ಫಸ್ಟ್ ನೈಟ್ ಕಥೆ : ಚಿನ್ನಿಯ ಬರುವಿಕೆಗಾಗಿ ಕಾಯುತ್ತಿದ್ದ ವರ, ಆದರೆ ಚಿನ್ನದ ಜೊತೆಗೆ ಚಿನ್ನಿ ಎಸ್ಕೇಪ್!!!

ವರನೊಬ್ಬ ಮದುವೆ ಕೆಲಸ ಮುಗಿದ ಮೇಲೆ ಪ್ರಸ್ತದ ಕೋಣೆಯಲ್ಲಿ ವಧುವಿನ ಬರುವಿಕೆಗಾಗಿ ಆಸೆ ಕಣ್ಣುಗಳಿಂಂದ ಕುಳಿತಿದ್ದಾತನಿಗೆ ಬರಸಿಡಿಲಿನಂತೆ ವಧು ಚಳ್ಳೆಹಣ್ಣು ತಿನಿಸಿ ಪರಾರಿಯಾಗಿದ್ದಾಳೆ. ಹನಿಮೂನ್‌ನಲ್ಲಿ ಯಾವ ಜೋಡಿಯೂ ಮಾಡದ ರೀತಿಯಲ್ಲಿ ವಧು ಈ ವರನಿಗೆ ಮೋಸ ಮಾಡಿ, ಎಂದಿಗೂ ಮರೆಯಲಾಗದ ಗಾಯ ನೀಡಿ ಪರಾರಿಯಾಗಿದ್ದಾಳೆ.

 

ವರನು ಮಧುಚಂದ್ರಕ್ಕಾಗಿ ಮಧ್ಯರಾತ್ರಿಯವರೆಗೆ ವಧುವಿಗಾಗಿ ಕಾದು ಕುಳಿತಿದ್ದೇ ಬಂತು. ಆದರೆ ಈ ವೇಳೆ ವಧು ಪ್ಲ್ಯಾನ್ ಮಾಡಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾಳೆ. ಘಟನೆ ಬಳಿಕ ಎಲ್ಲರೂ ವರನನ್ನು ಗೇಲಿ ಮಾಡಿದ್ದಾರಂತೆ. ಈಗ ನ್ಯಾಯಕ್ಕಾಗಿ ಯುವಕ ಪೊಲೀಸರ ಮೊರೆ ಹೋಗಿದ್ದಾನೆ.

ಜೋಗಿ ಸಾಹ್ ಅವರ ಪುತ್ರ ಆನಂದ್ ಕುಮಾರ್ ಅವರು ಢಾಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ರಾಮನಾಥ್ ಸಾಹ್ ಅವರ ಪುತ್ರಿ ಮುನ್ನಿ ಕುಮಾರಿಯನ್ನು ಮೇ 9 ರಂದು ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದಾನೆ. ವಧುವನ್ನು ಕಳುಹಿಸಿಕೊಟ್ಟ ದಿನ ಆಕೆಯನ್ನು ಕರೆದುಕೊಂಡು ಬಂದಿದ್ದ ವರ, ಅದೇ ದಿನ ರಾತ್ರಿ 11 ಗಂಟೆಗೆ ಪ್ರಸ್ತದ ಕಾರ್ಯಕ್ರಮವಿತ್ತು. ಆದರೆ ವಧು ಹಾಗೂ ಆಕೆ ಸಹೋದರ ಕೃಷ್ಣ ಎಂಬಾತನೊಂದಿಗೆ ಹಾಗೂ ಇಬ್ಬರು ಸ್ನೇಹಿತರ ಜೊತೆಗೆ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾಳೆ. ಈ ಸಂಬಂಧ ವರ ಆನಂದ್ ಕುಮಾರ್ ಪಕ್ಷಿದಯಾಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಘಟ‌ನೆ ತಡವಾಗಿ ಬೆಳಕಿಗೆ ಬಂದಿದೆ. ತಡರಾತ್ರಿ ಕಾರೊಂದು ಹೋದ ಶಬ್ದ ಕೇಳಿ ಹೊರಗಡೆ ವರ ಆನಂದ್ ಬಂದಿದ್ದಾರೆ. ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಮೋತಿಹಾರಿಯ ಪಕ್ಷಿದಯಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಘಟನೆಯ ನಂತರ ವಧುವಿನ ಬಗ್ಗೆ ವರನ ಊರಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದರಿಂದ ವರ ಆನಂದ್ ಕುಮಾರ್ ಮನೆಯಿಂದ ಹೊರಬರಲು ಸಾಧ್ಯವಾಗದಷ್ಟು ಅವಮಾನಗೊಂಡಿದ್ದಾನಂತೆ. ಮನೆಯಿಂದ ಹೊರ ಬಂದ ಕೂಡಲೇ ಜನ ನೋಡುತ್ತಾರೆ, ತಮಾಷೆ ಮಾಡಿ ನಗುತ್ತಾರೆ ಎನ್ನುತ್ತಾರೆ ಆನಂದ್. ಇಂತಹ ಪರಿಸ್ಥಿತಿಯಲ್ಲಿ ಮನೆಯಿಂದ ಹೊರ ಬರುವುದೇ ಕಷ್ಟವಾಗಿದೆ ಎಂದಯ ಆನಂದ್ ನ್ಯಾಯಕ್ಕಾಗಿ ಪೊಲೀಸರಿಗೆ ಮನವಿ ಮಾಡಿದ್ದಾರೆ.

Leave A Reply

Your email address will not be published.