Home latest ಪ್ರೀತಿಯೇ ಸರ್ವಸ್ವ ಎಂದು ನಂಬಿದ್ದ ಜೋಡಿ, ಆತ್ಮಹತ್ಯೆಗೆ ನಿರ್ಧಾರ | ಆದರೆ ಕಥೆಯಲ್ಲಿ ಟ್ವಿಸ್ಟೊಂದಿತ್ತು …ಏನದು?

ಪ್ರೀತಿಯೇ ಸರ್ವಸ್ವ ಎಂದು ನಂಬಿದ್ದ ಜೋಡಿ, ಆತ್ಮಹತ್ಯೆಗೆ ನಿರ್ಧಾರ | ಆದರೆ ಕಥೆಯಲ್ಲಿ ಟ್ವಿಸ್ಟೊಂದಿತ್ತು …ಏನದು?

Hindu neighbor gifts plot of land

Hindu neighbour gifts land to Muslim journalist

ಪ್ರೇಮಕ್ಕೆ ಕಣ್ಣಿಲ್ಲ ಅಂತ ಹೇಳುತ್ತಾರೆ. ಹಾಗೆಯೇ ಪ್ರೀತೀನೇ ಎಲ್ಲಾ ಅಂತಾ ಸರ್ವತ್ಯಾಗ ಮಾಡಿ ಪ್ರೀತಿಸಬಾರದು. ಅಂದರೇ ಕುರುಡಾಗಿ ಪ್ರೀತಿಸಬಾರದು. ಹೌದು. ಇದೊಂದು ವಿಚಿತ್ರ ಪ್ರೀತಿ. ಬನ್ನಿ ಯಾಕೆ ಎಂದು ಹೇಳುತ್ತೇವೆ.

ಮದುವೆಯಾಗೋ ಮೊದಲು ಇವರಿಬ್ಬರು ಪ್ರೀತಿ ಮಾಡುತ್ತಿದ್ದರು. ಆದರೆ ಇಬ್ಬರಿಗೂ ಬೇರೆ ವ್ಯಕ್ತಿಗಳ ಜತೆ ಮದುವೆಯಾಗಿದೆ. ಆದರೂ ಮನಸ್ಸು ಹಳೇ ಪ್ರೇಮದ ಸೆಳೆತಕ್ಕೆ ಕೊಂಡೊಯ್ಯುತ್ತಿತ್ತು. ಕೂಡಿ ಬಾಳಲು ಸಮಾಜ ಒಪಲ್ಲ, ಅಷ್ಟು ಮಾತ್ರವಲ್ಲದೆ ಮಹಿಳೆಗೆ ಆರು ವರ್ಷದ ಮಗಳೂ ಇದ್ದಾಳೆ. ಸಮಾಜದ ಕಟ್ಟುಪಾಡುಗಳು ಎದುರಿಗೆ ಇದ್ದಾಗ ಮುಂದೇನು ಮಾಡುವುದು? ಕಟ್ಟಕಡೆಯದಾಗಿ ಜತೆಯಾಗಿ ಸಾಯೋಣ ಎಂದು ನಿರ್ಧಾರ ಮಾಡಿದ್ದಾರೆ.

ಯಮುನಾ ನದಿಗೆ ಇಬ್ಬರೂ ಒಟ್ಟಿಗೆ ಜಿಗಿಯುವ ದಿನಾಂಕ ಹಾಗೂ ಸ್ಥಳ ಕೂಡ ನಿಗದಿಯಾಗಿತ್ತು. ಆದರೆ ಇಡೀ ಕಥೆಗೆ ಟ್ವಿಸ್ಟ್ ಇರುವುದೇ ಇಲ್ಲಿ. ಪ್ರೀತಿಯ ಜಾಲದಲ್ಲಿದ್ದ ಮಹಿಳೆ, ನೀರಿಗೆ ಧುಮುಕಲು ಹಿಂದೇಟು ಹಾಕಲಿಲ್ಲ. ಆಕೆಯೇನೋ ಜಿಗಿದಳು. ಆದರೆ ಆಕೆಯ ಪ್ರಿಯಕರ ಮಾತ್ರ ಕೊನೆಯ ಕ್ಷಣದ ಬದಲಾವಣೆ ಮಾಡಿದ್ದ. ಆತ ಜಿಗಿಯದಿರಲು ನಿರ್ಧರಿಸಿದ್ದ. ಆದರೆ ಆತನನ್ನು ನಂಬಿದ್ದ ಆಕೆ ಮಾತ್ರ ಹಿಂದೆ ಮುಂದೆ ಯೋಚಿಸದೆ ಧುಮುಕಿದ್ದಳು. ಜಿಗಿದಾಗ ಆಕೆಯ ಎದೆಯೊಡೆಯುವುದೊಂದು ಬಾಕಿ. ನೀರಿಗೆ ಬೀಳುವಾಗಲೇ ಆತ ಮಾಡಿದ್ದ ಮೋಸ ಗೊತ್ತಾಗಿತ್ತು. ಹಾಗೆಂದು ಆಕೆ ನೀರು ಪಾಲಾಗಲಿಲ್ಲ. ಈಜು ಗೊತ್ತಿದ್ದ ಮಹಿಳೆ, ನದಿಯ ತೀರಕ್ಕೆ ಈಜಿ ಬಂದಿದ್ದಾಳೆ. ನಂತರ ಪೊಲೀಸ್ ಠಾಣೆಗೆ ತೆರಳಿ ಆತನ ವಿರುದ್ಧ ದೂರು ನೀಡಿದ್ದಾಳೆ.

