Home Breaking Entertainment News Kannada ಕೊನೆಗೂ ನಟ ಪ್ರಭಾಸ್ ಗೆ ಕೂಡಿ ಬಂತು ಕಂಕಣ ಬಲ !! | ಬಾಹುಬಲಿ ಕೈ...

ಕೊನೆಗೂ ನಟ ಪ್ರಭಾಸ್ ಗೆ ಕೂಡಿ ಬಂತು ಕಂಕಣ ಬಲ !! | ಬಾಹುಬಲಿ ಕೈ ಹಿಡಿಯಲಿರುವ ದೇವಸೇನಾ ಇವರೇ ನೋಡಿ

Hindu neighbor gifts plot of land

Hindu neighbour gifts land to Muslim journalist

ತೆಲುಗು ಚಿತ್ರರಂಗವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದ ಚಿತ್ರವೆಂದರೆ ಅದು ಬಾಹುಬಲಿ. ಎರಡು ಭಾಗಗಳಲ್ಲಿ ಬಿಡುಗಡೆಯಾದ ಬಾಹುಬಲಿ ಅದ್ಭುತ ಚಿತ್ರವಾಗಿ ಹೊರಹೊಮ್ಮಿತ್ತು. ನಾಯಕನಾಗಿ ನಟಿಸಿದ್ದ ಪ್ರಭಾಸ್ ಗೆ ದೊಡ್ಡ ಯಶಸ್ಸು ತಂದುಕೊಟ್ಟಿತ್ತು ಈ ಸಿನಿಮಾ. ಬಾಲಿವುಡ್ ನಲ್ಲೂ ನಟಿಸುವ ಅವಕಾಶ ದೊರಕಿತ್ತು.

ಇದೀಗ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಕಲಾವಿದ ನಟ ಪ್ರಭಾಸ್‌ ಮದುವೆ ವಿಚಾರ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ವಿಷಯ ಹಲವು ವರ್ಷಗಳಿಂದ ಭಾರೀ ಚರ್ಚೆಗೀಡಾಗಿತ್ತು. ಕನ್ನಡತಿ, ತೆಲುಗು ನಟಿ ಅನುಷ್ಕಾ ಶೆಟ್ಟಿ ಸೇರಿದಂತೆ ಅನೇಕ ನಟಿಯರ ಜೊತೆ ಪ್ರಭಾಸ್‌ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಇದೀಗ ಅವರಿಗೆ ಕಂಕಣ ಬಲ ಕೂಡಿ ಬಂದಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.

ಮುಖ್ಯವಾಗಿ ನಟಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಮದುವೆ ಆಗಲಿದ್ದಾರೆ ಎಂಬ ಗಾಸಿಪ್‌ ಚಿತ್ರರಂಗ ಸೇರಿ, ಅಭಿಮಾನಿಗಳಲ್ಲಿ ಹರಿದಾಡುತ್ತಿತ್ತು. ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಪ್ರೀತಿ ಮಾಡ್ತಿದ್ದಾರೆ, ಮನೆಯವರು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಗಳು ಚರ್ಚೆಯಾಗುತ್ತಲೇ ಇದ್ದವು. ಆದರೆ ಇದಕ್ಕೆ ಬಾಹುಬಲಿ ಜೋಡಿಗಳಿಂದ ಮಾತ್ರ ಯಾವುದೇ ರೆಸ್ಪಾನ್ಸ್ ಸಿಗುತ್ತಿರಲಿಲ್ಲ. ನಾವಿಬ್ಬರು ಉತ್ತಮ ಸ್ನೇಹಿತರು ಎಂದೇ ಸದಾ ಹೇಳುತ್ತಿದ್ದರು.

ಪ್ರಭಾಸ್‌ ಎಲ್ಲೇ ಹೋದರೂ ಸಹ ಅವರ ಮದುವೆ ಬಗ್ಗೆ ಪ್ರಸ್ತಾಪವಾಗುತ್ತಿತ್ತು. ಆದರೆ ಇದೀಗ ಇವೆಲ್ಲಾ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಸದ್ಯದಲ್ಲೇ ಪ್ರಭಾಸ್ ಮದುವೆ ಆಗಲಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಹೇಳಿಕೊಂಡಿದ್ದಾರೆ.

