ವಾಹನ ಸವಾರರಿಗೆ ಸಿಹಿ ಸುದ್ದಿ; ಮನೆ ಬಾಗಿಲಿಗೆ ಬರಲಿದೆ ಇಂಧನ
ನಿಮ್ಮ ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರೆ, ನೀವು ಮನೆಯಿಂದಲೇ ಎಲ್ಲಾ ಸೇವೆಗಳನ್ನು ಪಡೆಯಬಹುದು. ಪೆಟ್ರೋಲ್ ಬೇಕಾದರೆ ಏನು ಮಾಡಬೇಕು, ಬಂಕ್ ಗೆ ಹೋಗಬೇಕು ಎಂದುಕೊಳ್ಳುತ್ತಿದ್ದಿರೆ? ಇಲ್ಲ ಇನ್ನು ಡೀಸೆಲ್, ಪೆಟ್ರೋಲ್ ಕೂಡ ಮನೆಗೆ ಬರುತ್ತಿದೆ.
ಗಾಡಿಯಲ್ಲಿ ಪೆಟ್ರೋಲ್ ಮುಗಿದು ಹೋದರೆ ವಾಹನವನ್ನು ತಳ್ಳಿಕೊಂಡು ಪೆಟ್ರೋಲ್ ಬಂಕ್ ಗೆ ಹೋಗಬೇಕಾದ ಪರಿಸ್ಥಿತಿ ಇರುತ್ತದೆ. ಆದರೆ ಈಗ ಅಂತಹ ಟೆನ್ಷನ್ ಇಲ್ಲ. ಸದ್ಯಕ್ಕೆ ಹೈದರಾಬಾದ್ ನಲ್ಲಿ ಡೀಸೆಲ್, ಪೆಟ್ರೋಲ್ ಕೂಡ ಮನೆಗೆ ಬರುತ್ತಿದೆ.
ಗೋಫ್ಯೂಲ್ ಇಂಡಿಯಾ ಮೊಬೈಲ್ ಅಪ್ಲಿಕೇಶನ್ನ ಸಹಾಯದಿಂದ ಮನೆಗೆ ಡೀಸೆಲ್ ಮತ್ತು ಪೆಟ್ರೋಲ್ ಅನ್ನು ಪೂರೈಸುತ್ತದೆ. ಈ ಸೇವೆಗಳು ಈಗಾಗಲೇ ಚೆನ್ನೈನಲ್ಲಿ ಲಭ್ಯವಿದೆ ಎಂದು ಕಂಪನಿಯ ಸಹ ಸಂಸ್ಥಾಪಕ ಆದಿತ್ಯ ಮೀಸಲ ಹೇಳಿದ್ದಾರೆ. ಕಂಪನಿಯು ಜುಲೈ-ಸೆಪ್ಟೆಂಬರ್‌ನಲ್ಲಿ ಗುವಾಹಟಿ ಮತ್ತು ಸೇಲಂನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.
HPCL CGM ಹರಿಪ್ರಸಾದ್ ಸಿಂಗ್ ಪಲ್ಲಿ, Gofuel ಅಡಿಯಲ್ಲಿ ಫ್ರಾಂಚೈಸ್ ಪಾಲುದಾರ, ಸುಶ್ಮಿತಾ ಎಂಟರ್‌ಪ್ರೈಸಸ್‌ನೊಂದಿಗೆ ತನ್ನ ಕಾರ್ಯಾಚರಣೆಗಳನ್ನು ಅನಾವರಣಗೊಳಿಸಿದರು. ಗ್ರಾಹಕರು ಆಯಪ್‌ನಲ್ಲಿ ಆರ್ಡರ್ ಮಾಡಿದರೆ ಅವರಿಗೆ ಬೇಕಾದ ಸ್ಥಳಕ್ಕೆ ಇಂಧನವನ್ನು ತಲುಪಿಸಲಾಗುತ್ತದೆ . ಕಂಪನಿಯು ಜುಲೈ-ಸೆಪ್ಟೆಂಬರ್‌ನಲ್ಲಿ ಗುವಾಹಟಿ ಮತ್ತು ಸೇಲಂನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. 2024 ರ ವೇಳೆಗೆ ದೇಶಾದ್ಯಂತ 1,000 ವಾಹನಗಳಿಗೆ ವಿಸ್ತರಿಸಲು ಯೋಜಿಸಿದೆ