ಮಹಿಳಾ ಉದ್ಯೋಗಿಗಳಿಗೆ ಸಂಬಳದ ವಿಚಾರದಲ್ಲಿ ತಾರತಮ್ಯ !! | ಕೋರ್ಟ್ ನಲ್ಲಿ ಭಾರೀ ಮೊತ್ತದ ಪರಿಹಾರ ನೀಡಲು ಒಪ್ಪಿದ ಗೂಗಲ್

Share the Article

ಮಹಿಳಾ ಉದ್ಯೋಗಿಗಳಿಗೆ ಸಂಬಳದ ವಿಚಾರದಲ್ಲಿ ತಾರತಮ್ಯ ಮಾಡಿದ್ದಕ್ಕೆ ಗೂಗಲ್‌ ಭಾರೀ ಮೊತ್ತದ ದಂಡ ತೆತ್ತಿದೆ. ಉದ್ಯೋಗಿಗಳಿಗೆ ಗೂಗಲ್ ಬರೋಬ್ಬರಿ 118 ದಶಲಕ್ಷ ಡಾಲರ್‌(ಅಂದಾಜು 921 ಕೋಟಿ ರೂ.) ಪರಿಹಾರ ನೀಡಲು ಒಪ್ಪಿಕೊಂಡಿದೆ.

ಕ್ಯಾಲಿಫೋರ್ನಿಯಾದಲ್ಲಿ ಕೆಲಸ ಮಾಡುತ್ತಿರುವ 15,500 ಮಹಿಳಾ ಉದ್ಯೋಗಿಗಳು ನಮಗೆ ಸಂಬಳದಲ್ಲಿ ಅನ್ಯಾಯವಾಗಿದೆ. ಪುರುಷರಷ್ಟೇ ಕೆಲಸ ಮಾಡುತ್ತಿದ್ದರೂ ನಮ್ಮ ಸಂಬಳ ಕಡಿಮೆ ಎಂದು ಆರೋಪಿಸಿದ್ದರು. ಈ ಸಂಬಂಧ ಮಾಜಿ ಮಹಿಳಾ ಉದ್ಯೋಗಿಗಳು 2017ರಲ್ಲಿ ಗೂಗಲ್‌ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದರು.

ಗೂಗಲ್‌ ಎಲ್ಲ ಆರೋಪಗಳನ್ನು ತಿರಸ್ಕರಿಸಿ, ಉದ್ಯೋಗಿಗೆ ಸಂಬಂಧಿಸಿದ ಎಲ್ಲ ಕಾನೂನುಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆ ಎಂದು ಹೇಳಿತ್ತು. ಈಗ ಎಲ್ಲ ಮಾಜಿ ಉದ್ಯೋಗಿಗಳಿಗೆ ಪರಿಹಾರ ನೀಡುವುದಾಗಿ ಗೂಗಲ್‌ ಕೋರ್ಟ್‌ ಮುಂದೆ ಹೇಳಿದೆ.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ ಗೂಗಲ್‌, 5 ವರ್ಷಗಳ ಕಾಲ ನಡೆದ ಈ ಕಾನೂನು ಹೋರಾಟಕ್ಕೆ ಕೊನೆ ಹಾಡಲು ಮುಂದಾಗಿದ್ದೇವೆ. ಎರಡು ಕಡೆಯುವರು ಸಹಮತದ ನಿರ್ಧಾರಕ್ಕೆ ಬಂದಿದ್ದೇವೆ. ಹಾಗಾಗಿ ಪರಿಹಾರದ ಮೊತ್ತ ನೀಡುತ್ತಿದ್ದೇವೆ ಎಂದು ತಿಳಿಸಿದೆ.

Leave A Reply