ನೀಲಿ ಬಿಕಿನಿಯಲ್ಲಿ ಕನ್ನಡತಿ ಸೀರಿಯಲ್ ನಟಿ !!
ಬಾಲಿವುಡ್ ನಟಿಯರು ಮಾತ್ರ ಬಿಕಿನಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಬ್ರಾಂಡಿಂಗ್ ಯಾಕೆ
ನಾವೇನೂ ಕಡಿಮೆ ಇಲ್ಲ ಅನ್ನುವ ಹಾಗೆ ಸಾರಾ ಅಣ್ಣಯ್ಯ ಬಿಕಿನಿ ಹಾಕಿದ್ದಾಳೆ. ಸಾರಾ ಸಾರಾ ಸೌಂದರ್ಯವನ್ನು ಬಿಕಿನಿಯ ಮೂಲಕ ಸೋಷಿಯಲ್ ಮೀಡಿಯಾಗೂ ತೆರೆದಿಟ್ಟು ನೋಡ್ಕೊಳ್ಳಿ ಎಂದಿದ್ದಾಳೆ.
ಕನ್ನಡತಿ ಸೀರಿಯಲ್ ನಟಿ ಸಾರಾ ಅಣ್ಣಯ್ಯ ಅಂದ್ರೆ ಕಂಡು ಹಿಡಿಯೋದು ಕಷ್ಟ. ವರುಧಿನಿ ಅಂದ್ರೆ ಜನ ಫಕ್ಕನೆ, ಓ ಅವ್ಲಾ ? ಅಂತ ಕಂಡು ಹಿಡಿಯುವಶ್ಟರ ಮಟ್ಟಿಗೆ ಆಕೆಯ ಪಾತ್ರ ಫೇಮಸ್.
ಆ ಫೋಟೋದಲ್ಲಿ ಆಕಾಶ ನೀಲಿ ಬಣ್ಣದ ಬಿಕಿನಿಯಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿರುವ ಸಾರಾ ಅಣ್ಣಯ್ಯ, ಈ ಬಿಕಿನಿ ಫೋಟೋಗಳ ಕಾರಣ ಒಂದಷ್ಟು ಹೊಸ ಪಡ್ಡೆಗಳನ್ನು ಸೃಷ್ಟಿ ಮಾಡಿದ್ದಾಳೆ.
ಕನ್ನಡತಿ ಸೀರಿಯಲ್ ನೋಡುವ ಪ್ರೇಕ್ಷಕರಿಗೆ ವರುಧಿನಿ ಪಾತ್ರದ ಸಾರಾ ಅಣ್ಣಯ್ಯ ಚಿರಪರಿಚಿತರು. ಈ ಧಾರಾವಾಹಿಯಲ್ಲಿ ಇಂಡಿಪೆಂಡೆಂಟ್ ವುಮನ್ ಪಾತ್ರದಲ್ಲಿ ಬೋಲ್ಡ್ ಆಗಿಯೇ ಕಾಣಿಸಿಕೊಂಡಿರುವ ಇವರು, ಮೂಲತಃ ಮಾಡೆಲ್. ಮಾಡೆಲಿಂಗ್ ಕ್ಷೇತ್ರದ ಸಾರಾ ಅಣ್ಣಯ್ಯ, ಒಂದು ರೀತಿಯಲ್ಲಿ ಖಡಕ್ ಪಾತ್ರದ ಮೂಲಕವೇ ಕನ್ನಡ ಕಿರುತೆರೆ ಜಗತ್ತಿಗೆ ಪರಿಚಯವಾದವರು. ಸಂಪ್ರದಾಯಸ್ಥ ಕುಟುಂಬದ ಮಹಿಳೆಯರು, ಈ ನಟಿಯನ್ನು ಬೈದುಕೊಳ್ಳುತ್ತಲೇ ಇಷ್ಟ ಪಡುವುದಕ್ಕೆ ಕಾರಣ, ಅವರ ನಟನೆ.
ಈ ಪಾತ್ರದ ಮೂಲಕ ಮಾತ್ರ ಮಾಡರ್ನ್ ಅಲ್ಲ ಈ ಸಾರಾ. ವೈಯಕ್ತಿಕ ಜೀವನದಲ್ಲಿ ಅಷ್ಟೇ ಬೋಲ್ಡ್ ಆಗಿದ್ದೇನೆ ಎನ್ನುವುದಕ್ಕೆ ಅವರ ಈ ಬ್ಲೂ ಬಿಕಿನಿ ಫೋಟೋಗಳೇ ಸಾಕ್ಷಿ. ಬಾಲಿವುಡ್ ನಟಿಯರಷ್ಟೇ ಅಲ್ಲ, ನಾವೂ ಕೂಡ ಇಂತಹ ಬಿಕಿನಿ ಧರಿಸಬಲ್ಲೆವು ಎಂದು ಆಕೆಯ ಈ ಫೋಟೊಗಳು ಸಾರಿದ್ದು. ಈ ಫೋಟೋಗಳು ಈ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.