ಪ್ರಭಾಸ್ ಪೋಷಕರು ಈಗಾಗಲೇ ಹುಡುಗಿಯನ್ನು ನೋಡಿದ್ದಾರಂತೆ. ಆದರೆ ಆಕೆ ಸಿನಿಮಾರಂಗಕ್ಕೆ ಸೇರಿದವರು ಅಲ್ಲ ಎಂಬ ಮಾತೂ ಕೇಳಿ ಬರುತ್ತಿದೆ. ಇನ್ನು ಪೋಷಕರು ನೋಡಿರುವ ಹುಡುಗಿಯನ್ನೇ ನಟ ಮದುವೆಯಾಗುತ್ತಿದ್ದಾರೆ. ಸಿನಿಮಾ ರಂಗಕ್ಕೆ ಸಂಬಂಧಪಡದ ಹುಡುಗಿ ನಟ ಪ್ರಭಾಸ್‌ ಕೈಹಿಡಿಯಲಿದ್ದಾರೆ ಎಂಬ ವದಂತಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ಪ್ರಭಾಸ್‌ ಹೆಸರಿನ ಜೊತೆ ಅನೇಕ ನಟಿಯರ ಹೆಸರು ತಳುಕುಹಾಕುತ್ತಿತ್ತು. ಅವರ ಜೊತೆ ಮದುವೆ, ಇವರ ಜೊತೆ ಮದುವೆ ಎಂದೆಲ್ಲಾ ಸುದ್ದಿ ಹರಿದಾಡಿತ್ತು. ಆದರೆ ಪ್ರಭಾಸ್ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ತನ್ನ ಮದುವೆಯ ಬಗ್ಗೆ ಎಲ್ಲರೂ ತಲೆ ಕೆಡಿಸಿಕೊಂಡಿದ್ದಾರೆ, ಆದರೆ ಸದ್ಯ ಮದುವೆಯಾಗುವುದಿಲ್ಲ ಎಂದು ಹೇಳಿದ್ದರು.

ಅಲ್ಲದೇ ರಾಧೆ ಶ್ಯಾಮ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಒಂದು ಕಾರ್ಯಕ್ರಮದಲ್ಲಿ ಅವರಿಗೆ ಮದುವೆಯ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ನಿಮ್ಮ ಮದುವೆಯ ಬಗ್ಗೆ ಎಂದಾದರೂ ಯೋಚಿಸಿದ್ದಿರಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಪ್ರಭಾಸ್, ಸಾಮಾನ್ಯವಾಗಿ ಪ್ರೀತಿಯ ಬಗ್ಗೆ ನನ್ನ ಊಹೆಗಳು ತಪ್ಪಾಗುತ್ತವೆ. ಹಾಗಾಗಿ ನನ್ನ ಮದುವೆ ಇನ್ನೂ ಆಗಿಲ್ಲ ಎಂದಿದ್ದರು. ಬಾಹುಬಲಿಯ ಈ ತಮಾಷೆಯ ಉತ್ತರ ಕೇಳಿ ಅಲ್ಲಿದ್ದವರೆಲ್ಲ ನಕ್ಕಿದ್ದರು.

ಇದೀಗ ಆ ಎಲ್ಲಾ ಸುದ್ದಿಗೆ ಫುಲ್‌ಸ್ಟಾಪ್‌ ಬೀಳುವ ಲಕ್ಷಣಗಳು ಕಾಣುತ್ತಿದೆ. ಸಿನಿಮಾರಂಗದವರನ್ನೇ ಮದುವೆಯಾಗುತ್ತಾರೆ ಎಂಬೆಲ್ಲಾ ಸುದ್ದಿ ಇನ್ನು ಒಂದು ವರ್ಷದೊಳಗೆ ಕೊನೆಯಾಗಲಿದೆ ಎನ್ನಬಹುದು. ಏಕೆಂದರೆ ಪ್ರಭಾಸ್‌ ಈ ವರ್ಷದೊಳಗೆ ಚಿತ್ರರಂಗಕ್ಕೆ ಸೇರದ ಸಾಮಾನ್ಯ ಹುಡುಗಿಯನ್ನು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಕೆಜಿಎಫ್ 2 ಸಕ್ಸಸ್​ ನಂತರ ಪ್ರಶಾಂತ್ ನೀಲ್ ಪ್ರಭಾಸ್​ ಜೊತೆ ಸಲಾರ್ ಮಾಡುತ್ತಿದ್ದು, ಇತ್ತೀಚೆಗೆ ಅವರು ಪ್ರಭಾಸ್​ ಗೆ ಕೊಟ್ಟ ಸಲಹೆ ವೈರಲ್ ಆಗಿದೆ. ಇತ್ತೀಚಿನ ಬೆಳವಣಿಗೆಯಲ್ಲಿ, ಶೂಟಿಂಗ್ ಪ್ರಾರಂಭವಾಗುವ ಮೊದಲು ಪ್ರಭಾಸ್ ಸ್ವಲ್ಪ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕೆಂದು ಪ್ರಶಾಂತ್ ನೀಲ್ ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಭಾಸ್ ಅವರ ಇತ್ತೀಚಿನ ಚಿತ್ರಗಳು ಗ್ರಾಫಿಕ್ಸ್ ಅನ್ನು ಅವಲಂಬಿಸಿದ್ದರೂ, ಈ ಚಿತ್ರಕ್ಕಾಗಿ ನಿರ್ದೇಶಕರು ಪ್ರಭಾಸ್​ ಬದಲಾಗಬೇಕು ಎಂದು ಬಯಸಿದ್ದಾರೆ ಎಂಬ ಸುದ್ದಿ ಬಂದಿದೆ.