ದ.ಕ : ಲಕ್ಷಗಟ್ಟಲೇ ಮೌಲ್ಯದ ಗಾಂಜಾ ಹೆರಾಯಿನ್ ನಾಶ !

Share the Article

ಮಂಗಳೂರು: ಅಂತಾರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ನ್ಯಾಯಾಲಯದಿಂದ ಆದೇಶವನ್ನು ಪಡೆದು
ಮಾದಕ ದ್ರವ್ಯ ವಿಲೇವಾರಿ ಸಮಿತಿ ಅಧ್ಯಕ್ಷ, ಎಸ್ಪಿ ಋಷಿಕೇಶ್ ಸೋನಾವಣೆ ಅವರ ಉಪಸ್ಥಿತಿಯಲ್ಲಿ
ವಿವಿಧ ಠಾಣೆಯ 11 ಪ್ರಕರಣದಲ್ಲಿ ಸುಮಾರು 23,75,300 ರೂಪಾಯಿ ಮೌಲ್ಯದ 53 ಕೆ.ಜಿ 128 ಗ್ರಾಂ ಮಾದಕ ವಸ್ತು ಗಾಂಜಾವನ್ನು ಮತ್ತು 30 ಲಕ್ಷ ರೂಪಾಯಿ ಮೌಲ್ಯದ 120 ಗ್ರಾಂ ಹೆರಾಯಿನ್‌ನ್ನು ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆ, ಸಂಸ್ಕರಣೆ ಮತ್ತು ವಿಲೇವಾರಿ ಘಟಕದ ರಾಮ್ಕಿ ಎನರ್ಜಿ ಮತ್ತು ಎನ್ವಿರೋನ್‌ಮೆಂಟ್ ಲಿಮಿಟೆಡ್ ಇವರಿಗೆ ಹಸ್ತಾಂತರಿಸಿ ನಾಶಪಡಿಸಲಾಯಿತು.

Leave A Reply