ಜೂನ್ 27 ರಂದು ಬ್ಯಾಂಕ್ ಬಂದ್!!

Share the Article

ಪಿಂಚಣಿ ಸಮಸ್ಯೆಗಳಿಗೆ ಮತ್ತು ವಾರಕ್ಕೆ ಐದು ದಿನಗಳ ಕೆಲಸದ ಬೇಡಿಕೆಗೆ ಒತ್ತಾಯಿಸಿ, ಸಾರ್ವಜನಿಕ ವಲಯದ ಬ್ಯಾಂಕ್‌ಗಳ ನೌಕರರು ಜೂನ್ 27 ರಂದು ಮುಷ್ಕರ ನಡೆಸುವುದಾಗಿ ಕರೆ ನೀಡಿದ್ದಾರೆ.

ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ, ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ ಮತ್ತು ಬ್ಯಾಂಕ್ ಕಾರ್ಮಿಕರ ರಾಷ್ಟ್ರೀಯ ಸಂಘಟನೆ ಸೇರಿದಂತೆ ಒಂಬತ್ತು ಬ್ಯಾಂಕ್ ಒಕ್ಕೂಟಗಳ ಸಂಸ್ಥೆಯಾದ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ ಮುಷ್ಕರ ನಡೆಸುವುದಾಗಿ ಕರೆ ನೀಡಿದೆ.

ಎಲ್ಲಾ ಪಿಂಚಣಿದಾರರಿಗೆ ಪಿಂಚಣಿ ನವೀಕರಣ ಮತ್ತು ಪರಿಷ್ಕರಣೆ, ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ತೆಗೆದುಹಾಕುವುದು ಮತ್ತು ಎಲ್ಲಾ ಬ್ಯಾಂಕ್ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವುದೇ ಈ ಮುಷ್ಕರದ ಬೇಡಿಕೆಗಳು ಎಂದು ಯುಎಫ್‌ಬಿಯು ಸಭೆಯ ನಂತರ ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿಎಚ್ ವೆಂಕಟಾಚಲಂ ತಿಳಿಸಿದ್ದಾರೆ. ಇನ್ನು ಬ್ಯಾಂಕು ನೌಕರರಿಗೆ ಎರಡನೇ ಹಾಗೂ ನಾಲ್ಕನೇ ಶನಿವಾರ ಈಗಾಗಲೇ ರಜೆಯಿದ್ದು, ಇನ್ನು ಉಳಿದ ಶನಿವಾರಗಳಂದು ಅರ್ಧದಿನವಷ್ಟೇ ಬ್ಯಾಂಕ್ ತೆರೆದಿರುತ್ತದೆ. ಈ ಎರಡು ಶನಿವಾರ ಕೂಡ ರಜೆ ನೀಡಬೇಕು ಎಂಬುದು ಬ್ಯಾಂಕ್ ನೌಕರರ ಬೇಡಿಕೆಯಾಗಿದೆ.

ಒಕ್ಕೂಟಗಳ ಬೇಡಿಕೆಗಳಿಗೆ ಸರ್ಕಾರ ಮತ್ತು ಬ್ಯಾಂಕ್‌ಗಳ ಆಡಳಿತ ಮಂಡಳಿ ಸಂವೇದನಾಶೀಲವಾಗಿದ್ದರೆ, ದೇಶಾದ್ಯಂತ ಸುಮಾರು 7 ಲಕ್ಷ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಎಐಬಿಒಸಿ ಪ್ರಧಾನ ಕಾರ್ಯದರ್ಶಿ ಸೌಮ್ಯಾ ದತ್ತಾ ತಿಳಿಸಿದ್ದಾರೆ .

ಒಂದು ವೇಳೆ ಬ್ಯಾಂಕ್ ನೌಕರರು ಜೂ.27ರಂದು ಮುಷ್ಕರ ನಡೆಸಿದರೆ ಸತತ 3 ದಿನಗಳ ಕಾಲ ಬ್ಯಾಂಕ್ ಮುಚ್ಚಿರಲಿದೆ. ಜೂ.25 ನಾಲ್ಕನೇ ಶನಿವಾರ ಹಾಗೂ ಜೂ.26 ಭಾನುವಾರವಾದ ಕಾರಣ ಬ್ಯಾಂಕುಗಳಿಗೆ ರಜೆಯಿರುತ್ತದೆ. ಇದರಿಂದ ಬ್ಯಾಂಕ್ ಗ್ರಾಹಕರಿಗೆ ತೊಂದರೆಯುಂಟಾಗುವ ಸಾಧ್ಯತೆಯಿದೆ.

Leave A Reply