‘ಬ್ಲೂಫಿಲಂ’ ವೀಕ್ಷಣೆಯ ನೌಕರಿ ಗಿಟ್ಟಿಸುವಲ್ಲಿ, 90 ಸಾವಿರ ಜನರನ್ನು ಹಿಂದಿಕ್ಕಿದ 22ರ ತರುಣಿ !!!

Share the Article

ಅನೇಕ ಜನರಿಗೆ ತಮಗಿಷ್ಟದ ನೌಕರಿ ದೊರಕಿಲ್ಲ ಎಂಬ ಕೊರಗಿನಿಂದ ಇರುತ್ತಾರೆ. ಒಂದು ವೇಳೆ ಇಷ್ಟದ ಕೆಲಸ ಸಿಕ್ಕರೆ ಅದರಲ್ಲೂ ಕೊಂಕು ಮಾತನಾಡುವವರೇ ಹೆಚ್ಚು. ಕೆಲವರು ನೌಕರಿಯ ವಿಷಯದಲ್ಲಿ ಕೆಲವು ಮಂದಿ ಅಸಮಾಧಾನವನ್ನೇ ಹೊಂದಿರುತ್ತಾರೆ. ಮನಸ್ಸಿಗೆ ಹಿಡಿಸದ ಕೆಲಸ ಸಿಗದೇ ಇರುವುದು ಅಥವಾ ಕಚೇರಿಯಲ್ಲಿನ ಕೆಲಸದ ಒತ್ತಡವೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತದೆ.

ಆದರೆ, ಸ್ಕಾಟ್ಲಂಡ್ ನಲ್ಲಿ ವಾಸಿಸುವ 22 ವರ್ಷದ ಪೋರಿಗೆ ನೌಕರಿ ದೊರೆತಿದ್ದು, ದೊರೆತ ನೌಕರಿಯೊಂದರಲ್ಲಿ ಆಕೆ ಪಾರ್ನ್ ವಿಡಿಯೋಗಳನ್ನು ವೀಕ್ಷಿಸಬೇಕಾಗಿದೆ. ಅಷ್ಟು ಮಾತ್ರವಲ್ಲದೆ ಈಕೆ ಪಾರ್ನ್ ವೀಡಿಯೋಗಳ ಮೇಲೆ ಸಂಶೋಧನೆ ನಡೆಸಬೇಕು. ಈ ಕೆಲಸಕ್ಕಾಗಿ ಆಕೆಗೆ ಕೈ ತುಂಬಾ ಹಣ ಕೂಡ ಸಿಗಲಿದೆ.

ಈ 22 ವರ್ಷದ ಯುವತಿ ಪಾರ್ನ್ ವಿಡಿಯೋಗಳ ಕುರಿತು ಸಂಶೋಧನೆ ನಡೆಸಬೇಕು. ಉತ್ತಮ ಪರಿಕಲ್ಪನೆಯನ್ನು ಆಧರಿಸಿ ಪಾರ್ನ್ ವೀಡಿಯೋಗಳನ್ನು ತಯಾರಿಸುವುದು ಇದರ ಹಿಂದಿನ ಮುಖ್ಯ ಉದ್ದೇಶ. ಈ ಕೆಲಸಕ್ಕಾಗಿ ಯುವತಿಗೆ ಪ್ರತಿ ಗಂಟೆಗೆ 1500 ವೇತನ ಸಿಗಲಿದೆ. ಬೆಡ್ ಬೈಬಲ್ ಪಾರ್ನ್ ಸೈಟ್ ಗಾಗಿ ಯುವತಿ ಈ ಕೆಲಸ ಮಾಡಬೇಕಾಗಲಿದೆ

