ರಂಗ ಕಲಾವಿದರಿಗೆ ಉದ್ಯೋಗವಕಾಶ; ಇಲ್ಲಿದೆ ಹೆಚ್ಚಿನ ವಿವರ

Share the Article

ರಂಗಾಯಣವು ಭಾರತೀಯ ರಂಗಶಿಕ್ಷಣ ಕೇಂದ್ರ-ರಂಗಶಾಲೆಯಲ್ಲಿ ಇಬ್ಬರು ರಂಗಶಿಕ್ಷಕರ ಹುದ್ದೆಗೆ ತಾತ್ಕಾಲಿಕವಾಗಿ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

ರಂಗಭೂಮಿಯಲ್ಲಿ ಅನುಭವವಿರುವ ಅಭ್ಯರ್ಥಿಗಳು ರಾಷ್ಟ್ರೀಯ ನಾಟಕ ಶಾಲೆಯ ಪದವಿ/ ರಾಜ್ಯದ ಯಾವುದೇ ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ಪದವಿ/ ಡಿಪ್ಲೋಮಾ ವಿದ್ಯಾರ್ಹತೆ ಪಡೆದಿರಬೇಕು. ರಂಗಭೂಮಿ ಅನುಭವ, ರಂಗ ಶಿಕ್ಷಣದಲ್ಲಿ ಶಿಕ್ಷಕರಾಗಿ ದುಡಿದ ಅನುಭವ ಹೊಂದಿರಬೇಕು

ಆಸಕ್ತ ಅಭ್ಯರ್ಥಿಗಳು ರಾಷ್ಟ್ರೀಯ ನಾಟಕ ಶಾಲೆಯ ಪದವಿ ಅಥವಾ ರಾಜ್ಯದ ಯಾವುದೇ ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ಪದವಿ ಅಥವಾ ಡಿಪ್ಲೊಮೋ ಪಡೆದ, ರಂಗಶಿಕ್ಷಣದಲ್ಲಿ ದುಡಿದ ಅನುಭವವಿರುವವರು ರಂಗಾಯಣದ ವೆಬ್‍ಸೈಟ್ www.rangayana.org ಇಂದ ಅರ್ಜಿ ನಮೂನೆ ಪಡೆದು ಜು.8 ರೊಳಗಾಗಿ ಉಪ ನಿರ್ದೇಶಕರು, ರಂಗಾಯಣ, ವಿನೋಬ ರಸ್ತೆ, ಮೈಸೂರು-05 ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.

ಜನ್ಮ ದಿನಾಂಕ ದೃಢೀಕರಣ ಪತ್ರ, ಎನ್.ಎಸ್.ಡಿ/ಡಿಪ್ಲೋಮಾ ಪ್ರಮಾಣ ಪತ್ರ, ರಂಗಶಿಕ್ಷಣ ಕೇಂದ್ರದ ಅನುಬವ ಪ್ರಮಾಣ ಪತ್ರ, ರಂಗಭೂಮಿ ಅನುಭವ ಕುರಿತು ಸ್ವವಿವರ ಪತ್ರ, ಆಧಾರ್ ಕಾರ್ಡ ದಾಖಲಾತಿಗಳೊಂದಿಗೆ ಜು.13 ರಂದು ಬೆಳಿಗ್ಗೆ 10.30 ಗಂಟೆಗೆ ಸಂದರ್ಶನಕ್ಕೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2512639,2512629 ಗೆ ಸಂಪರ್ಕಿಸಿ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply