Home Breaking Entertainment News Kannada ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ನೂಪುರ್ ಶರ್ಮಾ ಪರ ಧ್ವನಿ ಎತ್ತಿದ...

ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ನೂಪುರ್ ಶರ್ಮಾ ಪರ ಧ್ವನಿ ಎತ್ತಿದ ಕಂಗನಾ ರಣಾವತ್!!

Hindu neighbor gifts plot of land

Hindu neighbour gifts land to Muslim journalist

ನೂಪುರ್ ಶರ್ಮಾ ಟಿವಿಯೊಂದರ ಚರ್ಚೆಯಲ್ಲಿ ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ರಾಷ್ಟ್ರಾದ್ಯಂತ ಸುದ್ದಿಯಾಗಿದ್ದರು. ಬಿಜೆಪಿಯ ವಿರುದ್ಧ ಟೀಕೆಯ ಮಹಾಪೂರವೇ ಹರಿದು ಬಂದಿತ್ತು. ಅವರ ಹೇಳಿಕೆಯಿಂದ ದೇಶಕ್ಕೆ, ಪಕ್ಷಕ್ಕೆ ಆಗುವ ಹಾನಿಯನ್ನು ತಪ್ಪಿಸುವುದಕ್ಕಾಗಿ ನೂಪುರ್ ಅವರನ್ನು ವಕ್ತಾರೆ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಇದೀಗ ಈ ನಡೆಗೆ ಬಾಲಿವುಡ್ ನಟಿ ಕಂಗನಾ ರಣಾವತ್ ವಿರೋಧಿಸಿ, ನೂಪುರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕಂಗನಾ, ‘ನೂಪುರ್ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಅರ್ಹಳು. ಆಕೆಯನ್ನು ಗುರಿಯಾಗಿಸಿಕೊಂಡು ಎಲ್ಲಾ ರೀತಿಯ ಬೆದರಿಕೆಗಳನ್ನು
ಹಾಕಲಾಗಿದೆ. ಪ್ರತಿ ಬಾರಿ ಹಿಂದೂ ದೇವರುಗಳನ್ನು
ಅವಮಾನಿಸಿದಾಗ ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ. ಇದು ಅಫ್ಘಾನಿಸ್ತಾನ ಅಲ್ಲ, ನಾವು ಸರಿಯಾಗಿ
ಕಾರ್ಯನಿರ್ವಹಿಸುವ ಸರ್ಕಾರವನ್ನು ಹೊಂದಿದ್ದೇವೆ. ಅದನ್ನು ಪ್ರಜಾಪ್ರಭುತ್ವ ಎಂಬ ಪ್ರಕ್ರಿಯೆಯೊಂದಿಗೆ ಆಯ್ಕೆ ಮಾಡಲಾಗಿದೆ. ಹೀಗೆ ಡಾನ್ ಗಳನ್ನು ಬಿಟ್ಟು ನೂಪರ್ ಅವರನ್ನು ಬೆದರಿಸುವ ಕೆಲಸವಾಗುತ್ತಿದೆ. ಇದನ್ನು ನಾನು ಖಂಡಿಸುತ್ತೇನೆ. ಇದು ಮರೆತು ಬಿಡುವವರಿಗೆ ಕೇವಲ ನೆನಪಿಸಿದ್ದು ಅಷ್ಟೇ’ ಎಂದು ಬರೆಯುವ ಮೂಲಕ ನೂಪುರ್ ಶರ್ಮಾ ಪರ ಧ್ವನಿ ಎತ್ತಿದ್ದಾರೆ.