30 ವರ್ಷಗಳ ಅಂತರದ ನಂತರ ಮಗನೊಂದಿಗೆ SSLC ಪರೀಕ್ಷೆ ಬರೆದ ಅಪ್ಪ ಪಾಸ್, ಮಗ!?

ಬದುಕಿನಲ್ಲಿ ಛಲ ಒಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇವರೇ ಸಾಕ್ಷಿ ನೋಡಿ. ತನ್ನ 43ನೇ ವಯಸ್ಸಿನಲ್ಲೂ ಹತ್ತನೇ ತರಗತಿ ಪರೀಕ್ಷೆಯನ್ನು ಮಗನೊಂದಿಗೆ ಕುಳಿತು ಓದಿ ಉತ್ತಿರ್ಣರಾಗಿದ್ದಾರೆ. ಆದರೆ ದುರದೃಷ್ಟ ಅಂದ್ರೆ ಇದೇ ನೋಡಿ. ಅಪ್ಪನೊಂದಿಗೆ ಪರೀಕ್ಷೆಗೆ ಕುಳಿತು ಅಪ್ಪ ಪಾಸ್, ಮಗ!!

ಹೌದು. ಪುಣೆಯ ವ್ಯಕ್ತಿ ಮತ್ತು ಅವರ ಮಗ ಇಬ್ಬರೂ ಈ ವರ್ಷ 10ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾಗಿದ್ದರು. ಆದರೆ, ತಂದೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಮಗ ಫೇಲ್ ಆಗಿರುವ ಘಟನೆ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರ ಸ್ಟೇಟ್ ಬೋರ್ಡ್ ಆಫ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್ ನಡೆಸಿದ ವಾರ್ಷಿಕ 10 ನೇ ತರಗತಿಯ ಪರೀಕ್ಷೆಗಳ ಫಲಿತಾಂಶಗಳನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಭಾಸ್ಕರ್ ವಾಘಮಾರೆ 10 ನೇ ತರಗತಿ ಪರೀಕ್ಷೆಯಲ್ಲಿ ಪಾಸ್‌ ಆಗಿದ್ದಾರೆ. ಇವರು 7 ನೇ ತರಗತಿಯ ನಂತರ ಶಿಕ್ಷಣವನ್ನು ತ್ಯಜಿಸಿ ತಮ್ಮ ಕುಟುಂಬವನ್ನು ಉಳಿಸಿಕೊಳ್ಳಲು ಉದ್ಯೋಗಕ್ಕೆ ತೆರಳಬೇಕಾಗಿತ್ತು.

ನಂತರ ಅವರು ಮತ್ತೆ ಅಧ್ಯಯನವನ್ನು ಪ್ರಾರಂಭಿಸಲು ಶುರುಮಾಡಿ, ಇದೀಗ 30 ವರ್ಷಗಳ ಅಂತರದ ನಂತರ, ಅವರು ತಮ್ಮ ಮಗನೊಂದಿಗೆ ಈ ವರ್ಷ 10 ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದರು. ಇದೀಗ ಹೊರ ಬಂದ ಫಲಿತಾಂಶದಲ್ಲಿ ತಂದೆ ಪಾಸ್‌ ಆಗಿದ್ದು, ಮಗ ಫೇಲ್‌ ಆಗಿದ್ದಾನೆ.

ಭಾಸ್ಕರ್ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಈಗ ಪರೀಕ್ಷೆಯಲ್ಲಿ ತೇರ್ಗಡೆಯಾದ ಖುಷಿಯಲ್ಲಿದ್ದೇನೆ. ಆದರೂ ನನ್ನ ಮಗ ಎರಡು ಪತ್ರಿಕೆಗಳಲ್ಲಿ ಫೇಲ್ ಆಗಿದ್ದಕ್ಕೆ ಬೇಸರವಾಗಿದೆ. ನನ್ನ ಮಗನಿಗೆ ಪೂರಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ನಾನು ಬೆಂಬಲಿಸುತ್ತೇನೆ. ಮುಂದೊಂದು ದಿನ ಅವನು ಅವುಗಳಿಂದ ತೇರ್ಗಡೆಯಾಗುತ್ತಾನೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು. ಒಟ್ಟಾರೆ, ಅಪ್ಪನ ಆತ್ಮವಿಶ್ವಾಸವೇ ಮಗನಿಗೆ ಸ್ಫೂರ್ತಿಯಾಗಬೇಕಿದೆ.

Leave A Reply

Your email address will not be published.