ಸಾಹಸಮಯ ಕರ್ತವ್ಯ ನಿಷ್ಠೆ ಮೆರೆದ ಆರಕ್ಷಕ !! – ವೀಡಿಯೋ ವೈರಲ್

Share the Article

ಹೆಸರಿಗೆ ಮಾತ್ರ ಪೊಲೀಸ್ ಅಲ್ಲದೆ ತನ್ನ ಸಾಹಸಮಯ ಕರ್ತವ್ಯ ನಿಷ್ಠೆಗೆ ಸೈ ಏನಿಸಿಕೊಂಡಿದ್ದಾರೆ ಈ ಪೊಲೀಸ್. ಹೌದು. ಆರೋಪಿಯೊಬ್ಬನನ್ನು ಹಿಡಿಯುವ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ತೋರಿದ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಘಟನೆ ಕೇರಳದಲ್ಲಿ ನಡೆದಿದ್ದು, ಹಿರಿಯ ಪೊಲೀಸ್ ಅಧಿಕಾರಿ ಸ್ವಾತಿ ಲಾಕ್ರಾ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ನಡೆದ ಘಟನೆಯೇನು ಎಂಬುದನ್ನು ನೋಡೋಣ ಬನ್ನಿ..

ಆರೋಪಿಯೊಬ್ಬ ರಸ್ತೆ ಬದಿಯಲ್ಲಿ ತನ್ನ ವಾಹನ ನಿಲ್ಲಿಸಿಕೊಂಡು ನಿಂತಿರುತ್ತಾನೆ. ಆಗ ಪೊಲೀಸ್ ಜೀಪ್ ಒಂದು ನಿಧಾನವಾಗಿ ಬಂದು ಆತನ ಪಕ್ಕದಲ್ಲಿ ನಿಲ್ಲುತ್ತದೆ. ಆಗ ಆರೋಪಿ ಅಲರ್ಟ್ ಆಗುತ್ತಾನೆ. ಆತನನ್ನು ಹಿಡಿಯಲು ಸಬ್ ಇನ್ಸ್ಪೆಕ್ಟರ್ ವಾಹನದಿಂದ ಕೆಳಗಿಳಿಯುತ್ತಿದ್ದಂತೆ ಆರೋಪಿ ದೊಡ್ಡದಾದ ಮಚ್ಚು ಹಿಡಿದು ಹೇಗೆಂದಾಗೆ ಬೀಸಿದ್ದಾನೆ. ಇಷ್ಟಾದರೂ ಹೆದರದ ಎಸ್‌ಐ ಆತನನ್ನು ಹಿಡಿದಿದ್ದಾರೆ.

ಜೀವವನ್ನು ಲೆಕ್ಕಿಸದೆ ಕರ್ತವ್ಯ ಪಾಲಿಸಿದ ಸಬ್ ಇನ್ಸ್ಪೆಕ್ಟರ್ ಅರುಣ್ ಕುಮಾರರ ವಿಡಿಯೋ ವೈರಲ್ ಆಗಿದೆ. ಆರೋಪಿ ಸುಗತನ್ ನನ್ನು ಹಿಡಿದ ವೇಳೆ ಮಚ್ಚು ಬೀಸಿದ ಕಾರಣಕ್ಕೆ ಅರುಣ್ ಕುಮಾರ್ ಅವರ ಕೈಗೆ ತೀವ್ರ ಗಾಯವಾದ ಕಾರಣ 7 ಹೊಲಿಗೆಗಳನ್ನು ಹಾಕಲಾಗಿದೆ.

ವೈರಲ್ ವೀಡಿಯೋ
Leave A Reply