Home ದಕ್ಷಿಣ ಕನ್ನಡ ಉಡುಪಿ:ಯಶ್ ಪಾಲ್ ಸುವರ್ಣಾರಿಗೆ ಬೆದರಿಕೆ ಪ್ರಕರಣ!! ಆರೋಪಿ ಮಂಗಳೂರಿನ ಮಹಮ್ಮದ್ ಶಫಿ ಬಂಧನ

ಉಡುಪಿ:ಯಶ್ ಪಾಲ್ ಸುವರ್ಣಾರಿಗೆ ಬೆದರಿಕೆ ಪ್ರಕರಣ!! ಆರೋಪಿ ಮಂಗಳೂರಿನ ಮಹಮ್ಮದ್ ಶಫಿ ಬಂಧನ

Hindu neighbor gifts plot of land

Hindu neighbour gifts land to Muslim journalist

ಉಡುಪಿ: ಹಿಜಾಬ್ ಕಿಡಿ ಹತ್ತಿದ ಉಡುಪಿಯ ಮಹಿಳಾ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ, ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಬಂಧಿತ ಆರೋಪಿಯನ್ನು ಮಂಗಳೂರು ಹೊರವಲಯದ ಬಜ್ಪೆ ನಿವಾಸಿ ಮಹಮ್ಮದ್ ಶಫಿ ಎಂದು ಗುರುತಿಸಲಾಗಿದ್ದು, ಈತ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿರುವ ಪ್ರಮುಖ ಆರೋಪಿಯಾಗಿದ್ದಾನೆ.

ಮಳಲಿ ಮಸೀದಿ ವಿಚಾರದಲ್ಲಿ ಸುವರ್ಣ ರನ್ನು ಟಾರ್ಗೆಟ್ ಮಾಡಿದ್ದ ಈತ ಬೆದರಿಕೆ ಹಾಕಿದ್ದು, ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತ್ಯೇಕ ದೂರನ್ನು ದಾಖಲಿಸಿದ್ದವು.ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ನ್ಯಾಯಾಲಯವು ಬಂಧಿತ ಆರೋಪಿಗೆ 14ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.