ಗಾಯಗೊಂಡ ಕೋತಿ ತನ್ನ ಮರಿಯೊಂದಿಗೆ ಕ್ಲಿನಿಕ್ ಗೆ ಹೋಗಿ ಚಿಕಿತ್ಸೆ ಪಡೆದುಕೊಂಡ ಅಪರೂಪದ ವಿಡಿಯೋ ವೈರಲ್!

Share the Article

ಸಾಮಾನ್ಯವಾಗಿ ನಾವೆಲ್ಲರೂ ಮನುಷ್ಯರು ಆಸ್ಪತ್ರೆಗೆ ಹೋಗುವುದನ್ನು ನೋಡಿದ್ದೇವೆ. ಹಾಗೆಯೇ ದನ, ನಾಯಿಗಳಿಗೂ ವೈದ್ಯರು ಇದ್ದಾರೆ. ಆದರೆ ಇಲ್ಲೊಂದು ಕಡೆ ಚಿಕಿತ್ಸೆಗಾಗಿ ಕೋತಿ ತನ್ನ ಮರಿಯೊಂದಿಗೆ ಕ್ಲಿನಿಕ್ ಗೆ ಹೋದ ಅಪರೂಪದ ಘಟನೆ ನಡೆದಿದೆ.

ಹೌದು. ಗಾಯಗೊಂಡ ಕೋತಿಯೊಂದು ತನ್ನ ಮರಿಯೊಂದಿಗೆ ಸಹಾಯ ಕೋರಿ ವೈದ್ಯನ ಬಳಿ ಬಂದಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಘಟನೆ ಬಿಹಾರದ ರೋಹ್ತಾಸ್‌ನಲ್ಲಿ ನಡೆದಿದೆ.

ಗಾಯಗೊಂಡ ಕೋತಿ ನರಳಾಡುತ್ತಾ, ತನ್ನ ಮಗುವನ್ನು ಎದೆಗೆ ಅಪ್ಪಿಕೊಂಡು ಮಂಗಳವಾರ ಖಾಸಗಿ ಕ್ಲಿನಿಕ್‌ ಮುಂದೆ ಕುಳಿತಿತ್ತು. ಇದನ್ನು ಗಮನಿಸಿದ ವೈದ್ಯರು, ಚಿಕಿತ್ಸೆಯ ಸಹಾಯ ಕೋರುತ್ತಿದೆ ಎಂದು ಭಾವಿಸಿ, ಕ್ಲಿನಿಕ್ ಒಳಗೆ ಬರುವಂತೆ ಸೂಚಿಸಿದ್ದಾರೆ. ಈ ವೇಳೆ ಅಸಹಾಯಕತೆಯಿಂದ ಕೋತಿ ಒಳಗೆ ಬಂದು ಬೆಂಚ್ ಮೇಲೆ ಕುಳಿತುಕೊಂಡು ತನಗಾದ ಗಾಯವನ್ನು ತೋರಿಸಿದೆ. ತಾಯಿ ತಲೆಗೆ ಹಾಗೂ ಮಗುವಿನ ಕಾಲುಗಳಿಗೆ ಗಾಯವಾಗಿದ್ದನ್ನು ಗಮನಿಸಿದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ನಂತರ ಕೋತಿಗಳು ತಾವಾಗಿಯೇ ಕ್ಲಿನಿಕ್‌ನಿಂದ ಹೊರ ಹೋದವು ಎಂದು ವೈದ್ಯ ಡಾ.ಎಸ್.ಎಂ. ಖಾನ್ ತಿಳಿಸಿದ್ದಾರೆ.

ಈ ವೇಳೆಗಾಗಲೇ ಕೋತಿ ಚಿಕಿತ್ಸೆ ಪಡೆಯುತ್ತಿರುವುದನ್ನು ನೋಡಲು ಕ್ಲಿನಿಕ್‌ನ ಹೊರಗೆ ಅಪಾರ ಸಂಖ್ಯೆಯ ಜನರು ಜಮಾಯಿಸಿದ್ದು, ಈ ಎಲ್ಲಾ ದೃಶ್ಯಗಳು ವೈರಲ್ ಆದ ವಿಡಿಯೋದಲ್ಲಿ ನೋಡಬಹುದಾಗಿದೆ.

Leave A Reply