ನ್ಯೂಯಾರ್ಕ್ ಪೋಸ್ಟ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಬೆಡ್-ಬೈಬಲ್ ಸೈಟ್ ನಲ್ಲಿ ಪಾರ್ನ್ ರಿಸರ್ಚ್ ಹೆಡ್ ಪೋಸ್ಟ್ ಗಾಗಿ ಸುಮಾರು 90 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ. ವಿಶ್ವಾದ್ಯಂತದಿಂದ ಬಂದ ಈ ಅಭ್ಯರ್ಥಿಗಳಲ್ಲಿ 22 ವರ್ಷದ ಯುವತಿ ರೆಬೆಕಾ ಡಿಕ್ಸನ್ ಕೊನೆಗೆ ಈ ನೌಕರಿ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಈ ಕಠಿಣ ಕಾಂಪಿಟೇಶನ್ ನಲ್ಲಿ ರೆಬೆಕಾ ಹಲವು ನಿಪುಣ ಅಭ್ಯರ್ಥಿಗಳನ್ನು ಹಿಂದಿಕ್ಕೆ ಹುದ್ದೆ ತನ್ನದಾಗಿಸಿಕೊಂಡಿದ್ದಾಳೆ.

ಪ್ರಸ್ತುತ ರೆಬೆಕಾ ಬೆಡ್-ಬೈಬಲ್ ನಲ್ಲಿ ಎಲ್ಲಕ್ಕಿಂತ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾದ 100 ಪಾರ್ನ್ ವಿಡಿಯೋಗಳ ಮೇಲೆ ಸಂಶೋಧನೆ ನಡೆಸುತ್ತಿದ್ದಾಳೆ. ನ್ಯೂಯಾರ್ಕ್ ಪೋಸ್ಟ್ ಗೆ ನೀಡಿರುವ ಒಂದು ಸಂದರ್ಶನದಲ್ಲಿ ಮಾತನಾಡಿರುವ ರೆಬೆಕಾ, ಪಾರ್ನ್ ರಿಸರ್ಚ್ ಹೆಡ್ ನೌಕರಿ ವಿಶ್ವದ ಅತ್ಯುತ್ತಮ ನೌಕರಿಯಾಗಿದೆ ಎಂದಿದ್ದಾಳೆ. ಇದೊಂದು ವಿಭಿನ್ನ ರೀತಿಯ ಕೆಲಸವಾಗಿದ್ದು, ಅದರ ವಿಭಿನ್ನ ಸವಾಲುಗಳಿಗೆ ತಾನು ಸಿದ್ಧಳಾಗಿರುವುದಾಗಿ ಹೇಳುತ್ತಾಳೆ. ನಾನೋರ್ವ ಮುಕ್ತ ಆಲೋಚನೆಗಳನ್ನು ಹೊಂದಿರುವ ಯುವತಿಯಾಗಿದ್ದು, ಹೊಸದನ್ನು ಪ್ರಯತ್ನಿಸುವಲ್ಲಿ ನನ್ನ ಯಾವುದೇ ಆಕ್ಷೇಪಣೆಗಳಿಲ್ಲ ಎನ್ನುತ್ತಾಳೆ.

ಆಕೆ ಅಲ್ಲಿ ಮಾಡಬೇಕಾದ ಕೆಲಸವೇನು? ಪಾರ್ನ್ ವೀಡಿಯೋ ಹೆಡ್ ನೌಕರಿಯಲ್ಲಿ ರೆಬೆಕಾ ಅತ್ಯಂತ ಸೂಕ್ಷ್ಮವಾಗಿ ಪಾರ್ನ್ ವೀಡಿಯೋಗಳನ್ನು ವೀಕ್ಷಿಸಬೇಕು. ಬ್ಲೂ ಫಿಲಂ ನಲ್ಲಿ ಇರೋ ಸದ್ದು ಹಾಗೂ ಅದರಲ್ಲಿ ಕೆಲಸ ಮಾಡುವ ಮಹಿಳೆ ಮತ್ತು ಪುರುಷರ ದತ್ತಾಂಶಗಳನ್ನೂ ಸಂಗ್ರಹಿಸಬೇಕು. ಇದರ ಜೊತೆಗೆ ವಿವಿಧ ಭಂಗಿಗಳ ಕುರಿತು ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸುವುದು ಈಕೆಯ ಕೆಲಸ.

Leave A Reply