ಆರು ವರ್ಷದ ಮಗಳಿರುವ 32 ವರ್ಷದ ಮಹಿಳೆ ಹಾಗೂ 30 ವರ್ಷದ ವಿವಾಹಿತ ಪುರುಷ ಚಂದು ಎಂಬಾತನ ಸಿನಿಮೀಯ ಲವ್ ಕಥೆ ಇದು. ಚಂದು ಉತ್ತರ ಪ್ರದೇಶದ ಝುನ್ಸಿಯ ನಿವಾಸಿ. ಮೇ 29ರಂದು ಈ ಘಟನೆ ನಡೆದಿದೆ.

ಕಳೆದ ಕೆಲವು ವರ್ಷಗಳಿಂದಲೂ ಚಂದು ಹಾಗೂ ಮಹಿಳೆ ಮಧ್ಯೆ ಸಂಬಂಧವಿತ್ತು. ಕೆಲವು ತಿಂಗಳ ಹಿಂದೆ ತನ್ನ ಮಗಳ ಜತೆ ಆಕೆ ಪುಣೆಗೆ ತೆರಳಿದ್ದಳು. ಆಗ ಚಂದು ಬೇರೊಬ್ಬಳ ಜತೆ ಮದುವೆಯಾಗಿದ್ದ. ಇದರ ಬಗ್ಗೆ ಮಹಿಳೆಗೆ ತಿಳಿಸಿರಲಿಲ್ಲ. ಮೇ 18ರಂದು ಆಕೆ ಮರಳಿ ಬಂದಾಗ, ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು.

ತನ್ನ ಹೆಂಡತಿಗೆ ವಿಚ್ಛೇದನ ನೀಡಿ, ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಚಂದು ಆಕೆಗೆ ಮಾತು ನೀಡಿದ್ದ. ಆದರೆ, ಹಾಗೆ ಮಾಡಲು ಮುಂದಾಗಿರಲಿಲ್ಲ. ಕೊನೆಗೆ ಈ ವಿಚಾರವಾಗಿ ಇಬ್ಬರ ಮಧ್ಯೆ ಅನೇಕ ಸಲ ಜಗಳವಾಗಿದೆ. ಅಂತಿಮವಾಗಿ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾರೆ. ಮೇ 29ರಂದು ನ್ಯೂ ಯಮುನಾ ಸೇತುವೆಯಲ್ಲಿ ಭೇಟಿ ಮಾಡಿದ್ದಾರೆ. ಮಹಿಳೆ ನೀಡಿರುವ ಹೇಳಿಕೆ ಪ್ರಕಾರ, ಆಕೆ ಮೊದಲು ನದಿಗೆ ಜಿಗಿದಿದ್ದಾಳೆ. ಆದರೆ ಚಂದು ಜಿಗಿದಿಲ್ಲ. ನೀರಿಗೆ ಬೀಳುವಾಗ ಆಕೆಗೆ ಇದು ಗೊತ್ತಾಗಿದೆ. ಕೂಡಲೇ ಹೇಗೋ ಈಜಿ ಆಕೆ ದಡ ಸೇರಿದ್ದಾಳೆ. ಸ್ಥಳಕ್ಕೆ ಬಂದ ಕಿದ್‌ಗಂಜ್ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.