ರಿಲಯನ್ಸ್ ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್

Share the Article

ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಕೋಟ್ಯಂತರ ಗ್ರಾಹಕರಿಗೆ ದಿಢೀರ್ ಶಾಕ್ ನೀಡಿದೆ.  ತನ್ನ ಪ್ರಮುಖ ಯೋಜನೆಯೊಂದರ ಬೆಲೆಯಲ್ಲಿ ಬರೋಬ್ಬರಿ 150 ರೂ. ಹೆಚ್ಚಳ ಮಾಡಿದೆ. ಈ ಬೆಲೆ ಏರಿಕೆಯು ಕೇವಲ ಒಂದೇ ಒಂದು ಯೋಜನೆಗೆ ಮಾತ್ರ ಅನ್ವಯಿಸುತ್ತದೆ. ಇನ್ನುಳಿದ ರೀಚಾರ್ಜ್ ಪ್ಲಾನ್‍ಗಳ ಬೆಲೆಗಳು ಮೊದಲನಂತೆಯೇ ಇರಲಿವೆ.

ರಿಲಯನ್ಸ್ ಜಿಯೋ ತನ್ನ 749 ರೂ. ಪ್ರಿಪೇಯ್ಡ್ ಯೋಜನೆ ನವೀಕರಿಸಿದ್ದು, ಪ್ರಿಪೇಯ್ಡ್ ಪ್ಯಾಕ್ ಅನ್ನು 150 ರೂ.ನಷ್ಟು ಪರಿಷ್ಕರಿಸಿದೆ. ಜಿಯೋಫೋನ್ ಬಳಕೆದಾರರಿಗೆ ಮಾತ್ರವಿರುವ ಈ ಯೋಜನೆ ಈಗ 899 ರೂ. ಆಗಿದೆ. ಜಿಯೋ ಯೋಜನೆಗಳು ಏರ್‌ಟೆಲ್ ಮತ್ತು ವೊಡಾಫೋನ್ ಎರಡಕ್ಕೂ ಹೋಲಿಸಿದರೆ ಅಗ್ಗವಾಗಿವೆ

ನವೆಂಬರ್ 2021 ರಿಂದ ಟೆಲಿಕಾಂ ಆಪರೇಟರ್‌ ಗಳ ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್‌ ಗಳು ದುಬಾರಿಯಾಗಿವೆ. ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಹೆಚ್ಚಿಸಿವೆ. ಈಗ ಗ್ರಾಹಕರಿಗೆ ಬಿಸಿ ತಟ್ಟಲಾರಂಭಿಸಿದೆ. ಟೆಲಿಕಾಂ ಕಂಪನಿಗಳು ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ಬೆಲೆ ಏರಿಕೆಯ ಗುರಿ ಹೊಂದಿವೆ.

Leave A Reply