Home News ” ಗಂಡನನ್ನು ಕೊಲ್ಲುವುದು ಹೇಗೆ ?” ಕಾದಂಬರಿಗಾರ್ತಿಗೆ ಜೀವಾವಧಿ ಶಿಕ್ಷೆ

” ಗಂಡನನ್ನು ಕೊಲ್ಲುವುದು ಹೇಗೆ ?” ಕಾದಂಬರಿಗಾರ್ತಿಗೆ ಜೀವಾವಧಿ ಶಿಕ್ಷೆ

Hindu neighbor gifts plot of land

Hindu neighbour gifts land to Muslim journalist

ಆಕೆ ರೋಮಾನ್ಸ್ ಬರಹಗಾರ್ತಿ, ಹೆಸರು ನಾನ್ಸಿ ಕ್ರಾಂಪ್ಟನ್ ಬ್ರೋಫಿ. ಆಕೆಯೊಂದು ಸುಂದರವಾದ ಕಾದಂಬರಿ ಬರೆದು ಸ್ವತಃ ಪ್ರಕಟಿಸಿದ್ದಳು, ಅದರ ಹೆಸರು ” ಗಂಡನನ್ನು ಕೊಲ್ಲುವುದು ಹೇಗೆ ?”

ಅದಾಗಿ ಹಲವು ವರ್ಷಗಳೇ ಕಳೆದಿದೆ. ನಂತರ ದುರದೃಷ್ಟವಶಾತ್ ಆಕೆಯ ಗಂಡನನ್ನು ಅದ್ಯಾರೋ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗಯ್ಯುತ್ತಾರೆ. ಇದೀಗ ಪ್ರಾಥಮಿಕ ತನಿಖೆ ಮುಗಿದಿದೆ, ಕೋರ್ಟಿನಲ್ಲಿ ಟ್ರಯಲ್ ಪ್ರಾರಂಭವಾಗಿದೆ. ಆಕೆ ಬರೆದ ಕಾದಂಬರಿ ” ಗಂಡನನ್ನು ಕೊಲ್ಲುವುದು ಹೇಗೆ ?” ಓದಿಯೇ ಅದ್ಯಾರೋ ಆಕೆಯ ಗಂಡನನ್ನು ಹತ್ಯೆ ಮಾಡಿದ್ರ ಎನ್ನುವ ಅನುಮಾನ ಕಾಡಿತ್ತು.ನ್ ಇದೀಗ ಕೋರ್ಟು ಟ್ರಯಲ್ಸ್ ಮುಗಿದು ತೀರ್ಪು ಹೊರಬಿದ್ದಿದೆ. ” ಗಂಡನನ್ನು ಕೊಲ್ಲುವುದು ಹೇಗೆ ?” ಎಂದು ಕಾದಂಬರಿ ಬರೆದಿದ್ದ ಲೇಖಖಿ ಸ್ವತಃ ಗಂಡನನ್ನು ಕೊಲೆಮಾಡಿದ ಆರೋಪದಲ್ಲಿ ಶಿಕ್ಷೆಗೆ ಗುರಿ ಆಗಿದ್ದಾಳೆ.

ಸತ್ತ ಗಂಡನ ಬಳಿಯಿದ್ದ ಯಾವುದೇ ಬೆಲೆಬಾಳುವ ವಸ್ತುಗಳು ಕಾಣೆಯಾಗಿರಲಿಲ್ಲ. ದುಬಾರಿ ಮೊಬೈಲ್ ಗಳು, ಪರ್ಸು ಮತ್ತು ಕಾರು ಇನ್ನಿತರ ವಸ್ತುಗಳನ್ನು ದುಷ್ಕರ್ಮಿಗಳು ಮುಟ್ಟಿರಲಿಲ್ಲ. ಕೊಲೆಗೊಂಡ ಆಕೆಯ ಗಂಡನ ದೇಹದ ಮೇಲೆ  ಕೊಲೆ ನಡೆದ ಸಂದರ್ಭದಲ್ಲಿ ಉಂಟಾಗಬಹುದಾದ ಪ್ರತಿಭಟನೆಯ ಯಾವುದೇ ಕುರುಹುಗಳು ಕೂಡ ಸಿಕ್ಕಿರಲಿಲ್ಲ. ಆದುದರಿಂದ ಇದು ಹಣಕ್ಕಾಗಿ ಆದ ಜಗಳ ಅಲ್ಲ ಎಂದು ಪೊಲೀಸರು ಪ್ರಾಥಮಿಕವಾಗಿ ನಂಬಿದ್ದರು. ಆದರೆ ಕೊಲೆಗೆ ಸಂಬಂಧಿತವಾಗಿ ಯಾರನ್ನು ಬಂಧಿಸಲು ಪೊಲೀಸರ ಕೈಗೆ ಆಗಿರಲಿಲ್ಲ. ಕೊಲೆ ತನಿಖೆ ಒಂದು ಡೆಡ್ ಎಂಡ್ ಗೆ ಬಂದು ನಿಂತಿತ್ತು.

