ಸಾರಿಗೆ ನಿವೃತ್ತ ನೌಕರರಿಗೆ ಸಿಹಿಸುದ್ದಿ !! | ನೌಕರರ ಮರು ನೇಮಕಾತಿಗೆ ಮುಂದಾದ ಇಲಾಖೆ

Share the Article

ಸಾರಿಗೆ ನೌಕರರಿಗೆ ಸಿಹಿಸುದ್ದಿಯೊಂದಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಅನುಸೂಚಿಗಳ ಕಾರ್ಯಾಚರಣೆಗೆ ಚಾಲನಾ ಸಿಬ್ಬಂದಿಗಳ ಅವಶ್ಯಕತೆಯಿರುವ ಹಿನ್ನೆಲೆಯಲ್ಲಿ ನಿವೃತ್ತ ನೌಕರರನ್ನು ಮತ್ತೆ ಕೆಲಸಕ್ಕೆ ನಿಯೋಜಿಸುವ ಕುರಿತು ಚಿಂತನೆ ನಡೆಸಲಾಗಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ವಯೋನಿವೃತ್ತಿ ಹೊಂದಿ 63 ವರ್ಷ ಮೀರದ ನಿವೃತ್ತ ಚಾಲಕರನ್ನು ಚಾಲಕ ಹುದ್ದೆಗೆ ಹಾಗೂ 65 ವರ್ಷ ಮೀರದ ನಿವೃತ್ತ ನಿರ್ವಾಹಕ/ ಸಂಚಾರ ನಿಯಂತ್ರಕರನ್ನು ನಿರ್ವಾಹಕ ಹುದ್ದೆಗೆ ತಾತ್ಕಾಲಿಕವಾಗಿ ನಿಯೋಜಿಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಆಸಕ್ತಿಯುಳ್ಳ ನಿವೃತ್ತ ಚಾಲಕರು, ನಿರ್ವಾಹಕರು ಮತ್ತು ಸಂಚಾರ ನಿಯಂತ್ರಕರು ಸೂಕ್ತ ದಾಖಲೆಗಳೊಂದಿಗೆ ಕೂಡಲೇ ತಾವು ಇಚ್ಚಿಸುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಯಾವುದೇ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಗೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಚೇರಿಯನ್ನು ಅಥವಾ ನಿಗಮದ kkrtc.karnataka.gov.in ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಲಾಗಿದೆ.

Leave A Reply