ಷೇರುಪೇಟೆಯಲ್ಲಿ ಮಹಾ ಕುಸಿತ! ತಜ್ಞರ ಅಭಿಪ್ರಾಯವೇನು ? ಇಲ್ಲಿದೆ ವಿವರ

Share the Article

ಷೇರುಪೇಟೆಯಲ್ಲಿ ಮಹಾ ಕುಸಿತ ಮುಂದುವರೆದಿದೆ. ಸೆನ್ಸೆಕ್ಸ್ 1400 ಇಳಿಕೆ ಕಂಡು ಹೂಡಿಕೆದಾರರಲ್ಲಿ ತಲ್ಲಣ ಸೃಷ್ಟಿಸಿದೆ. ಸೋಮವಾರದ ಷೇರುಪೇಟೆ ಆರಂಭವಾದ ತಕ್ಷಣವೇ ಭಾರಿ ಪ್ರಮಾಣದಲ್ಲಿ ಷೇರುಗಳು ಕುಸಿತ ಕಂಡವೆ. ಷೇರು ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹಣ ಕಳೆದುಕೊಂಡಿದ್ದಾರೆ.

ತಜ್ಞರ ಪ್ರಕಾರ ಅಲ್ಪಾವಧಿಯಲ್ಲಿ ಮಾರುಕಟ್ಟೆ ಟ್ರೆಂಡ್ ದುರ್ಬಲವಾಗಿದೆ. ಅಮೆರಿಕದ ಮೇ ತಿಂಗಳ ಹಣದುಬ್ಬರ ಶೇ 8.3ರಷ್ಟಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದು ಶೇ 8.6ರಷ್ಟಾಗಿದೆ. ಇದರಿಂದಾಗಿ ಅಲ್ಲಿನ ಕೇಂದ್ರ ಬ್ಯಾಂಕ್ ಶೇ 0.50 ಬಡ್ಡಿ ದರ ಏರಿಕೆ ಮಾಡುವ ಅವಕಾಶಗಳಿವೆ. ಇದರಿಂದ ಈಕ್ವಿಟಿ ಮಾರುಕಟ್ಟೆಗೆ ಪೆಟ್ಟು ಬೀಳುವ ಅವಕಾಶಗಳಿವೆ. 

ಬಿಎಸ್‌ಇ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 1400 ಪಾಯಿಂಟ್‌ಗಳಷ್ಟು ಕುಸಿದು, 52,840 ಅಂಕಗಳ ಕೆಳಗೆ ವಹಿವಾಟು ನಡೆಸುತ್ತಿದೆ. ನಿಫ್ಟಿ ಕೂಡ ತೀವ್ರ ನಷ್ಟದಲ್ಲಿದ್ದು, 411 ಅಂಕಗಳ ನಷ್ಟದೊಂದಿಗೆ 16,000 ಅಂಕಗಳ ಕೆಳಗೆ ವ್ಯವಹಾರ ಮುಂದುವರೆಸಿದೆ. ಬಹುತೇಕ ಪ್ರಮುಖ 30 ಷೇರುಗಳು ಕೆಂಪು ಬಣ್ಣದಲ್ಲಿದ್ದು, ನಷ್ಟವನ್ನು ತೋರಿಸುತ್ತಿವೆ.

ಐಸಿಐಸಿಐ ಬ್ಯಾಂಕ್ ಮತ್ತು ಬಜಾಜ್ ಷೇರುಗಳು ಶೇಕಡಾ 4 ಕ್ಕಿಂತ ಹೆಚ್ಚು ಕುಸಿತ ಕಂಡಿವೆ. 100ಕ್ಕೂ ಹೆಚ್ಚು ಕಂಪನಿಗಳ ಷೇರುಗಳು 52 ವಾರಗಳ ಕನಿಷ್ಠ ಮಟ್ಟಕ್ಕೆ ಕುಸಿದಿವೆ ಎಂದು ಉದ್ಯಮ ಮೂಲಗಳು ತಿಳಿಸಿವೆ.

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಬಜಾಜ್ ಫಿನ್​ಸರ್ವ್ ಶೇ -5.24

ಇಂಡಸ್​ಇಂಡ್ ಬ್ಯಾಂಕ್ ಶೇ -4.88

ಬಜಾಜ್ ಫೈನಾನ್ಸ್ ಶೇ -4.70

ಐಸಿಐಸಿಐ ಬ್ಯಾಂಕ್ ಶೇ -4.55

ಟಾಟಾ ಮೋಟಾರ್ಸ್ ಶೇ -4.45

Leave A Reply