ಆದರೆ, ತನಿಖೆಯ ಆಳಕ್ಕೆ ಇಳಿಯುತ್ತಿದ್ದಂತೆ, ಅದೊಂದು ಸಿಸಿ ಟಿವಿ ವ್ಯಾನ್ ದೃಶ್ಯ ಒಂದನ್ನು ತನ್ನ ಕಣ್ಣುಗಳಲ್ಲಿ ಬಂಧಿಸಿಟ್ಟಿತ್ತು. ಆ ವ್ಯಾನ್, ಅಂದು ಮರ್ಡರ್ ನಡೆದ ಕೆಲ ಸಂದರ್ಭದಲ್ಲಿ, ಅಲ್ಲೇ ಆಸುಪಾಸಿನಲ್ಲಿ ಒಂದು ತಿರುಗಿ ಹಾಕಿ ಹೋಗಿತ್ತು. ಅದರ ಅನುಮಾನದಲ್ಲಿ ಹೆಂಗಸೊಬ್ಬಳು ಬಂಧನಕ್ಕೆ ಒಳಪಟ್ಟಿದ್ದಳು. ಆಕೆ ಬೇರಾರೂ ಅಲ್ಲ, ಇದೇ, ” ಗಂಡನನ್ನು ಕೊಲ್ಲುವುದು ಹೇಗೆ ?” ಕಾದಂಬರಿ ಬರೆದು ಪ್ರಕಟಿಸಿದ್ದ ಆತನ ಪತ್ನಿ !

ಆರ್ಥಿಕವಾಗಿ ತುಂಬಾ ಖರ್ಚುಮಾಡುವ ಸ್ವಭಾವದ ಆಕೆ ತನ್ನ ಆರ್ಥಿಕ ಪರಿಸ್ಥಿತಿಯನ್ನು ಹಾಳು ಮಾಡಿಕೊಂಡಿದ್ದಳು. ಗಂಡ ಅನಾವಶ್ಯಕ ಖರ್ಚುಗಳಿಗೆ ಸಪೋರ್ಟ್ ಮಾಡುತ್ತಿರಲಿಲ್ಲ. ಹಾಗಾಗಿ, ಒಂದೊಮ್ಮೆ, ಗಂಡನನ್ನೇ ‘ ಢಂ ‘ ಅನ್ನಿಸಿ ಬಿಟ್ಟರೆ, ಬರುವ ಲಕ್ಶಾಂತರ ಇನ್ಶೂರೆನ್ಸ್ ತನ್ನದಾಗುತ್ತದೆ ಎನ್ನುವುದು ಪತ್ನಿಯ ಪ್ಲಾನ್. ಹಾಗಂತ ತನಿಖಾ ಪೊಲೀಸರ ವಾದ. ತಾನೇ ಯೋಚಿಸಿ ಬರೆದ ಕಾದಂಬರಿಯೇ ಆಕೆಗೆ ಗಂಡನ ಕೊಲೆ ಮಾಡಲು ಪ್ರೇರೇಪಣೆ ನೀಡ್ತಾ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ. ಒಂದಲ್ಲ ಒಂದು ರೀತಿಯಲ್ಲಿ, ಆಕೆಯ ಈ ಕಾದಂಬರಿಯ ಹೆಡ್ಡಿಂಗ್ ಆಕೆಯನ್ನು ಅಪರಾಧಿ ಸ್ಥಾನದಲ್ಲಿ ಇವತ್ತು ತಂದು ನಿಲ್ಲಿಸಲು ಕಾರಣ ಆಗಿದೆ ಎನ್ನುವುದು ಮಾತ್ರ ಸತ್ಯ.

