ಮೇಲುಕೋಟೆ “ಬಾಹುಬಲಿ”, ರಾಮಸ್ವಾಮಿ ಅಯ್ಯಂಗಾರ್ ನಿಧನ

ಮಂಡ್ಯ: ಮೇಲುಕೋಟೆ ಬಾಹುಬಲಿ ಖ್ಯಾತಿಯ ರಾಮಸ್ವಾಮಿ ಅಯ್ಯಂಗಾರ್ ಅವರು ಮಂಗಳವಾರ ನಿಧನರಾದರು.

 

6 ದಶಕಗಳಿಂದಲೂ ಪಾಂಡವಪುರ ತಾಲೂಕಿನ ಮೇಲುಕೋಟೆ ಬೆಟ್ಟದ ಮೇಲಿನ ಯೋಗನರಸಿಂಹ ಸ್ವಾಮಿ ದೇಗುಲಕ್ಕೆ ರಾಮಸ್ವಾಮಿ ಅಯ್ಯಂಗಾರ್ ನೀರನ್ನು ಹೊತ್ತೊಯ್ಯುತ್ತಿದ್ದರು. ದೇವರ ಅಭಿಷೇಕ ಮತ್ತು ಪ್ರಸಾದ ತಯಾರಿಕೆಗೆ ಬೆಟ್ಟದ ಕೆಳಗಿನ ಕೊಳದಿಂದ ದೊಡ್ಡ ಪಾತ್ರೆಯಲ್ಲಿ ನೀರು ತುಂಬಿಕೊಂಡು ಪ್ರತಿನಿತ್ಯ ಬೆಟ್ಟ ಹತ್ತುತ್ತಿದ್ದರು.

ರಾಮಸ್ವಾಮಿ ಅಯ್ಯಂಗಾರ್ 60 ವರ್ಷ ವಯಸ್ಸಾಗಿದ್ರು ಸಲೀಸಾಗಿ ಮೇಲು ಕೋಟೆಯಲ್ಲಿರೋ ಯೋಗ ನರಸಿಂಹ ಸ್ವಾಮಿಯ ಬೆಟ್ಟವನ್ನು ಯಾವುದೇ ಆಯಾಸವಿಲ್ಲದೆ ತಲೆಯ ಮೇಲೆ ನೀರಿನ ಪಾತ್ರೆ ಹೊತ್ತು ಬೆಟ್ಟ ಹತ್ತುತ್ತಿದ್ದರು. ತನ್ನ ಮೆಚ್ಚಿನ ದೇವರ ಅಭಿಷೇಕಕ್ಕಾಗಿ ಬೆಟ್ಟದ ಕೆಳಗಿನ ಕಲ್ಯಾಣಿಯಿಂದ ನೀರು ತಂದು ಅರ್ಚಕರಿಗೆ ನೀಡ್ತಿದ್ದರು. ಪ್ರತಿದಿನ ಈ ರೀತಿ ನಾಲ್ಕೈದು ಭಾರಿ ನೀರು ಹೊತ್ತು ತಂದರು ಇವರು ಮಾತ್ರ ದಣಿವು ಎಂದು ಯಾವತ್ತು ಕುಳಿತ ಉದಾಹರಣೆ ಇಲ್ವಂತೆ. ಕಡಿದಾಗಿರೋ ಬೆಟ್ಟ

ಇವರ ಅಗಾಧ ಶಕ್ತಿ ಮತ್ತು ದೃಢಕಾಯ ಶರೀರ ಕಂಡು ಸ್ಥಳೀಯರು ಮತ್ತು ಭಕ್ತರ ‘ಮೇಲುಕೋಟೆ ಬಾಹುಬಲಿ’ ಎಂದೇ ಕರೆಯುತ್ತಿದ್ದರು ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ರಾಮಸ್ವಾಮಿ ಅಯ್ಯಂಗಾರ್ ಇಂದು ಕೊನೆಯುಸಿರೆಳೆದರು.

Leave A Reply

Your email address will not be published.