ಡಿಜಿಟಲ್ ರೇಪ್ ಗೆ ಬೆಚ್ಚಿದ ರಾಜ್ಯ!! ಮೂರು ವರ್ಷದ ಮುಗ್ಧ ಬಾಲಕಿಯ ಮೇಲೆ ನಡೆಯಿತು ಕಾಮುಕರ ಅಟ್ಟಹಾಸ!!
ಅತ್ಯಾಚಾರಿಗಳ ಮೇಲೆ, ಗೂಂಡಾಗಿರಿ ಪ್ರದರ್ಶಿಸುವವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡರೂ ಯೋಗಿ ಆದಿತ್ಯನಾಥ್ ರಾಜ್ಯವಾದ ಉತ್ತರಪ್ರದೇಶದಲ್ಲಿ ಅಪರಾಧ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಲೇ ಇದ್ದು,ಇಂತಹ ಅಪರಾಧಗಳ ಸಾಲಿಗೆ ಡಿಜಿಟಲ್ ರೇಪ್ ಪ್ರಕರಣವೊಂದು ಸೇರಿದೆ. ಪ್ಲೇ ಸ್ಕೂಲ್ ನ ಮೂರು ವರ್ಷದ ಬಾಲಕಿಯ ಮೇಲೆಯೇ ಕಾಮುಕರ ತಂಡವೊಂದು ಅಟ್ಟಹಾಸ ಮೆರೆದ ಬಗ್ಗೆ ಪ್ರಕರಣವೊಂದು ದಾಖಲಾಗಿದೆ.
ಉತ್ತರಪ್ರದೇಶದ ಗೌತಮ್ ಬುಧ್ ನಗರದಲ್ಲಿ ಬೆಳಕಿಗೆ ಬಂದ ಈ ಪ್ರಕರಣವು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಸಂತ್ರಸ್ತೆಯ ತಂದೆ ನೀಡಿದ ದೂರನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಏನಿದು ಪ್ರಕರಣ!?
ನಗರದ ಮೌರ್ಯ ಫೌಂಡೇಶನ್ ಪ್ಲೇ ಸ್ಕೂಲ್ ನಲ್ಲಿ ಓದುತ್ತಿದ್ದ ಮೂರು ವರ್ಷದ ಬಾಲಕಿ ತನಗೆ ಚಿಕ್ಕಪ್ಪ ಉಪದ್ರ ಮಾಡಿದ್ದಾರೆ ಎಂದು ಮನೆಯಲ್ಲಿ ಹೇಳಿಕೊಂಡಿದ್ದಳು. ಕೂಡಲೇ ಎಚ್ಚೆತ್ತುಕೊಂಡ ಪೋಷಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಘಟನೆಯಲ್ಲಿ ಆರೋಪಿತರು ಏನೆಲ್ಲಾ ನಡೆಸಿದ್ದಾರೆ ಎಂದು ಬಾಲಕಿ ಸವಿವರವಾಗಿ ತಿಳಿಸಿದ್ದರೂ ಕೂಡಾ,ಆರೋಪಿಯ ಗುರುತು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಕಾಮುಕರ ಅಟ್ಟಹಾಸದ ಘಟನೆಯ ವೀಡಿಯೋ ಸಿಸಿ ಟಿವಿಯಲ್ಲೂ ಸೆರೆಯಾಗಿತ್ತು.
ಡಿಜಿಟಲ್ ಅತ್ಯಾಚಾರ ಎಂದರೇನು!?
ಡಿಜಿಟಲ್ ಎಂದರೆ ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಶೋಷಣೆ ಅಥವಾ ಲೈಂಗಿಕ ಕಿರುಕುಳ ಎಂದೇ ಅಂದುಕೊಳ್ಳುತ್ತಾರೆ. ಆದರೆ ಇಲ್ಲಿ ಇದಕ್ಕೆ ಬೇರೆಯದ್ದೇ ಅರ್ಥವಿದೆ. ಡಿಜಿಟ್ ಇಂಗಿಷ್ ನಲ್ಲಿ ಸಂಖ್ಯೆ. ಇಂಗ್ಲಿಷ್ ನಿಘಂಟಿನ ಪ್ರಕಾರ ಬೆರಳು, ಹೆಬ್ಬೆರಳು ಕಾಲ್ಬೆರಳು ಮೂಲಕ ಸಂತ್ರಸ್ತೆಯ ದೇಹ ಸ್ಪರ್ಶಸಿ ನೀಡುವ ಕಿರುಕುಳ ಅಥವಾ ಸಂಭೋಗ ಹಾಗೂ ಮಹಿಳೆಯ ಖಾಸಗಿ ಭಾಗದಲ್ಲಿ ಶಿಶ್ನದ ಬದಲು ಬೆರಳುಗಳನ್ನು ಉಪಯೋಗಿಸುವುದನ್ನೇ ಡಿಜಿಟಲ್ ರೇಪ್ ಎನ್ನಲಾಗುತ್ತದೆ.