ಭಾರಿ ಮಳೆಗೆ ರಸ್ತೆಯಲ್ಲಿ ಈಜುತ್ತಿರುವ ಮೀನುಗಳು – ವಿಡಿಯೋ ವೈರಲ್

Share the Article

ಭಾರಿ ಮಳೆಯಿಂದಾಗಿ ರಸ್ತೆಯಲ್ಲಿ ನೀರು ತುಂಬಿ ಮೀನುಗಳೆಲ್ಲ ರಸ್ತೆಯಲ್ಲಿ ಈಜುತ್ತಿರುವ ವಿಡಿಯೋ ಈ ಹಿಂದೆ ವೈರಲ್ ಆಗಿದ್ದು, ಇದೀಗ ಈ ವಿಡಿಯೋದ ಅಸಲಿಯತ್ತು ಬಯಲಾಗಿದೆ.

ಅಸ್ಸಾಂನಲ್ಲಿ ಭಾರಿ ಮಳೆ ಸುರಿಯುತ್ತಿದೆ. ಈ ನಡುವೆ ಗುವಾಹಟಿಯ ರಸ್ತೆಯಲ್ಲಿ ತುಂಬಿದ ಮಳೆ ನೀರಿನಲ್ಲಿ ಮೀನುಗಳು ಈಜುತ್ತಿರುವುದು ಕಂಡುಬಂದಿದೆ ಎಂದು ಹೇಳುವ ವಿಡಿಯೋ ವೈರಲ್ ಆಗುತ್ತಿದೆ. ಟ್ವಿಟರ್ ವಿಡಿಯೋದಲ್ಲಿ ಇತ್ತೀಚಿನ ಅಸ್ಸಾಂ ಪ್ರವಾಹದಲ್ಲಿ ‘ಗುವಾಹಟಿಯಲ್ಲಿ ಮೀನುಗಳು ರಸ್ತೆಯಲ್ಲಿ ಈಜುತ್ತಿವೆ’ ಎಂದು ಶೀರ್ಷಿಕೆ ನೀಡಲಾಗಿತ್ತು.

ಆದರೆ, ಇದೀಗ ಅಸ್ಸಾಂನ ಗುವಾಹಟಿಯ ರಸ್ತೆಯಲ್ಲಿ ಮೀನುಗಳು ಇತ್ತು ಎಂದು ಹೇಳಲಾಗಿರುವ ಈ ವಿಡಿಯೋ ಸುಳ್ಳು ಎಂದು ಹಲವಾರು ಟ್ವಿಟ್ಟರ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಅಸಲಿಗೆ ರಸ್ತೆಯಲ್ಲಿ ತುಂಬಿದ ನೀರಿನಲ್ಲಿ ಮೀನುಗಳು ಈಜಾಡುತ್ತಿರುವ ದೃಶ್ಯ ಚೀನಾದ್ದಾಗಿದೆ. ಈ ಹಿಂದೆ ಚೀನೀ ಟ್ವೀಟ್‌ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ‘ಗುವಾಂಗ್‌ಡಾಂಗ್‌ನಲ್ಲಿ ನಿರಂತರ ಬಿರುಗಾಳಿ ಸಹಿತ ಮಳೆಯಿಂದಾಗಿ ಮೀನುಗಳು ರಸ್ತೆಗೆ ಬಂದಿವೆ’ ಎಂದು ಶೀರ್ಷಿಕೆ ನೀಡಲಾಗಿದೆ.

https://twitter.com/ZhihuYang/status/1535330837180207104?s=20&t=6sZqvYaxsFjm2pAZPw22HQ
Leave A Reply