ಕ್ರಾಂಪ್ಟನ್ ಬ್ರೋಫಿಯು ತನ್ನ ಪಾಲುದಾರನನ್ನು ಕೊಲ್ಲುವ ಉದ್ದೇಶ ಮತ್ತು ಮೋಟಿವ್ ಅನ್ನು ಹೊಂದಿದ್ದಳು ಎಂದು ಅವರು ಯಶಸ್ವಿಯಾಗಿ ವಾದಿಸಿದರು ಲಾಯರುಗಳು. ದಂಪತಿಗಳು ಆರ್ಥಿಕವಾಗಿ ತುಂಬಾ ಕಷ್ಟದ ಸಮಯದಲ್ಲಿ ಬಿದ್ದಿದ್ದಾರೆಂದು ಪ್ರೂವ್ ಮಾಡಲಾಯಿತು, ಅವನ ಮರಣದ ನಂತರ ಅವಳು ಭಾರಿ ವಿಮೆಯನ್ನು ಪಡೆಯುವವಳಿದ್ದಳು.

ನ್ಯಾಯಾಲಯದಲ್ಲಿ ತೋರಿಸಲಾದ ಕಣ್ಗಾವಲು ದೃಶ್ಯಾವಳಿಗಳಲ್ಲಿ ಅಪರಾಧದ ಸಮಯದಲ್ಲಿ ಕ್ರಾಂಪ್ಟನ್ ಬ್ರೋಫಿ ಇನ್ಸ್ಟಿಟ್ಯೂಟ್ಗೆ ಮತ್ತು ಹೊರಗೆ ಗಾಡಿ ಚಾಲನೆ ಮಾಡುತ್ತಿರುವುದು ಕಂಡುಬಂದಿದೆ. ಪೊಲೀಸರು ಕೊಲೆಗೆ ಆಯುಧವನ್ನು ಎಂದಿಗೂ ಕಂಡುಹಿಡಿಯದಿದ್ದರೂ, ಅವಳು ಅದೇ ಮಾದರಿಯ ಬಂದೂಕನ್ನು ಖರೀದಿಸಿದ್ದಾಳೆಂದು ಪೊಲೀಸರು ಸಾಕ್ಷಿ ಸಮೇತ ಪ್ರೂವ್ ಮಾಡಿದ್ದರು. ತನ್ನ ಸ್ವಂತ ರಕ್ಷಣೆಯಲ್ಲಿ ನಿಲುವನ್ನು ತೆಗೆದುಕೊಳ್ಳುತ್ತಾ, ಬ್ರೋಫಿಯ ಮರಣದ ಬೆಳಿಗ್ಗೆಯಿಂದ “ನೆನಪಿನ ರಂಧ್ರ” ಅಂದರೆ ನನಗೆ ಮರೆವು ಬಂದಿದೆ ಎಂದಿದ್ದಳು. ಆದಾಗ್ಯೂ ಅವಳು ಕೊಲೆ ನಡೆದ ಇನ್ಸ್ಟಿಟ್ಯೂಟ್ ಸುತ್ತ ಗಾಡಿ ಚಾಲನೆ ಮಾಡಿದ್ದನ್ನು ಆಕೆಗೆ ನಿರಾಕರಿಸಲಾಗಲಿಲ್ಲ.

12 ಜನರ ತೀರ್ಪುಗಾರರು ಎರಡು ದಿನಗಳ ಕಾಲ ಚರ್ಚಿಸಿದ ನಂತರ ಎರಡನೇ ಹಂತದ ಮಾದರಿಯ ಕೊಲೆಯನ್ನು ಆಕೆ ಮಾಡಿದ್ದಾಳೆ, ಆಕೆಯೇ ತಪ್ಪಿತಸ್ಥರೆಂದು ಇದೀಗ ನಿರ್ಧಾರ ಆಗಿದೆ. ಮೊನ್ನೆ ಸೋಮವಾರದಂದು ಆಕೆಯ ಜೀವಾವಧಿ ಶಿಕ್ಷೆಯು, ಅಂದರೆ 25 ವರ್ಷಗಳ ಶಿಕ್ಷೆ ಪ್ರಕಟ ಆಗಿದೆ. ಆದರೂ ಆಕೆಯ ವಕೀಲರು ಮೇಲ್ಮನವಿ ಸಲ್ಲಿಸಲು ಯೋಜಿಸಿದ್ದಾರೆ ಎಂದು ತಿಳಿದು ಬಂದಿದೆ.