ಇಲ್ಲಿದೆ ದ್ವಿತೀಯ ಪಿಯುಸಿ ಟಾಪರ್ಸ್ ವಿವರ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯು ಶೇ.88.02 ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇದರ ಜೊತೆಗೆ ದ‌ಕ್ಷಿಣ ಕನ್ನಡ ಜಿಲ್ಲೆಯ ಐವರು ವಿದ್ಯಾರ್ಥಿಗಳು ಟಾಪರ್ಸ್ ಆಗಿ ಹೊರಹೊಮ್ಮಿದ್ದಾರೆ. ದಕ್ಷಿಣ ಕನ್ನಡದಲ್ಲಿ ಕಾಮರ್ಸ್ ನಲ್ಲಿ ಮೂವರು, ಸೈನ್ಸ್ ನಲ್ಲಿ ಇಬ್ಬರು ಟಾಪರ್ಸ್ ಆಗಿದ್ದಾರೆ. 

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ರಾಜ್ಯಕ್ಕೆ ಟಾಪರ್ಸ್ ಆದ ವಿದ್ಯಾರ್ಥಿಗಳ ಜಿಲ್ಲಾವಾರು/ವಿಭಾಗವಾರು ಮಾಹಿತಿ ಇಲ್ಲಿದೆ. ವಿಜ್ಞಾನ ವಿಭಾಗದಲ್ಲಿ ನಾಲ್ವರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 600ಕ್ಕೆ 598 ಅಂಕಗಳನ್ನು ಪಡೆದು ಸಿಮ್ರಾನ್​ ಶೇಷರಾವ್​, ಮೊಹಮ್ಮದ್​ ರಫೀಕ್, ಸಾಯಿ ಚಿರಾಗ್​ ಹಾಗೂ ಶ್ರೀಕೃಷ್ಣ ಪೇಜತಾಯ ವಿಜ್ಞಾನ ವಿಭಾಗದಲ್ಲಿ ಟಾಪರ್​ ಎನಿಸಿದ್ದಾರೆ.

ಕಲಾ ವಿಭಾಗದಲ್ಲಿ ಶ್ವೇತಾ ಭೀಮಶಂಕರ ಬೈರಕೊಂಡ, ಕೊಟ್ಟುರು ಸರ್ಕಾರಿ ಪಿಯು ಕಾಲೇಜಿ ಸಹನಾ 600ಕ್ಕೆ 594 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಮಾನವ್​ ವಿನಯ್​ ಕೇಜ್ರಿವಾಲ್​ 600ಕ್ಕೆ 596 ಅಂಕ ಪಡೆದು ಪ್ರಥಮ ಸ್ಥಾನ ಸಂಪಾದಿಸಿದ್ದಾರೆ.

Leave A Reply

Your email address will not be published.