ ಗಡಾಖ್ ಅವರು ಕ್ರಾಂತಿಕಾರಿ ಶೆಟ್ಕಾರಿ ಎಂಬ ಪಕ್ಷದವರಾಗಿದ್ದು, ಆ ಮೂಲಕ ಸಂಪುಟ ದರ್ಜೆಯ ಎಲ್ಲಾ ಸಚಿವರು ಖಾಲಿ, ಮಗ ಆದಿತ್ಯ ಟಾಕ್ರೆ ಬಿಟ್ಟು.

ಏಕನಾಥ್ ಶಿಂಧೆ, ದಾದಾ ಭುಸೆ, ಗುಲಾಬ್‌ರಾವ್ ಪಾಟೀಲ್, ಸಂದೀಪನ್ ಭೂಮ್ರೆ, ಉದಯ್ ಸಾಮಂತ್ ಬಂಡಾಯ ಶಾಸಕರ ಗುಂಪಿನಲ್ಲಿನ ಸಂಪುಟ ದರ್ಜೆ ಸಚಿವರಾಗಿದ್ದಾರೆ. ಇನ್ನು, ಶಂಭುರಾಜ್ ದೇಸಾಯಿ, ಅಬ್ದುಲ್ ಸತ್ತಾರ್, ರಾಜೇಂದ್ರ ಪಾಟೀಲ್ ಯೆದ್ರೋಕರ್ ಮತ್ತು ಬಚ್ಚು ಕಡು (ಪ್ರಹಾರ್ ಜನಶಕ್ತಿ ಪಕ್ಷ) ಶಿಂಧೆ ಬಣದಲ್ಲಿರುವ ರಾಜ್ಯ ಖಾತೆ ಸಚಿವರಾಗಿದ್ದಾರೆ.

Leave A Reply

Your email address will not be published.