ಆನ್‌ಲೈನ್ ಕ್ಲಾಸ್‌ನಲ್ಲಿ ಹೋಂ ವರ್ಕ್ ಬದಲಿಗೆ ಅಶ್ಲೀಲ ವೀಡಿಯೋ ಹಂಚಿಕೊಂಡ 6ನೇ ಕ್ಲಾಸ್ ವಿದ್ಯಾರ್ಥಿ !!
ಈಗಿನ ಮಕ್ಕಳು ಮೊಬೈಲ್ ಹಿಡಿದುಕೊಂಡು ಏನು ಮಾಡುತ್ತಾರೆ ಎಂಬುದೇ ತಿಳಿಯದು. ಅಂತೆಯೇ ಇಲ್ಲಿ ಆನ್‌ಲೈನ್ ತರಗತಿ ವೇಳೆ 6ನೇ ತರಗತಿ ವಿದ್ಯಾರ್ಥಿಯೊಬ್ಬ ಹೋಂ ವರ್ಕ್ ಕಳುಹಿಸುವ ಬದಲಾಗಿ ಅಶ್ಲೀಲ ವೀಡಿಯೋ ಕ್ಲಿಪ್ ಕಳುಹಿಸಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿ ಸರ್ಕಾರಿ ಶಾಲೆಯ 6ನೇ ತರಗತಿಯ ವಿದ್ಯಾರ್ಥಿಯೊಬ್ಬ ಶಿಕ್ಷಕರು ಹೋಂ ವರ್ಕ್‌ಗಳನ್ನು ಹಂಚಿಕೊಳ್ಳಲು ವಿದ್ಯಾರ್ಥಿಗಳಿಗಾಗಿ ಮಾಡಿದ್ದ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಹೋಂ ವರ್ಕ್ ಬದಲಾಗಿ ಅಶ್ಲೀಲ ವೀಡಿಯೋ ಹಂಚಿಕೊಂಡಿದ್ದಾನೆ.
ಈ ಕುರಿತು ಶಾಲೆ ಪ್ರಾಂಶುಪಾಲರು ನೀಡಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಬಾಲಾಪರಾಧಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ನಂತರ ವಿದ್ಯಾರ್ಥಿಯನ್ನು ಬಾಲಮಂದಿರದಲ್ಲಿರಿಸಿ ಕೌನ್ಸೆಲಿಂಗ್ ನೀಡಲಾಗಿದೆ ಎಂದು ಡಿಸಿಪಿ (ಈಶಾನ್ಯ ಜಿಲ್ಲೆ) ಸಂಜಯ್‌ಕುಮಾರ್ ಸೇನ್ ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೆಲ ದಿನಗಳ ಹಿಂದೆ ವಿದ್ಯಾರ್ಥಿಯೊಬ್ಬ ಆಕ್ಷೇಪಾರ್ಹ ವೀಡಿಯೋ ಕ್ಲಿಪ್ಪಿಂಗ್ ಹಾಕಿದಾಗ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಾಂಶುಪಾಲರು ಒತ್ತಾಯಿಸಿದ್ದರು. ಅಂತಹ ಚಿತ್ರಗಳು ಅಥವಾ ವೀಡಿಯೋಗಳನ್ನು ವಾಟ್ಸಾಪ್ ಗ್ರೂಪ್‌ಗಳಿಗೆ ಹಾಕದಂತೆ ವಿದ್ಯಾರ್ಥಿಗಳಿಗೆ ಮನವಿಯನ್ನೂ ಮಾಡಲಾಗಿತ್ತೆಂದು ಪ್ರಾಂಶುಪಾಲರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.