Home News ಇಲ್ಲಿದೆ ವಿಶ್ವ ಅಪ್ಪದಿಂರ ದಿನದ ಇತಿಹಾಸ

ಇಲ್ಲಿದೆ ವಿಶ್ವ ಅಪ್ಪದಿಂರ ದಿನದ ಇತಿಹಾಸ

Hindu neighbor gifts plot of land

Hindu neighbour gifts land to Muslim journalist

ವಿಶ್ವದ ಹೆಚ್ಚಿನ ಭಾಗಗಳಲ್ಲಿ ಜೂನ್ ಮೂರನೇ ಭಾನುವಾರದಂದು ತಂದೆಯ ದಿನವೆಂದು ಸ್ಮರಿಸಲಾಗುತ್ತದೆ. ಫಾದರ್ಸ್ ಡೇ ಅನ್ನು ಅಮೆರಿಕದಲ್ಲಿ ವಾಷಿಂಗ್ಟನ್ ನಲ್ಲಿರುವ ಸ್ಪೋಕೇನ್‌ನಲ್ಲಿ 1910 ರಲ್ಲಿ ಸೊನೊರಾ ಸ್ಮಾರ್ಟ್ ಡಾಡ್ ಸ್ಥಾಪಿಸಿದರು. ಆ ವರ್ಷ, ಜೂನ್ 19, 1910 ರಂದು ತಂದೆಯ ದಿನವನ್ನು ಆಚರಿಸಲಾಯಿತು. 

ಯುನೈಟೆಡ್​ ಸ್ಟೇಟ್​ನಲ್ಲಿ ಭೀಕರವಾದ ಅಪಘಾತವೊಂದು ನಡೆಯಿತು. 1908 ಜುಲೈ 5ರಂದು ಪಶ್ಚಿಮ ವರ್ಜೀನಿಯಾದಲ್ಲಿ ನಡೆದ ಅಪಘಾತದಲ್ಲಿ ನೂರಾರು ಪುರುಷರು ಸಾವಿಗೀಡಾದರು. ಅಮೆರಿಕದ ಅಂತರ್ಯುದ್ಧದ ಅನುಭವಿ ವಿಲಿಯಂ ಜಾಕ್ಸನ್ ಸ್ಮಾರ್ಟ್ ಅವರ ಪುತ್ರಿ ಸೊನೊರಾ ಸ್ಮಾರ್ಟ್ ಡಾಡ್ ಅಪಘಾತದಲ್ಲಿ ಮರಣಹೊಂದಿದವರ ನೆನಪಿಗಾಗಿ ಭಾನುವಾರ ಗೌರವ ಸೂಚಿಸಿದರು. 

ತಂದೆಯು ಕುಟುಂಬದಲ್ಲಿ ಅಡಿಪಾಯದಂತಿದ್ದು, ಕುಟುಂಬವನ್ನು ಸಂರಕ್ಷಿಸುತ್ತಾರೆ. ನಾವೆಲ್ಲಾ ತಾಯಿಯ ತ್ಯಾಗ ಮತ್ತು ಪ್ರೀತಿಯ ಬಗ್ಗೆ ಮಾತನಾಡುತ್ತಿರುತ್ತೇವೆ, ಆದರೆ ನಮ್ಮ ಜೀವನವನ್ನು ಸಾರ್ಥಕಗೊಳಿಸಲು ತಂದೆ ಕೂಡ ಪ್ರಮುಖರು ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರತಿಯೊಬ್ಬರ ಜೀವನದಲ್ಲಿ ಅಪ್ಪ ಪ್ರಮುಖ ಪಾತ್ರ ವಹಿಸುತ್ತಾರೆ.