ಶಿಕ್ಷಕ ಹುದ್ದೆಗಳ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ | ಮತ್ತೊಮ್ಮೆ 1 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ!

Share the Article

ಬೆಂಗಳೂರು : ಶಿಕ್ಷಕ ಹುದ್ದೆಗಳ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಮತ್ತೆ 1 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

2022-23 ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಗತ್ಯತೆ/ಹೆಚ್ಚುವರಿ ಇರುವ ಹುದ್ದೆಗಳ ಗುರ್ತಿಸುವಿಕೆ ಹಾಗೂ ಮರು ಹೊಂದಾಣಿಕೆ ಪ್ರಕ್ರಿಯೆ, ಪ್ರಸ್ತುತ ಜಾರಿಯಲ್ಲಿರುವುದರಿಂದ ಸರ್ಕಾರಿ ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರ ಹುದ್ದೆಗಳ ಅವಶ್ಯಕತೆ ಕಂಡು ಬರುತ್ತಿರುವ ಕಾರಣ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ತೀವ್ರವಾದ ಶಿಕ್ಷಕರ ಕೊರತೆ ಇರುವುದರಿಂದ ಮತ್ತೆ 1000 ಅತಿಥಿ ಶಿಕ್ಷಕರ ಹುದ್ದೆಗಳನ್ನು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ನೇಮಕ ಮಾಡಿಕೊಳ್ಳುವ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಆಯ್ಕೆ ಮಾಡಿಕೊಂಡ ಅತಿಥಿ ಶಿಕ್ಷಕರ ಗೌರವ ಸಂಭಾವನೆ
ಪಾವತಿಸಲು ತಾಲೂಕು/ವಲಯವಾರು ವಿವರಗಳನ್ನು
ಜಿಲ್ಲಾ ಉಪನಿರ್ದೇಶಕರು ಕ್ರೂಡಿಕರಿಸಿ, ತಾಲೂಕುವಾರು
ಅಗತ್ಯವಿರುವ ಅನುದಾನ ಬೇಡಿಕೆ ಸಹಿತ ದೃಢೀಕೃತ
ವರದಿಯನ್ನು ದಿನಾಂ 10-07-2022 ರೊಳಗಾಗಿ
primarydpi@gmai.com ಮುಖಾಂತರ ಇ-ಮೇಲ್ ನಲ್ಲಿ ಸಲ್ಲಿಸುವಂತೆ ತಿಳಿಸಲಾಗಿದೆ.

Leave A Reply